ಬೆಳ್ತಂಗಡಿಯ ಪ್ರತೀ ಮನೆಯ ಜನತೆ  ಸಾಕ್ಷಿಯಾಗಬೇಕು: ರಕ್ಷಿತ್ ಶಿವರಾಂ ಮರೋಡಿ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರಕ್ಕೆ ಭೇಟಿ

 

 

 

ಬೆಳ್ತಂಗಡಿ:ಪುನರ್ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕಕ್ಕೆ ಹಾಗೂ ನೇಮೋತ್ಸವಕ್ಕೆ ಸಜ್ಜಾಗುತ್ತಿರುವ ಬೆಳ್ತಂಗಡಿಯ ಮರೋಡಿ ಗ್ರಾಮದ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರ ದೇರಾಜೆಬೆಟ್ಟಕ್ಕೆ ಫೆ 06 ಆದಿತ್ಯವಾರ ಬೆಸ್ಟ್ ಫೌಂಡೇಶನ್ ನ ಸಂಸ್ಥಾಪಕ ರಕ್ಷಿತ್ ಶಿವರಾಂ ಭೇಟಿ ನೀಡಿ ಶ್ರೀ ಕ್ಷೇತ್ರದ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪುನರ್ ಪ್ರತಿಷ್ಠೆ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವಕ್ಕೆ ಶುಭ ಹಾರೈಸಿದರು..

ಇದೆ ಫೆಬ್ರವರಿ 19 ಹಾಗೂ 20ರಂದು ಶ್ರೀ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ಹಾಗೂ ನೇಮೋತ್ಸವಾದಿ ಸಂಭ್ರಮ ವಿಜೃಂಭಣೆಯಿಂದ ನಡೆಯಲಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

 

 

ಕ್ಷೇತ್ರಕ್ಕೆ ಭೇಟಿ ನೀಡಿದ ರಕ್ಷಿತ್ ಶಿವರಾಂ ಮಾತನಾಡಿ, ತುಳುನಾಡ ದೈವ ದೇವರುಗಳ ಮೂಲಸ್ಥಾನಗಳ ಪೈಕಿ ಶ್ರೀ ಕೊಡಮಣಿತ್ತಾಯ ದೈವದ ಮೂಲ ಸ್ಥಾನವು ಬೆಳ್ತಂಗಡಿ ತಾಲೂಕಿನಲ್ಲಿರುವುದು ನಮ್ಮೆಲ್ಲರ ಪುಣ್ಯವಾಗಿದೆ.. ಸುಮಾರು 800 ವರ್ಷ ಇತಿಹಾಸವಿರುವ ದೇರಾಜೆ ಬೆಟ್ಟದ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರಕ್ಕೆ ಇದೀಗ ಅನೇಕ ವರುಷಗಳ ಬಳಿಕೆ ನೇಮೋತ್ಸವ ಸಹಿತ ಬ್ರಹ್ಮ ಕುಂಭಾಭಿಷೇಕ ಯೋಗ ಪ್ರಾಪ್ತವಾಗಿದ್ದು ಬೆಳ್ಳಿಬೀಡು ಮನೆತನದ ಶ್ರೀ. ಕೆ ಹೇಮರಾಜ್ ಬೆಳ್ಳಿಬೀಡು ಇವರ ಅಧ್ಯಕ್ಷತೆಯಲ್ಲಿ ಹಾಗೂ ಆಡಳಿತ ಸಮಿತಿ ಜೀರ್ಣೋದ್ಧಾರ ಸಮಿತಿ ಬ್ರಹ್ಮ ಕುಂಭಾಭಿಷೇಕ ಸಮಿತಿ, ಗುರಿಕಾರರು ಹಾಗೂ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀ ಕ್ಷೇತ್ರದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಬೆಳ್ತಂಗಡಿಯ ಮನೆ ಮನೆಯ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂದು ವಿನಂತಿಸಿ ಶುಭ ಹಾರೈಸಿದರು. ಈ ಸಂದರ್ಭ ಆಡಳಿತ ಸಮಿತಿಯ ಅಧ್ಯಕ್ಷರಾದ ಹೇಮರಾಜ್ ಕೆ. ಬೆಳ್ಳಿ ಬೀಡು, ಕಾರ್ಯದರ್ಶಿ ನಾರಾಯಣ ಪೂಜಾರಿ ಉಚ್ಚೂರು, ಗುರಿಕಾರರಾದ ಸುರೇಂದ್ರ ಬಲ್ಲಾಳ್ ಮಲ್ಲಾರ ಬೀಡು, ಸುದರ್ಶನ್ ಜೈನ್ ಪಾಂಡಿಬೆಟ್ಟು ಗುತ್ತು, ಜಿನೇಂದ್ರ ಜೈನ್ ಹರಂಬೆಟ್ಟು ಗುತ್ತು, ಜಯವರ್ಮ ಬುಣ್ಣು ಕುಕ್ಕೆರಬೆಟ್ಟು ಗುತ್ತು, ಆದಿತ್ಯ ಪಿ. ಕೆ ಮತ್ತೊಟ್ಟು, ವಿಜಯ ಬಂಗ, ವಿಶುಕುಮಾರ್ ಜೈನ್, ಸಹಿತ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..

error: Content is protected !!