ಕೆಂಪುಕೋಟೆಯಲ್ಲಿ ಭಗವಾಧ್ವಜ ರಾಷ್ಟ್ರಧ್ವಜದ ಕೆಳಗಡೆ ಹಾರಿಯೇ ಹಾರುತ್ತದೆ: ಶಾಸಕ ಹರೀಶ್ ಪೂಂಜ. ಕಾಂಗ್ರೆಸ್ ಹಿಜಾಬ್ ಪರ ಸ್ಪಷ್ಟ ನಿಲುವನ್ನು ಜನರ ಮುಂದಿಡಲಿ:ಶಾಸಕರಿಂದ ಸವಾಲು ಬೆಳ್ತಂಗಡಿ ಜನಜಾಗೃತಿ ಸಮಾವೇಶ

 

 

 

 

 

ಬೆಳ್ತಂಗಡಿ:ಸಂವಿಧಾನದ ರಕ್ಷಣೆಯನ್ನು ಮಾಡಬೇಕು ಎಂಬ ಸಂಕಲ್ಪವನ್ನು ಇಟ್ಟುಕೊಂಡಿರುವ ಪಕ್ಷವೊಂದಿದ್ದರೆ ಅದು ಭಾರತೀಯ ಜನತಾ ಪಾರ್ಟಿ .ಅಂಬೇಡ್ಕರ್ ಅವರ ಹೆಸರನ್ನು ಹೇಳಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಅವರ ಜೀವನ, ಅವರಿಗೆ ಪೂರಕವಾಗಿ ಯೋಚನೆಗಳನ್ನು ಮಾಡದೇ ಅವರ ವಿರುದ್ಧ ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಪಕ್ಷ ಇವತ್ತು ಸಂವಿಧಾನದ ಬಗ್ಗೆ ರಾಷ್ಟಧ್ವಜದ ಬಗ್ಗೆ ಹಾಗೂ ಬಿಜೆಪಿ ಬಗ್ಗೆ ಕೈತೋರಿಸಿ ಮಾತನಾಡುವ ನೈತಿಕತೆ ಹೊಂದಿಲ್ಲ. ಎಂದು ಶಾಸಕ ಹರೀಶ್ ಪೂಂಜ ಹೇಳಿದರು ಅವರು ಬೆಳ್ತಂಗಡಿಯಲ್ಲಿ ಫೆ28  ಬೆಳ್ತಂಗಡಿ ಬಿ ಜೆ ಪಿ  ಮಂಡಲ ವತಿಯಿಂದ ನಡೆದ ಬೃಹತ್  ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜನಜಾಗೃತಿ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರುಗಳಾದ ಡಿಕೆಶಿ ಮತ್ತು ಸಿದ್ಧರಾಮಯ್ಯನವರಿಗೆ ನನ್ನ ಪ್ರಶ್ನೆಯೆಂದರೆ  ಭಾರತೀಯ ಜನತಾಪಾರ್ಟಿ ಹಿಜಾಬ್ ವಿರೋದಿಸುತ್ತೇವೆ  ಸಮಾನ ವಸ್ತ್ರ ಸಂಹಿತೆ ಜಾರಿ ಆಗಬೇಕು ಎಂಬ ಎದೆಗಾರಿಕೆಯನ್ನು ತೋರಿಸಿ ಯಾವುದೇ ಸಮುದಾಯಕ್ಕೆ ಬೇಸರ ಆಗುತ್ತದೆ ಎಂಬ ಬಗ್ಗೆ ಚಿಂತಿಸದೇ ಎಲ್ಲ ಮಕ್ಕಳು ಸರಿ ಸಮಾನವಾಗಿರಬೇಕು ಎಂಬ ನಿಟ್ಟಿನಲ್ಲಿ ಹಿಜಾಬ್ ನಿಷೇಧಿಸ ಆಗಬೇಕು ಎಂಬ ಸ್ಪಷ್ಟ ನಿಲುವನ್ನು ಘಂಟಾಘೋಷವಾಗಿ ಹೇಳುತ್ತೇವೆ ಅದೇ ರೀತಿ ನಿಮಗೆ ತಾಕತಿದ್ರೆ ನಾವು ಹಿಜಾಬ್ ಪರ ಅಥವಾ ವಿರೋಧವಾಗಿ ಇದ್ದೇವೆ ಎನ್ನುವ ಸ್ಪಷ್ಟ ಹೇಳಿಕೆಯನ್ನು ರಾಜ್ಯದ ಜನತೆಗೆ ನೀಡಬೇಕು.ಡಿಕೆಶಿ ಒಂದು ಕಡೆ ಪತ್ರಿಕೆ ಮೂಲಕ ನಾಯಕರುಗಳಿಗೆ ಹೇಳುತ್ತಾರೆ ಹಿಜಾಬ್ ಪರ ಅಥವಾ ವಿರೋಧದ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ ಹಾಗಾದರೆ ಇದು ನಿಮ್ಮ ವೋಟ್ ಬ್ಯಾಂಕ್ ರಾಜಕೀಯ ಅಲ್ಲದೇ ಮತ್ತೇನು.ಒಂದು ವೇಳೆ ಹಿಜಾಬ್ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎಂದು ಹೇಳಿ ಮುಸಲ್ಮಾನರ ಮತದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಬೇಕು ಹಿಂದೂಗಳಾದ ನಾವು ಅದನ್ನು ನೋಡುತ್ತೇವೆ ಎಂದು ಸವಾಲು ಹಾಕಿದರು. ಮತ ರಾಜಕಾರಣ ಕ್ಕಾಗಿ ಹಿಜಾಬ್ ಮೂಲಕ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುವ ಕೆಲಸ ಮಾಡಬೇಡಿ . ಶಿವಮೊಗ್ಗದ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆ ಕಾಂಗ್ರೆಸಿನ ಕುಮ್ಮಕ್ಕಿನಿಂದ ಆಗಿದೆ.ಅದರೆ ಹಿಂದೂ ಸಮಾಜದ ರಕ್ಷಣೆಗಾಗಿ ಹರ್ಷನಂತಹ ಸಾವಿರಾರು ಮಂದಿ ಹುಟ್ಟಿಬಂದು ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟ ಮಾಡುವುದು ಖಂಡಿತ.

