ಹೆಜ್ಜೆನು ದಾಳಿ ಮಹಿಳೆ ಗಂಭೀರ ಇಬ್ಬರಿಗೆ ಗಾಯ. ಬೆಳ್ತಂಗಡಿ ಇಂದಬೆಟ್ಟು ಸಮೀಪ ಘಟನೆ

 

 

 

ಬೆಳ್ತಂಗಡಿ : ತಾಲೂಕಿನ ನಾವೂರು ಗ್ರಾಮದ ಇಂದಬೆಟ್ಟು ಎಂಬಲ್ಲಿ ಹೆಜ್ಜೇನು ದಾಳಿಯಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ.ಇಂದಬೆಟ್ಟು ಪೆರಲ್ದಪಲ್ಕೆ ರಸ್ತೆಯಲ್ಲಿ ಕಾಲು ನೋವು ಎಂದು ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿದ್ದ ಪೆರಲ್ದಪಲ್ಕೆಯ ಕಲಾಯಿ‌ ಮನೆಯ ಲೀಲಾ(65) ಅವರಿಗೆ ಹೆಜ್ಜೆನು ದಾಳಿ ಮಾಡಿದ್ದು ತಕ್ಷಣ ಪಕ್ಕದಲ್ಲೇ ಇದ್ದ ಮನೆಗೆ ಓಡಿ ಹೋಗಿದ್ದು ಮನೆಯಲ್ಲಿ ಇದ್ದ ಶ್ರೀಧರ್ ಮತ್ತು ಸುಮತಿ ಅವರು ಗೋಣಿಚೀಲ ಹಾಕಿ ಅವರನ್ನು ರಕ್ಷಣೆ ಮಾಡಲು ಮುಂದಾದಾಗ ಇಬ್ಬರಿಗೂ ಹೆಜ್ಜೆನು ದಾಳಿ ಮಾಡಿದೆ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಲೀಲಾಗೆ ಪ್ರಜ್ಞೆ ತಪ್ಪಿದ್ದು ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀಧರ್ ಮತ್ತು ಸುಮತಿ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

error: Content is protected !!