ಬೆಳ್ತಂಗಡಿ: 7 ತಿಂಗಳು ಗರ್ಭಿಣಿ ಮಹಿಳೆಗೆ 108 ಆಂಬ್ಯುಲೆನ್ಸ್ ನಲ್ಲಿ ಹೆರಿಗೆ ಸಮಯ ಪ್ರಜ್ಞೆ ಮೆರೆದ ಅಂಬುಲೆನ್ಸ್ ಸಿಬ್ಬಂದಿಗಳು

 

 

ಬೆಳ್ತಂಗಡಿ: ತಾಲ್ಲೂಕಿನ ನಾವೂರಿನ‌ ಮಹಾಬಲ ಇವರ ಪತ್ನಿ ಹರಿಣಾಕ್ಷಿ  ಮಾ 16 ರ ಸಂಜೆ ಹೆರಿಗೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದಿದ್ದರು, ಆದರೆ ಇನ್ನೂ 7 ತಿಂಗಳಾಗದ ಕಾರಣ ಬೆಳ್ತಂಗಡಿ ಆಸ್ಪತ್ರೆಯಿಂದ ರಾತ್ರಿ ಸುಮಾರು 7.40 ರ ಸಮಯದಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಕಳುಹಿಸಿರುತ್ತಾರೆ. ಆಂಬುಲೆನ್ಸ್ ವಗ್ಗ ಮಾರ್ಗ ತಲುಪುತ್ತಿದಂತೆ
ತೀವ್ರತರನಾದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹರಿಣಾಕ್ಷಿಯವರನ್ನು ಕಂಡು ಸಮಯಪ್ರಜ್ಞೆ ಮೆರದು ತಕ್ಷಣ ಕಾರ್ಯಪ್ರವೃತರಾದ ತುತು೯ ತಂತ್ರಜ್ಞರಾದ ಕೇಶವ. ಕೆ ಇವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದರು ಗಂಡು ಮಗು ಮತ್ತು ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೋಶನ್ ಗೆ ದಾಖಲಾತಿ ಮಾಡಿದ್ದಾರೆ. ಇದು‌ ಕೇಶವ.ಕೆ‌ ಮಾಡಿದ 52ನೇ ಯಶಸ್ವಿ ಹೆರಿಗೆ ಯಾಗಿರುತ್ತದೆ. ಆ್ಯಂಬುಲೆನ್ಸ್ ಡ್ರೈವರ್ ಮಲಿಯಪ್ಪಯ್ಯ ಸಹಕರಿಸಿದರು..
ಸಮಯಪ್ರಜ್ಞೆ ಮೆರೆದ ಆಂಬುಲೆನ್ಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!