ಕೊಲೆಯಾದ ಕನ್ಯಾಡಿ ನಿವಾಸಿ ದಿನೇಶ್ ಮನೆಗೆ ಮಾ.19ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ: ಗುರುವಾಯನ ಕೆರೆಗೆ ವಿಷ ಹಾಕಿದರೂ ಕ್ರಮಕೈಗೊಳ್ಳದ ತಾಲೂಕು ಆಡಳಿತ ಕ್ರಮಕ್ಕೆ ಖಂಡನೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ತಾಲೂಕಿನ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆ, ಮುಖ್ಯಮಂತ್ರಿ ಸಹಿತ ಹಿರಿಯ ಅಧಿಕಾರಿಗಳಿಗೆ ದೂರು: ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ

 

 

 

 

ಬೆಳ್ತಂಗಡಿ: ಭಜರಂಗದಳದ ಮುಖಂಡ ಕೃಷ್ಣ ಇವರಿಂದ ಬರ್ಬರವಾಗಿ ಕೊಲೆಗೈಯಲ್ಪಟ್ಟ ಪ.ಪಂಗಡಕ್ಕೆ ಸೇರಿದ ಧರ್ಮಸ್ಥಳ ಕನ್ಯಾಡಿ ನಿವಾಸಿ ದಿನೇಶ್ ಮನೆಗೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾ.19ರಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಸಿದ್ಧರಾಮಯ್ಯನವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಮೃತನ ತಾಯಿ ಪದ್ಮಾವತಿಯವರು ಮನವಿ ಮಾಡಿದ ತಕ್ಷಣ ಸಿದ್ಧರಾಮಯ್ಯನವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದಂತೆ ಮೃತರ ಕುಟುಂಬಕ್ಕೆ 4.15 ಲಕ್ಷ ರೂ. ಮಂಜೂರುಗೊಳಿಸಿದ್ದು ಇನ್ನು 4.1 ಲಕ್ಷ ರೂ. ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಅಲ್ಲದೆ ಮೃತರ ಪತ್ನಿಗೆ ಸರಕಾರಿ ಉದ್ಯೋಗ ದೊರಕಲಿದೆ. ಮೃತರ ಕುಟುಂಬದ ಪರವಾಗಿ ನಿಂತ ಸಿದ್ಧರಾಮಯ್ಯನವರಿಗೆ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಪತ್ರಿಕಾಗೊಷ್ಠಿಯ ಮೂಲಕ ನನ್ನನ್ನು ಅಣೆ ಪ್ರಮಾಣಕ್ಕೆ ಕರೆದಿರುವ ವಿಚಾರ ತಮಗೆಲ್ಲ ತಿಳಿದಿದೆ. ಭಾಸ್ಕರನಂತಹ ನಾಲಾಯಕ್ ವ್ಯಕ್ತಿಗೆ ನನ್ನನ್ನು ಪ್ರಮಾಣಕ್ಕೆ ಕರೆಯುವ ಯೋಗ್ಯತೆಯೇ ಇಲ್ಲ. ಆತ ಧರ್ಮಸ್ಥಳ ಗ್ರಾಮದಲ್ಲಿ ಮಂಜುನಾಥನ ಸನ್ನಿಧಿಯಲ್ಲಿ ಅನೇಕ ವರ್ಷಗಳಿಂದ ಜೀವಿಸುತ್ತಾ ಬಂದಿದ್ದಾನೆ ಯಾವ ರೀತಿಯಲ್ಲಿ ಇಷ್ಟು ವರ್ಷ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಜೀವನ ಸಾಗಿಸಿದ್ದಾನೆ ಎಂಬುದು ಮಂಜುನಾಥ ಸ್ವಾಮಿಗೆ ತಿಳಿದ ವಿಚಾರ. ನಾನು ತಪ್ಪು ಮಾಡಿದಲ್ಲಿ ನನಗೆ. ಭಾಸ್ಕರ ತಪ್ಪು ಮಾಡಿದ್ದಲ್ಲಿ ಅವನಿಗೆ ಶ್ರೀ ಮಂಜುನಾಥ ಸ್ವಾಮಿ ಮತ್ತು ಕಾನತ್ತೂರಿನ ನಾಲ್ವರ್ ದೈವಗಳಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಅಕ್ರಮ ಸಕ್ರಮ ಕಡತ ಯೋಜನೆಯಲ್ಲಿ ತಹಶೀಲ್ದಾರ್ ಸಹಿತ ತಾಲೂಕಿನ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲದೆ ಬಾಗಿಲು ಹಾಕಿ ಬೈಠಕ್ ನಡೆಸುತ್ತಿರುವ ಬಗ್ಗೆ ಸಂತ್ರಸ್ತರು ದೂರು ನೀಡಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾಧಿಕಾರಿಗಳಿಗೆ, ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಲಿದ್ದೇನೆ. ಮುಂದೆ ಈ ರೀತಿಯಲ್ಲಿ ಬೈಠಕ್ ಮಾಡಿದರೆ ಕಾಂಗ್ರೇಸ್ ಪಕ್ಷದ ವತಿಯಿಂದ ತಾಲೂಕು ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಕೆರೆಗೆ ವಿಷಯುಕ್ತ ಕೆಮಿಕಲ್ ಮಿಶ್ರಿತ ನೀರು ಸೇರಿದ್ದರಿಂದ ಮೀನುಗಳ ಮಾರಣಹೋಮ ನಡೆದಿದೆ ಈ ಬಗ್ಗೆ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಯವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸುತ್ತೇನೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಂಜನ್ ಜಿ ಗೌಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ವಕೀಲರಾದ ಮನೋಹರ್ ಕುಮಾರ್ ಇಳಂತಿಲ, ಉಪಸ್ಥಿತರಿದ್ದರು.

error: Content is protected !!