ಮಾನವೀಯತೆ ಮೆರೆದ ಶಾಸಕ ಹರೀಶ್ ಪೂಂಜ: ಶಾಸಕ ಅರವಿಂದ ಲಿಂಬಾವಳಿ, ಅವರ ಆಪ್ತ ಸಹಾಯಕ ಚರಿತ್ ಕುಮಾರ್ ಸಹಕಾರದಿಂದ ಲಿವರ್‌ ಸರ್ಜರಿ: ಪುನರ್ಜನ್ಮ ಪಡೆದ ಲಿವರ್ ಸಮಸ್ಯೆ ಪೀಡಿತ ಬೆಳ್ತಂಗಡಿಯ ಸಾನ್ವಿ

 

 

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಸಮಯೋಚಿತ ನೆರವಿನಿಂದ   ಶಾಸಕ ಅರವಿಂದ ಲಿಂಬಾವಳಿ ಮತ್ತು ಅವರ ಆಪ್ತ ಸಹಾಯಕ ಚರಿತ್ರ ಕುಮಾರ್ ಅವರ ಸಹಕಾರದಿಂದ ಲಿವರ್ ಸಮಸ್ಯೆಯ  ಮಗುವಿಗೆ ಯಶಸ್ವಿ ಲಿವರ್‌ ಸರ್ಜರಿ ನಡೆಸುವ ಮೂಲಕ ಬಾಲಕಿಯ ಚಿಕಿತ್ಸೆಗೆ ಸಹಕಾರ ‌ನೀಡಿ ಮಾನವೀಯತೆ ಮೆರೆದಿದ್ದಾರೆ.

ಬೆಳ್ತಂಗಡಿ ತಾಲೂಕು ಗರ್ಡಾಡಿ ಸಮೀಪದ ನಂದಿಬೆಟ್ಟ ಎಂಬಲ್ಲಿಯ ಶಾರದಾ ಮತ್ತು ಬೇಬಿ ಪೂಜಾರಿ ದಂಪತಿಗಳ ಎಂಟುವರೇ ವರ್ಷ ಪ್ರಾಯದ ಪುತ್ರಿ ಸಾನ್ವಿ  ಲಿವರ್ ಸಮಸ್ಯೆಯಿಂದ‌‌ ಅನಾರೋಗ್ಯ ‌ಪೀಡಿತರಾಗಿ, ಬಳಲುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸ್ವಂತ ದುಡಿಮೆಯಿಂದ ಚಿಕಿತ್ಸೆ ಕೊಡಿಸುತಿದ್ದರೂ ಶಸ್ತ್ರ ಚಿಕಿತ್ಸೆಯೇ ಅಂತಿಮ ದಾರಿ ಎಂದು ವೈದ್ಯರು ತಿಳಿಸಿದ್ದರು, ಆದರೆ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವುದೆಂಬ ಮಾಹಿತಿ ತಿಳಿದು ಕುಗ್ಗಿ ಹೋಗಿದ್ದರು. ತೀರಾ ಬಡಕುಟುಂಬವಾಗಿರುವ ಇವರು ಅಕ್ಷರಶಃ ಕಂಗಾಲಾಗಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ನೆರವಾಗಿದ್ದು, ಅವರಿಗೆ  ಮನೆಯವರು ಮಾಹಿತಿ ನೀಡಿದ ಕ್ಷಣದಿಂದ ಧೈರ್ಯ ತುಂಬಿ   ಮಗುವಿನ ಚಿಕಿತ್ಸೆಯ ಬಗ್ಗೆ  ಕಾರ್ಯಪ್ರವೃತ್ತರಾದರು.  ಶಾಸಕ ಹರೀಶ್ ಪೂಂಜರ ವಿನಂತಿಯಂತೆ  ಬೆಂಗಳೂರಿನ  ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತು ಅವರ ಆಪ್ತ ಸಹಾಯಕ ಚರಿತ್ರ ಕುಮಾರ್ ಅವರ ಸಹಕಾರದಿಂದ ಮಗುವಿಗೆ ಲಿವರ್‌ ಸರ್ಜರಿ ನಡೆಸಲಾಯಿತು. ಅತ್ಯಂತ ಕ್ಲಿಷ್ಟಕರ ಸರ್ಜರಿಯನ್ನು ಬೆಂಗಳೂರಿನ ಸಾಕ್ರಾ ವರ್ಲ್ಡ್‌ ಆಸ್ಪತ್ರೆಯ ಡಾ. ಸಾದಿಕ್‌ ಸಿಕೋರ ಮತ್ತು ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿ ಮಗುವಿಗೆ ಪುನರ್ಜನ್ಮ ನೀಡಿದೆ.

