ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಭುವನೇಶ್ ಗೇರುಕಟ್ಟೆಗೆ ಗೆಲುವು

 

 

 

ಬೆಳ್ತಂಗಡಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ 2022-25ರ ಸಾಲಿನ ಚುನಾವಣೆಯ ಮತದಾನ ಮಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಫೆ 27 ಭಾನುವಾರ ನಡೆಯಿತು.ನಂತರ ನಡೆದ ಮತ ಎಣಿಕೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಭುವನೇಶ್ ಗೇರುಕಟ್ಟೆ ವಿಜಯಿಯಾಗಿದ್ದಾರೆ. ಕಾರ್ಯದರ್ಶಿ ಮೂರು ಸ್ಥಾನಗಳಿಗೆ ಆರು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಅದರಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ  ಭುವನೇಶ್ ಗೇರುಕಟ್ಟೆ ಅವರು ಜಯಗಳಿಸಿದ್ದಾರೆ. ಈ ಚುನಾವಣೆಗೆ ಜಿಲ್ಲಾ ಘಟಕದ ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಆರು ಮಂದಿ, ಒಂದು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು
ಅಭ್ಯರ್ಥಿಗಳು, ಕಾರ್ಯದರ್ಶಿ ಸ್ಥಾನಕ್ಕೆ ಮೂರು ಸ್ಥಾನಕ್ಕೆ ಆರು ಅಭ್ಯರ್ಥಿಗಳು ಹಾಗೂ ಜಿಲ್ಲಾ ಕಾರ್ಯಕಾರಣಿಯ 15 ಸ್ಥಾನಗಳಿಗೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಕಾರ್ಯಕಾರಣಿಗೆ ಜಿಲ್ಲಾ ಪ್ರತಿನಿಧಿಯ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.

ಜಿಲ್ಲಾ ಮಟ್ಟದ ಪದಾಧಿಕಾರಿಗಳ ಚುನಾವಣೆ ಜೊತೆಗೆ ರಾಜ್ಯದ ಕಾರ್ಯಕಾರಣಿ ಸಮಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಸಹ ಮತದಾನ ಜರುಗಿತು.

 

 

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಸಂಪೂರ್ಣ ವಿವರ

ಅಭ್ಯರ್ಥಿಗಳು ಪಡೆದ ಮತಗಳು:

ಉಪಾಧ್ಯಕ್ಷ (3 ಸ್ಥಾನ)

1.ಭಾಸ್ಕರ ರೈ ಕಟ್ಟ- 194
2.ರಾಜೇಶ್ ಕೆ.ಪೂಜಾರಿ-129
3.ಅನ್ಸಾರ್ ಇನೋಳಿ-122

4.ಆತ್ಮಭೂಷಣ್-121
5.ಆರ್.ಸಿ.ಭಟ್ -121
6.ಹರೀಶ್ ಮಾಂಬಾಡಿ-113

ಪ್ರಧಾನ ಕಾರ್ಯದರ್ಶಿ (ಒಂದು ಸ್ಥಾನ)

1.ಜಿತೇಂದ್ರ ಕುಂದೇಶ್ವರ-164
2.ಇಬ್ರಾಹಿಂ ಅಡ್ಕಸ್ಥಳ-138

ಕಾರ್ಯದರ್ಶಿ (3 ಸ್ಥಾನ)

1.ವಿಜಯ್ ಕೋಟ್ಯಾನ್ 186.
2.ಗಂಗಾಧರ ಕಲ್ಲಪಳ್ಳಿ-172
3.ಭುವನೇಶ್ ಗೇರುಕಟ್ಟೆ-146

4.ಹರೀಶ್ ಮೋಟುಕಾನ-118
5.ಸಿದ್ದಿಕ್ ನೀರಾಜೆ-96
6.ಶರತ್ -63

ಕಾರ್ಯಕಾರಿ ಸಮಿತಿ(15 ಸ್ಥಾನ)

1) ಸತೀಶ್ ಇರಾ-223
2) ಸುಖ್ ಪಾಲ್ ಪೊಳಲಿ – 213
3) ವಿಲ್ಫ್ರೆಡ್ ಡಿಸೋಜ- 201
4) ರಾಜೇಶ್ ಶೆಟ್ಟಿ- 191
5) ಸತ್ಯವತಿ- 192
6) ಭರತ್ ರಾಜ್ -181
7) ಮೋಹನ್ ಕುತ್ತಾರ್- 173
8) ಹರೀಶ್ ಕುಲ್ಕುಂದ-169
9) ಮಹಮ್ಮದ್ ಆರೀಫ್ -168
10- ರಾಜೇಶ್ ದಡ್ಡಂಗಡಿ- 147
11) ಶ್ರವಣ್ ನಾಳ- 138
12) ನಿಶಾಂತ್ ಕಿಲೆಂಜೂರು- 136
13) ಸಂದೇಶ್ ಜಾರ- 134
14) ಹಿಲರಿ ‌ಕ್ರಾಸ್ತಾ- 123
15) ಅಶೋಕ್ ಶೆಟ್ಟಿ – 111

16) ವಿನಯಕೃಷ್ಣ- 104
17) ನರೇಂದ್ರ ಕೆರೆಕಾಡು- 98
18) ದೇವಿಪ್ರಸಾದ್- 95
19) ಲೋಕೇಶ್ ಪೆರ್ಲಂಪಾಡಿ – 91
20) ವಿದ್ಯಾಧರ್ ಶೆಟ್ಟಿ- 82
21) ನವೀನ್ ಶೆಟ್ಟಿ- 77
22) ಗಿರೀಶ್ ಎ. – 76
23) ಜೈನುದ್ದೀನ್- 55.

ಅಧ್ಯಕ್ಷ: ಶ್ರೀನಿವಾಸ ನಾಯಕ್ ಇಂದಾಜೆ (ಅವಿರೋಧ)

ಕೋಶಾಧಿಕಾರಿ: ಬಿ.ಎನ್.ಪುಷ್ಪರಾಜ್ (ಅವಿರೋಧ)
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ: ಜಗನ್ನಾಥ ಶೆಟ್ಟಿ ಬಾಳ (ಅವಿರೋಧ)

 

 

error: Content is protected !!