ಬೆಳ್ತಂಗಡಿಯಲ್ಲಿ ತೆಂಗಿನ ಕಾಯಿ ಒಡೆದದ್ದು ಮಾತ್ರ ಮಾಜಿ ಶಾಸಕರ ಸಾಧನೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ರಾಜ್ಯದಲ್ಲಿ ಮಾದರಿಯಾದವರು ಶಾಸಕ ಹರೀಶ್ ಪೂಂಜ ಜನಜಾಗೃತಿ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹರಿಕೃಷ್ಣ ಬಂಟ್ವಾಳ್.

 

 

ಬೆಳ್ತಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಪತನದತ್ತ ಸಾಗುತಿದ್ದು ಅದರ ನಾಯಕರಿಗೆ ಏನೂ ಮಾಡುವುದೆಂದು ತೋಚದೇ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತಿದ್ದಾರೆ ಎಂದು ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್‌ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ ಧರ್ಮ ಭಾಷೆಯನ್ನು ವಿಭಜಿಸಿ ಒಂದು ವೇಳೆ ಅವರೆಲ್ಲರೂ ಹಿಂದೂ ಮತ್ತು ನಾಗರೀಕತೆಯ ಮೂಲಕ ಒಂದಾದರೆ ಭಾರತವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ದುಷ್ಟ ಬುದ್ಧಿಯ ಬೀಜ ಬಿತ್ತಿದವರು ಇಂಗ್ಲೀಷರು ಅದರೆ ಅವರು ಬಿತ್ತಿದ ವಿಷ ಬೀಜಕ್ಕೆ ಗೊಬ್ಬರ ನೀರು ಹಾಕಿ ಪೊಷಿಸುವವರು ಕಾಂಗ್ರೆಸ್ಸಿಗರು. ರಾಷ್ಟ್ರದ ಉದ್ಧಗಲದಲ್ಲಿ ಎಲ್ಲಿಯೂ ತನ್ನ ಹಿಡಿತ ಸಾಧಿಸಲು ಸಾಧ್ಯವಾಗದೇ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಧಿಕಾರ ಹಿಡಿಯಲೇ ಬೇಕೆಂಬ ಹುಚ್ಚು ಹಂಬಲಕ್ಕೆ ಕಾಂಗ್ರೆಸ್ ಬಿದ್ದು ವಿವಿಧ ವಿಚಾರಗಳನ್ನು ಮುಂದಿಟ್ಟು ಗಲಾಟೆ ಎಬ್ಬಿಸಿ ಜನರಲ್ಲಿ ಭಯ ಹುಟ್ಟಿಸುವಂತಹ ನೀಚ ಕೆಲಸಕ್ಕೆ ಕೈ ಹಾಕಿದೆ. ಹಿಜಾಬ್ ವಿಚಾರ, ಶಿವಮೊಗ್ಗ ಹರ್ಷ ಕೊಲೆ ಪ್ರಕರಣಗಳನ್ನು‌ಮುಂದಿಟ್ಟು ಸದನದಲ್ಲಿ ಗದ್ದಲ ಎಬ್ಬಿಸಿ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಾರೆ.ಇಷ್ಟರವರೆಗೆ ಇರದ ಹಿಜಾಬ್ ಪ್ರಕರಣಗಳ ಮೂಲಕ ಶಿಕ್ಷಣ ವ್ಯವಸ್ಥೆಗಳನ್ನು ಹಾಳು ಮಾಡುವಂತಹ ಕೆಟ್ಟ ವ್ಯವಸ್ಥೆಗೆ ಕೈ ಹಾಕಿದ್ದಾರೆ.ಬೆಳ್ತಂಗಡಿ ಕಾಂಗ್ರೆಸಿಗರಿಗೆ ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕೆಲಸಗಳು ಸಹಿಸಲು ಸಾಧ್ಯವಾಗದೇ ಇರುವುದರಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ನಿಂತು ಏನೇನೋ ಹೇಳುತ್ತಾರೆ. ಕೆಲವರೆಲ್ಲ ಅಭಿವೃದ್ಧಿ ಮಾಡುತ್ತೇವೆ ಎಂದು ತೆಂಗಿನ ಕಾಯಿ ಒಡೆದದ್ದೆ ಒಡೆದದ್ದು ಅದರೆ ಅವರು ತೆಂಗಿನ ಕಾಯಿ ಮಾತ್ರ ಒಡೆದದ್ದು  ಅವರು ತೆಂಗಿನಕಾಯಿ ಒಡೆದ ರಸ್ತೆಗಳನ್ನು ಶಾಸಕ ಹರೀಶ್ ಪೂಂಜ ಅಭಿವೃದ್ಧಿ ಪಡಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಶಾಸಕರನ್ನು ಪರೋಕ್ಷವಾಗಿ ಟೀಕಿಸಿದರು.

 

ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಒಳ್ಳೆಯ ರೀತಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಜನರ ಮನೆಮನೆಯ ಮನಮನಗಳಿಗೆ ಮುಟ್ಟುವಂತಹ ಕಾರ್ಯಕ್ರಮ ಸರ್ಕಾರದಿಂದ ಆಗುತ್ತಿದೆ.ಅಂತಹ ಸಂದರ್ಭದಲ್ಲಿ ದೇಶದ ವಿವಿಧ ಕಡೆಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಸಮೀಕ್ಷೆ ಬಂದಾಗ ಯಾವ ರೀತಿ ಸಮಾಜವನ್ನು ಒಡೆಯಬಹುದು ಎಂಬ ಷಡ್ಯಂತ್ರದ ಭಾಗವಾಗಿ ಸಮಾಜದ ಸ್ವಾಸ್ಥ್ಯ ವನ್ನು ಹಾಳುಮಾಡುವ ಪ್ರಯತ್ನ  ಕಾಂಗ್ರೆಸ್ ನಿಂದ ನಡೆಯುತಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸೇರಿದಂತೆ ಬಿಜೆಪಿ ಪ್ರಮುಖರು ಹಾಗೂ ಯುವ ಮೋರ್ಚಾ ಮಹಿಳಾ ಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀನಿವಾಸ ರಾವ್ ಧರ್ಮಸ್ಥಳ ಸ್ವಾಗತಿಸಿ ಧನ್ಯವಾದವಿತ್ತರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!