 

ಶಾಸಕ ಹರೀಶ್‌ ಪೂಂಜಾ,  ಸಹಕಾರದಿಂದ
ಸರ್ಜರಿ ಬಡಕುಟುಂಬಕ್ಕೆ ಯಾವುದೇ ಒತ್ತಡ ಬಾರದ ರೀತಿಯಲ್ಲಿ ನಡೆದಿದ್ದು, ಎಲ್ಲರ ಸಹಕಾರದಿಂದ ಬೇಬಿ ಪೂಜಾರಿಯವರ ಮನೆಮಗಳು ಸಾನ್ವಿ  ಸಾವಿನ ದವಡೆಯಿಂದ ಪಾರಾಗಿದ್ದಾರೆ.ಈ ಬಗ್ಗೆ ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ ಸಾನ್ವಿ ತಂದೆ ಬೇಬಿ ಪೂಜಾರಿ ಅವರು
ನಿನ್ನೆ  ಫೆ 14 ರಂದು ಮಗಳ ಅಪರೇಷನ್ ಆಗಿದೆ ಆರೋಗ್ಯದಿಂದಿದ್ದು ಚೇತರಿಸಿಕೊಳ್ಳುತಿದ್ದಾಳೆ  ಕಳೆದ ನಾಲ್ಕು ವರ್ಷದಿಂದ ಈ ಸಮಸ್ಯೆಯಿಂದ ಬಳಲುತಿದ್ದ ಅವಳಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತಿದ್ದೆ  ಅದರೆ ಶಸ್ತ್ರ ಚಿಕಿತ್ಸೆ ಆಗಲೇ ಬೇಕು ಎಂದು ವೈದ್ಯರು ತಿಳಿಸಿದಾಗ  ಅರ್ಥಿಕವಾಗಿ ಸಮಸ್ಯೆಯಲ್ಲಿ ಇದ್ದ ನಾವು ಶಾಸಕರ ಬಳಿ  ಮಗಳ ಬಗ್ಗೆ  ಹಾಗೂ ನನ್ನ ಸಮಸ್ಯೆಯ ಬಗ್ಗೆ  ಹೇಳಿದಾಗ ಅವರು ತಕ್ಷಣ ಸ್ಪಂದಿಸಿ  ಅಪರೇಷನ್ ಬಗ್ಗೆ ಬೆಂಗಳೂರಿನ ಸಾಕ್ರ ವರ್ಲ್ಡ್ ಹಾಸ್ಪಿಟಲ್ ನಲ್ಲಿ ಅರವಿಂದ ಲಿಂಬಾವಳಿ ಮಾಡಿದ ಮನವಿಯಂತೆ ಅವರ ಅಪ್ತ ಕಾರ್ಯದರ್ಶಿ ಚರಿತ್ರ ಕುಮಾರ್  ಅವರ ಸಕಾಲಿಕ ಪ್ರಯತ್ನದಿಂದ ಮಗಳ ಅಪರೇಷನ್ ಯಶಸ್ವಿಯಾಗಿದ್ದು ಇದೀಗ ಚೇತರಿಸಿಕೊಳ್ಳುತಿದ್ದಾಳೆ ಇನ್ನು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮಗಳ ಚಿಕಿತ್ಸೆಗೆ  ಸ್ಪಂದಿಸಿದ  ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ನಾವು ಚಿರ ಋಣಿಗಳು ಎಂದರು.ಅದಲ್ಲದೇ  ಮಗಳ ಚಿಕಿತ್ಸೆಗಾಗಿ ಶ್ರಮಿಸಿದ  ಅಮಿತ್‌, ಗುರುಪ್ರದ ಪೂಂಜ,  ಹಾಗೂ  ಸಹಾಯ ಹಸ್ತ ಚಾಚಿದ   ಎಲ್ಲರಿಗೂ ಬೇಬಿ ಪೂಜಾರಿಯವರು ಧನ್ಯವಾದ ತಿಳಿಸಿದ್ದಾರೆ.

ಬಾಳಿ ಬೆಳಗಬೇಕಾದ ಬಡ ಕುಟುಂಬದ  ಪುಟ್ಟ ಬಾಲೆಯ ಚಿಕಿತ್ಸೆಗೆ ಸ್ಪಂದಿಸಿ   ಮಾನವೀಯತೆ ಮೆರೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತಿದ್ದಾರೆ .

error: Content is protected !!