ಬೆಳ್ತಂಗಡಿ: ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರಿಗೆ ಅನಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಈ ಕ್ಷೇತ್ರದ ಶಾಸಕನಾದ ಮೊದಲ ವರ್ಷದಲ್ಲಿ ತಾಲೂಕಿನ ಎರಡು ಉಪ ವಿಭಾಗಗಳನ್ನು ಸರ್ವೇ ಕಾರ್ಯ ನಡೆಸಿದಾಗ ಸುಮಾರು 538 ವಿದ್ಯುತ್ ಪರಿವರ್ತಕಗಳು ಬೇಕೆನ್ನುವ ನಿಟ್ಟಿನಲ್ಲಿ ಏಕ ಕಾಲದಲ್ಲಿ ಇದಕ್ಕೆ ಅನುಮೋದನೆ ನೀಡ ಬೇಕು ಎಂದು ಆಗಿನ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರಲ್ಲಿ ವಿನಂತಿ ಮಾಡಿದಾಗ ಅದಕ್ಕೆ ಸುಮಾರು 32 ಕೋಟಿಯಲ್ಲಿ 538 ಟ್ರಾನ್ಸ್ ಫಾರ್ಮರ್ ಗಳಿಗೆ ಅನುಮೋದನೆ ಕೊಟ್ಟು ಜಿಲ್ಲಾ ಉಸ್ತುವಾರಿ ಹಾಗೂ ಇಂದನ ಸಚಿವರಾದ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ನಾಳೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ.ಈ ಕಾರ್ಯಕ್ರಮದಲ್ಲಿ ತಾಲೂಕಿನ ರೈತರು ಭಾಗವಹಿಸಲಿದ್ದಾರೆ ಎಂದರು.