ಸಬ್ ರಿಜಿಸ್ಟರ್ ಕಛೇರಿಗಳ ಸಮಯ ವಿಸ್ತರಣೆ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಆದೇಶ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7ರವರೆಗೆ ಕಾರ್ಯನಿರ್ವಹಣೆ.

 

 

 

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಛೇರಿಗಳ ಕೆಲಸದ ಸಮಯವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯಲ್ಲಿನ ನೋಂದಣಿ ಕಛೇರಿಗಳು ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಕಛೇರಿಗಳಲ್ಲಿ ಜನಸಂದಣಿ ಪರಿಗಣಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

 

 

ಕರ್ನಾಟಕ ನೋಂದಣಿ ನಿಯಮಗಳು 1965ರ ನಿಯಮ 4( !!)ರನ್ವಯ ಉಪಬಂಧದ ವಿವರಣೆಯಂತೆ ನೋಂದಣಿ ಮತ್ತು ಸಾಂಖಿಕ ಇಲಾಖೆಯ ವ್ಯಾಪ್ತಿಯ ಉಪನೋಂದಣಿ ಕಛೇರಿಗಳ ಕೆಲಸದ ವೇಳೆಯನ್ನು, ಮುಂದಿನ ಆದೇಶದವರೆಗೆ ಬೆಳಗ್ಗೆ 9.00 ರಿಂದ ರಾತ್ರಿ 7.00 ರ ತನಕ ತಕ್ಷಣ ಜಾರಿಗೆ ಬರುವಂತೆ ವಿಸ್ತರಿಸಿ ಆದೇಶಿಸಿದೆ.

error: Content is protected !!