ಮೃತ ದಿನೇಶ್ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾಜಿ ಶಾಸಕ ವಸಂತ ಬಂಗೇರ ಅಭಿನಂದನೆ

 

 

ಬೆಳ್ತಂಗಡಿ: ತಾಲೂಕಿನ ಕನ್ಯಾಡಿಯ ದಿನೇಶ್ ಎಂಬ ಯುವಕನನ್ನು ಕೊಲೆಗೈದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಮತ್ತು ಸರಕಾರದಿಂದ ಪರಿಹಾರ ದೊರಕಿಸಿಕೊಡುವಂತೆ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಮೃತ ದಿನೇಶ್ ಮನೆಯವರು ಮಂಗಳೂರಿನಲ್ಲಿ ಭೇಟಿ ನೀಡಿ ಮಾಡಿದ ಮನವಿಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಸ್ಪಂದಿಸಿದ್ದಕ್ಕಾಗಿ ಮಾಜಿ ಶಾಸಕ ವಸಂತ ಬಂಗೇರ ಅಭಿನಂದನೆ ಸಲ್ಲಿಸಿದ್ದಾರೆ .ನನ್ನ ಮತ್ತು ಮನೆಯವರ ಮನವಿಗೆ ತಕ್ಷಣ ಸ್ಪಂದಿಸಿ ಅವರು ದ.ಕ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಮೃತನ ಕುಟುಂಬದ ಸದಸ್ಯರಿಗೆ ಸರಕಾರಿ ಉದ್ಯೋಗ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿರುತ್ತಾರೆ ಅದರಂತೆ ಜಿಲ್ಲಾಧಿಕಾರಿಗಳು ರೂ 8.50 ಲಕ್ಷ ಪರಿಹಾರದ ಹಣ ನೀಡಲು ಕ್ರಮ ಕೈಗೊಳ್ಳುವುದಾಗಿ ಅವರಿಗೆ ಭರವಸೆ ನೀಡಿರುತ್ತಾರೆ .ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ನೀಡುವಂತೆ ಸೂಚಿಸಿದ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರಿಗೆ ಮತ್ತು ಉಪ ನಾಯಕರಾದ ಯು.ಟಿ. ಖಾದರ್ ಅವರಿಗೆ ಮೃತರ ಕುಟುಂಬದ ಪರವಾಗಿ ವಂದನೆಗಳನ್ನು ಸಲ್ಲಿಸುತಿದ್ದೇನೆ ಎಂದು ವಸಂತ ಬಂಗೇರ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

error: Content is protected !!