ದಿನೇಶ್ ಕುಟುಂಬಕ್ಕೂ 25 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ: ಸಿದ್ಧರಾಮಯ್ಯ: ಮೃತ ದಿನೇಶ್ ಮನೆಗೆ ಭೇಟಿ:₹ 1 ಲಕ್ಷ ಸಹಾಯ ಧನ ನೀಡಿ ಸಾಂತ್ವನ.

 

 

 

ಬೆಳ್ತಂಗಡಿ:ಕೊಲೆಗೀಡಾದ ದಿನೇಶ್ ಹಾಗೂ ನರಗುಂದದ ಮುಸ್ಲಿಂ ಯುವಕ ಸಮೀರ್ ನಿಗೂ 25 ಲಕ್ಷ ಪರಿಹಾರ ಶಿವಮೊಗ್ಗದ ಹರ್ಷನಿಗೆ ನೀಡಿದಂತೆ ನೀಡಬೇಕು ಎಂದು ಅಸೆಂಬ್ಲಿಯಲ್ಲಿ  ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಮೃತ ದಿನೇಶ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಮಾದ್ಯಮದವರೊಂದಿಗೆ ಮಾತನಾಡಿದರು.

 

 

 

ಒಬ್ಬನೇ ಮಗ ಕೊಲೆ ಆಗಿದ್ದರಿಂದ ಕುಟುಂಬಕ್ಕೆ ಬಹಳ ತೊಂದರೆ ಆಗಿದೆ.ಸರ್ಕಾರ 4ಲಕ್ಷ ಪರಿಹಾರ ಕೊಟ್ಟಿದೆ ಅದರೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ25ಲಕ್ಷ ಪರಿಹಾರ ನೀಡಿದ್ದಾರೆ .ದಿನೇಶನಿಗೂ 25ಲಕ್ಷ ಪರಿಹಾರ ಕೊಡಬೇಕಿತ್ತು ಅದೇ ರೀತಿ ನರಗುಂದದಲ್ಲಿ ಒಬ್ಬ ಮುಸ್ಲಿಂ ಯುವಕನನ್ನು ಕೊಲೆ ಮಾಡಿದ್ದಾರೆ ದಿನೇಶನನ್ನು ಕೊಲೆ ಮಾಡಿದವನು ಭಜರಂಗದಳದವನು ಮುಸ್ಲಿಂ ಯುವಕನನ್ನು ಕೊಲೆ ಮಾಡಿದವನು ಕೂಡ ರಾಮಸೇನೆಗೆ ಸೇರಿದವನು ನಾನು ಅಲ್ಲಿಗೂ ಭೇಟಿ ನೀಡಿದ್ದೇನೆ ಸರ್ಕಾರ ಮಾತ್ರ ಇವರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದೆ.

 

ಕೊಲೆಗೀಡಾದ ದಿನೇಶ್ ಹಾಗೂ ನರಗುಂದದ ಮುಸ್ಲಿಂ ಯುವಕ ಸಮೀರ್ ನಿಗೂ 25 ಲಕ್ಷ ಪರಿಹಾರ ಹರ್ಷನಿಗೆ ನೀಡಿದಂತೆ ನೀಡಬೇಕು ಎಂದು ಅಸೆಂಬ್ಲಿಯಲ್ಲಿ ಒತ್ತಾಯ ಮಾಡುತ್ತೇನೆ.ಅದೇ ರೀತಿ ಕೊಲೆ ಮಾಡಿದವರ ಮೇಲೆ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ಆಗುವ ರೀತಿ ಆಗಬೇಕು ಎನ್ನುವ ಬಗ್ಗೆಯೂ ಚರ್ಚಿಸುತ್ತೇನೆ ಎಂದರು.ಕಾನೂನಿನ ಮೇಲೆ ಭಯ ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತವೆ .ಇದಕ್ಕೆ ಸರ್ಕಾರ ಭಿಗಿಯಾದ ಕ್ರಮ ತಗೊಳ್ಳುತ್ತಿಲ್ಲ ಮುಖ್ಯಮಂತ್ರಿ, ಗೃಹಸಚಿವರು ಈಶ್ವರಪ್ಪ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ಕೊಡುವುದರಿಂದ ಜನರು ಕಾನೂನನ್ನು ಕೈಗೆ ತಗೊಳ್ಳುವ ಹಂತಕ್ಕೆ ಬಂದು ಮುಟ್ಟಿದೆ.ಯಾರ ಕೊಲೆ ನಡೆದರೂ ಪ್ರಚೋದನೆ ಕೊಡಬಾರದು ಎಲ್ಲವನ್ನೂ ಖಂಡಿಸಬೇಕಾಗುತ್ತದೆ. ಈಗಾಗಲೇ ಪಕ್ಷದ ಮುಖಂಡರೊಂದಿಗೆ ದಿನೇಶ್ ಮನೆಗೆ ಭೇಟಿ ನೀಡಿ ಅವರ ಮನೆಯವರಿಗೆ ಸಾಂತ್ವನ ಹೇಳಿ ವಯಕ್ತಿಕವಾಗಿ ಒಂದು ಲಕ್ಷ ರೂ ನೀಡಿದ್ದೇನೆ.ಸತ್ತು ಹೋದವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.

 

 

 

ಕನ್ಯಾಡಿಯಿಂದ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರ ಕಛೇರಿಗೆ ಭೇಟಿ ನೀಡಿದ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಸಮಲೋಚನಾ ಸಭೆ ನಡೆಸಿ ಮನವಿಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ವಿ.ಪ. ಸ ಐವನ್ ಡಿಸೋಜ,ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ವಸಂತ ಬಂಗೇರ, ಪ್ರಮುಖರಾದ ಶೈಲೇಶ್ ಕುಮಾರ್ , ರಂಜನ್ ಗೌಡ , ಶೇಖರ್ ಕುಕ್ಕೇಡಿ, ನಮಿತಾ ಪೂಜಾರಿ, ಮನೋಹರ್ ಇಳಂತಿಲ, ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

error: Content is protected !!