ಹಿರಿಯರಾದ ಈಶ್ವರಪ್ಪನವರು ಕೆಂಪುಕೋಟೆಯಲ್ಲಿ ಭಗದ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅಧಿವೇಶನವನ್ನೇ ಮೊಟಕುಗೊಳಿಸುವ ಪ್ರಯತ್ನ ಮಾಡಿದರು. ಅದರೆ ಈ ಮೂಲಕ ನಾನು ಬೆಳ್ತಂಗಡಿ ಶಾಸಕನಾಗಿ ಮತ್ತೊಮ್ಮೆ ಹೇಳಬಯಸುತ್ತೇನೆ ಕೆಂಪುಕೋಟೆಯಲ್ಲಿ ಭಗವಾಧ್ವಜವನ್ನು ಹಾರಿಸಿಯೇ ಹಾರಿಸುತ್ತದೆ ಹಿಂದೂ ಸಮಾಜ. ರಾಷ್ಟ್ರ ಧ್ವಜದ ಕೆಳಗಡೆ ಭಗವಾಧ್ವಜವನ್ನು ಹಿಂದೂ ಸಮಾಜ ಹಾರಿಸುತ್ತದೆ ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಇದು ಭಾರತೀಯ ಜನತಾ ಪಾರ್ಟಿಯ ಹಾಗೂ ಹಿಂದೂ ಸಮಾಜದ ಸಂಕಲ್ಪವಾಗಿದೆ.

ಬೆಳ್ತಂಗಡಿಯಲ್ಲಿ ಕಾಂಗ್ರೆಸಿಗರು ರಸ್ತೆ ಬದಿ ನಿಂತು ಚರ್ಚೆಗೆ ಬನ್ನಿ ಆಹ್ವಾನ ನೀಡುತಿದ್ದಾರೆ ಪ್ರಾಯಶಃ ಇವತ್ತು ಚರ್ಚೆ ಮಾಡಬೇಕಾದ ದೇಗುಲ ವಿಧಾನ ಸೌಧ ರೋಡಲ್ಲಿ ನಿಂತು ಚರ್ಚೆಗೆ ಆಹ್ವಾನ ನೀಡುವುದು ನಿಮ್ಮ ತಾಕತ್ತು ಅಲ್ಲ ತಾಕತಿದ್ರೆ ವಿಧಾನ ಸೌಧದ ಒಳಗಡೆ ಚರ್ಚೆ ಮಾಡುವಂತಹ ಕೆಲಸವನ್ನು ಮಾಡಬೇಕಿತ್ತು ಅದನ್ನು ಬಿಟ್ಟು ಎಲ್ಲೋ ರಸ್ತೆಯಲ್ಲಿ ನಿಂತು ಚರ್ಚೆಗೆ ಕರೆಯುವುದೇ ಪೌರುಷ ಎಂದು ತಿಳಿದುಕೊಂಡ ಕಾಂಗ್ರೆಸಿನ ಭಂಡ ನಿಲುವುಗಳಿಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ .ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ದೃಷ್ಟಿಯಲ್ಲಿ ಗೌರವ ತಂದು ಕೊಟ್ಟ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ವಿಶ್ವವೇ ಗುರುತಿಸುತಿದೆ. ಇದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದರು.

.‌ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಸೇರಿದಂತೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

error: Content is protected !!