ಬೆಳ್ತಂಗಡಿ: ಧರ್ಮಸ್ಥಳ- ಪೆರಿಯಶಾಂತಿಯ ನಡುವೆ ಇರುವ ನಿಡ್ಲೆ ಗ್ರಾಮದ ಕೆರೆಕಂಡ ಬಳಿ ರಾಜ್ಯ ಹೆದ್ದಾರಿಯ ಬದಿ ಕೆರೆ ಇದ್ದು, ಪ್ರಯಾಣಿಕರಿಗೆ ಅಪಾಯ ಆಹ್ವಾನಿಸುತ್ತಿರುವ ಕುರಿತು ಸಂಭಾವ್ಯ ಅಪಾಯದ ಆತಂಕದ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ನಲ್ಲಿ ಫೆ.12ರಂದು ವರದಿ ಪ್ರಕಟಿಸಲಾಗಿತ್ತು. ಈ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಕೊನೆಗೂ ಹೆದ್ದಾರಿ ಬದಿ ತಡೆಬೇಲಿ ( ಕಬ್ಬಿಣದ ರೂಫ್) ನಿರ್ಮಿಸಲಾಗಿದೆ.
ಧರ್ಮಸ್ಥಳ ದೇಗುಲಕ್ಕೆ ವಾಹನಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಿದ್ದರೂ ಈ ಕೆರೆಗೆ ಮಾತ್ರ ಯಾವುದೇ ರೀತಿಯ ಸಮರ್ಪಕವಾದ ತಡೆಗೋಡೆಗಳಿಲ್ಲದೆ ಅಪಾಯ ಆಹ್ವಾನಿಸುತ್ತಿರುವ ಕುರಿತು ವಿವರವಾದ ವರದಿ ಪ್ರಕಟಿಸಲಾಗಿತ್ತು.
ಇದೀಗ ಸಂಬಂಧಿಸಿದ ಇಲಾಖೆ ಪ್ರಯಾಣಿಕರ ರಕ್ಷಣೆಗೆ ಆದ್ಯತೆ ನೀಡಿ ಕನಿಷ್ಟ ಬೇಲಿ ಅಳವಡಿಸಿರುವುದು, ಕೊಂಚ ಮಟ್ಟಿಗೆ ಹೆಚ್ಚಿನ ಅಪಾಯ ತಪ್ಪುವ ಭರವಸೆ ಮೂಡಿದೆ.