ಬೆಳ್ತಂಗಡಿಯ ಆಶ್ವಲ್ ರೈ ಸಾರಥ್ಯದ ಕೋಲ್ಕತ್ತಾ ‌ಥಂಡರ್ ಬೋಲ್ಟ್ಸ್ ಪಂದ್ಯಾಟ ಇಂದು: ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಕ್ಯಾಲಿಕೆಟ್ ಹೀರೋಸ್ ವಿರುದ್ಧ ಮೊದಲ ಸೆಣೆಸಾಟ

 

 

 

 

ಬೆಳ್ತಂಗಡಿ: ಬೆಳ್ತಂಗಡಿಯ ಆಶ್ವಲ್ ರೈ ಸಾರಥ್ಯದ ಕೋಲ್ಕತ್ತಾ ‌ಥಂಡರ್ ಬೋಲ್ಟ್ಸ್ ಪಂದ್ಯಾಟ ಇಂದು ಸಂಜೆ 7 ಗಂಟೆಗೆ ಪಂದ್ಯಾಟ ಆರಂಭವಾಗಲಿದ್ದು ಸೋನಿ‌ ಸ್ಪೋರ್ಟ್ಸ್ ನೆಟ್ವರ್ಕ್ ನ ಸೋನಿ ಟೆನ್ 1, 2, 3, 4 ಮೂಲಕ ನೇರಪ್ರಸಾರ ಕ್ರೀಡಾಪ್ರೇಮಿಗಳಿಗೆ ಲಭಿಸಲಿದೆ.
ಪ್ರೈಮ್ ವಾಲಿಬಾಲ್ ಲೀಗ್‌ ನ ದ್ವಿತೀಯ ಪಂದ್ಯ ಇದಾಗಲಿದ್ದು,
ಕ್ಯಾಲಿಕೆಟ್ ಹೀರೋಸ್ ವಿರುದ್ಧ ಥಂಟರ್ ಬೋಲ್ಟ್ಸ್ ಬಾಯ್ಸ್ ಸೆಣೆಸಾಡಲಿದ್ದಾರೆ.
₹ 15 ಲಕ್ಷಕ್ಕೆ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಬೆಳ್ತಂಗಡಿಯ ಅಶ್ವಲ್ ರೈ ಅವರನ್ನು ದಾಖಲೆ ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡ ಖರೀದಿಸಿದ್ದು ತಂಡದ ಭರವಸೆಯ ಆಟಗಾರರಾಗಿದ್ದಾರೆ. ಅಶ್ವಲ್ ಅವರು ತಂಡದ ಮಿಡಲ್ ಬ್ಲಾಕರ್ ಆಗಿ ಆಡಲಿದ್ದಾರೆ.
ಈ ಲೀಗ್ ನಲ್ಲಿ ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡಗಳು‌ ಸೇರಿ ಒಟ್ಟು 7ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡುತ್ತಿವೆ.
ಅಶ್ವಲ್ ರೈ ಹುಬ್ಬಳ್ಳಿ ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕ್ರೀಡಾ ಕೋಟಾದಡಿ ಕೆಲಸ ಪಡೆದಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನ ಅಚ್ಚಿನಡ್ಕನಿವಾಸಿ ನಿವೃತ್ತ ಎ.ಎಸ್.ಐ. ಸಂಜೀವ ರೈ ಹಾಗೂ ವಾಣಿ ಎಸ್. ರೈ ಅವರ ಪುತ್ರರಾಗಿರುವ ಅಶ್ವಲ್ ರೈ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು.
ಅಶ್ವಲ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ‌ ಪಡೆದು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಹುಬ್ಬಳ್ಳಿ ರೈಲ್ವೆ ತಂಡ ಹಾಗೂ ಇಂಡಿಯನ್ ರೈಲ್ವೇ ವಾಲಿಬಾಲ್ ತಂಡದ ಕಪ್ತಾನನಾಗಿದ್ದಾರೆ. ಜಪಾನ್‌ನಲ್ಲಿ ನಡೆದ ವಾಲಿಬಾಲ್ ಚಾಂಪಿಯನ್‌ ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿ ಅದ್ಭುತ ಸಾಧನೆ ತೋರಿದ್ದರು. ವಿಶೇಷ ಎಂದರೆ ಇವರು ಭಾರತದ ರಾಷ್ಟ್ರೀಯ ನೆಟ್‌ಬಾಲ್ ತಂಡದ ನಾಯಕನೂ ಆಗಿದ್ದಾರೆ. ಅಶ್ವಲ್ ರೈ 2019ರಲ್ಲಿ ಏಶ್ಯದ ಬೆಸ್ಟ್ ಬ್ಲಾಕರ್, ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟದಲ್ಲಿ ದೇಶದ ಪರ ಗಮನಾರ್ಹ ಸಾಧನೆ ತೋರಿದ್ದಾರೆ.

error: Content is protected !!