5 ವರ್ಷದ ಅವಧಿಯಲ್ಲಿ‌‌ ಕಿಂಡಿ‌ ಅಣೆಕಟ್ಟು ನಿರ್ಮಾಣದ ಮೂಲಕ ತಾಲೂಕಿನ 400 ಕೀ.ಮೀ. ಪ್ರದೇಶದಲ್ಲಿ ನೀರು ನಿಲ್ಲಿಸುವ ಗುರಿ: ಅಂತರ್ಜಲ ವೃದ್ಧಿಯಾಗಿ ಯುವಕರೂ ಕೃಷಿ ಚಟುವಟಿಕೆಗಳಿಗೆ ಮರಳುವ ವಿಶ್ವಾಸ: ತಾಲೂಕಿನ ವಿವಿಧೆಡೆ ₹ 22.10ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ಹರೀಶ್ ಪೂಂಜ ಹೇಳಿಕೆ

 

 

ಬೆಳ್ತಂಗಡಿ: ತಾಲೂಕಿನಲ್ಲಿ 5 ವರ್ಷದ ಅವಧಿಯಲ್ಲಿ 400 ಕೀ.ಮೀ. ಪ್ರದೇಶದಲ್ಲಿ ನೀರು ನಿಲ್ಲುವ ಗುರಿಯನ್ನು ಹೊಂದಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದ್ದು ಇದರಿಂದ ಅಂತರ್ಜಲ ಹೆಚ್ಚಾಗಿ ಕೃಷಿಕರಿಗೆ ವರದಾನವಾಗಲಿದೆ. ಜೊತೆಗೆ ಗ್ರಾಮೀಣ ಭಾಗದ ಜನರ ಸಂಪರ್ಕ ಕೊಂಡಿಯಾಗಿ ಸೇತುವೆಗಳು ಉಪಯೋಗವಾಗಲಿದ್ದು ಪಶ್ಚಿಮ ವಾಹಿನಿ ಯೋಜನೆಯಲ್ಲಿ ತಾಲೂಕಿಗೆ 37 ಕೋಟಿ. ರೂ. ಅನುದಾನ ಕಿಂಡಿ ಅಣೆಕಟ್ಟಿಗೆ ಮಂಜೂರಾಗಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶುಕ್ರವಾರ ತಾಲೂಕಿನ ವಿವಿಧೆಡೆ 22.10ಕೋಟಿ ರೂ. ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮತನಾಡಿ ಅಂತರ್ಜಲ ಹೆಚ್ಚಾದಂತೆ ಯುವಕರಲ್ಲಿಯೂ ಕೃಷಿ ಮಾಡುವ ಆಸಕ್ತಿ ಹೆಚ್ಚಗಬಹುದು. ಜಿಲ್ಲೆಯಲ್ಲೇ ಅತೀ ಹೆಚ್ಚು ಕಿಂಡಿ ಅಣೆಕಟ್ಟುಗಳು ತಾಲೂಕಿಗೆ ಮಂಜೂರಾಗಿದ್ದು ಬಹುತೇಕ ಕಾಮಗಾರಿಗಳು ಎಪ್ರೀಲ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಕಾಮಗಾರಿಗಳು ಗುಣಮಟ್ಟದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯರಲ್ಲಿದ್ದು ಮೊಸರಲ್ಲಿ ಕಲ್ಲು ಹುಡುಕುವ ಟೀಕಕಾರರಿಗೆ ಕಳಪೆ ಕಾಮಗಾರಿ ನಡೆದಿದೆ ಎಂಬ ಮಾತನ್ನು ನೀಡಲು ಸ್ಥಳೀಯರು ಅವಕಾಶ ನೀಡಬೇಡಿ, ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಸಹಕರಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ನಡ ಗ್ರಾಮದ ಕುತ್ರೊಟ್ಟು –ಚಂದ್ಕೂರು ಸಂಪರ್ಕ ಸೇತುವೆ 4 ಕೋಟಿ ರೂ., ನಡ ಗ್ರಾಮದ ಮೂಡಾಯಿಬೆಟ್ಟು- ಭೊಜಾರ ಕೈಕಂಬ 1.95 ಕೋಟಿ ರೂ., ಇಂದಬೆಟ್ಟು ಗ್ರಾಮದ ಅಲೆಂಜಕಟ್ಟ –ಮೋಟೆತಡ್ಕ 2.45ಕೋಟಿ ರೂ., ಮಲವಂತಿಗೆ ಗ್ರಾಮದ ನೇತ್ರಕೊಂಡಂಗೆ 2.5ಕೋಟಿ ರೂ., ನಿಡ್ಲೆ ಗ್ರಾಮದ ಕುದ್ರಾಯ-ವಾಲ್ಯ 4.05 ಕೋಟಿ ರೂ., ಕೊಕ್ಕಡ ಗ್ರಾಮದ ಕೊಡಂಗೇರಿ –ಉಪ್ಪರಹಳ್ಳ 3.35 ಕೋಟಿ ರೂ., ಶಿಬಾಜೆ ಗ್ರಾಮದ ಬರ್ಕುಳಕಟ್ಟ ಎಂಬಲ್ಲಿ 3.80 ಕೋಟಿ ರೂ., ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ನಡ ಗ್ರಾ.ಪಂ ಅಧ್ಯಕ್ಷ ವಿಜಯ ಗೌಡ, ಉಪಾಧ್ಯಕ್ಷೆ ವಿನುತಾ, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್, ಲಾಯಿಲ ಗ್ರಾ.ಪಂ ಅಧ್ಯಕ್ಷೆ ಆಶಾ ಸಲ್ಡಾನ, ಉಪಾಧ್ಯಕ್ಷ ಗಣೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ಕುಮಾರ್ ಅರಿಗ, ಲಾಯಿಲ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ತಾ.ಪಂ ಮಾಜಿ ಸದಸ್ಯರುಗಳಾದ ಸುಧಾಕರ ಎಲ್., ಮಹಾಬಲ ಗೌಡ, ಲಾಯಿಲ ಗ್ರಾ.ಪಂ ಸದಸ್ಯರಾದ ಮೋಹನ್ ದಾಸ್, ಪ್ರಸಾದ್ ಶೆಟ್ಟಿ, ಬೆಳ್ತಂಗಡಿ ಸಿ.ಎ ಬ್ಯಾಂಕ್ ನಿರ್ದೇಶಕ ಶ್ರೀನಾಥ್, ನಡ ಗ್ರಾ.ಪಂ ಅಧ್ಯಕ್ಷ ವಿಜಯ್ ಕರುಣಾಕರ್ ಗೌಡ, ಸಣ್ಣ ನೀರಾವರಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಷ್ಣು ರಾವ್, ಇಂಜಿನಿಯರ್ ರಾಕೇಶ್, ಮತ್ತು ಗ್ರಾ.ಪಂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!