ಮದ್ದಡ್ಕ: ಬೈಕ್, ಲಾರಿ ನಡುವೆ ಅಪಘಾತ: ಇಬ್ಬರು ಯುವಕರು ‌ಸ್ಥಳದಲ್ಲೇ ಸಾವು:

 

 

 

 

ಬೆಳ್ತಂಗಡಿ;  ತಾಲೂಕಿನ ಕುವೆಟ್ಟು ಗ್ರಾಮದ   ಮದ್ದಡ್ಕ ಸಮೀಪ ಕಿನ್ನಿಗೋಳಿ ಎಂಬಲ್ಲಿ‌   ಜ17 ಸೋಮವಾರ ರಾತ್ರಿವೇಳೆ ಬೈಕ್ ಮತ್ತು ಲಾರಿ ನಡುವೆ ನಡೆದ  ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ಒಬ್ಬರು ಗುರುವಾಯನಕೆರೆಯವರಾದರೆ ಮತ್ತೊರ್ವರು ನಾವೂರದವರು ಎಂದು ತಿಳಿದು ಬಂದಿದೆ..

ಮೃತರನ್ನು ನಾವೂರಿನ ನಿವಾಸಿ ಹಮೀದ್ ಕುದುರು ಅವರ ಪುತ್ರ ಮಿಸ್ಬಾಹುದ್ದೀನ್(19) ಎಂದು ತಿಳಿದುಬಂದಿದೆ. ಮತ್ತೋರ್ವ ಯುವಕ ಕುವೆಟ್ಟು ಗ್ರಾಮದ ಗುರುವಾಯನಕೆರೆ ‌ನಿವಾಸಿ  ಅಶ್ರಫ್ ಅವರ ಪುತ್ರ ಅಶ್ಫಾನ್(19) ಎಂದು ಗುರುತಿಸಲಾಗಿದೆ.
ಮೃತ ಇಬ್ಬರೂ ಯುವಕರು ಮದ್ದಡ್ಕ ಮಸೀದಿ ಎದುರಿನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು. ಎಂದಿನಂತೆ
ಕೆಲಸ ಮುಗಿಸಿ ಮನೆಕಡೆಗೆ ಹೊರಟಿದ್ದರು. ಇವರಿಗೆ ಡಿಕ್ಕಿ ಹೊಡೆದ ಟಿಪ್ಪರ್‌ ಲಾರಿ ಗುರುವಾಯನಕೆರೆ ಯಿಂದ ಮದ್ದಡ್ಕ ಕಡೆಗೆ ಹೋಗುತ್ತಿತ್ತು.

ಮೃತ ಮಿಶ್ಬಾಹುದ್ದೀನ್ ಅವರು ನಾವೂರಿನ  ಹಮೀದ್‌ ಮತ್ತು ಮೈಮುನಾ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೇಯವರು. ದಂಪತಿಗೆ ಇನ್ನಿಬ್ಬರು ಮಕ್ಕಳಿದ್ದು, ಒಂದು ಗಂಡು ಮತ್ತು ಒಂದು ಹೆಣ್ಣು. ಮಿಸ್ಬಾಹುದ್ದೀನ್ ಅವರು ಮದ್ದಡ್ಕದ ಮಸೀದಿ ಎದುರಿನಲ್ಲಿರುವ ದಾವೂದ್ ಅವರ ಮಟನ್ ಮತ್ತು ಚಿಕನ್ ಸ್ಟಾಲ್ ನಲ್ಲಿ ಕೆಲಸದಲ್ಲಿದ್ದರು.

ಮೃತ ಮತ್ತೋರ್ವ ಅಶ್ಫಾನ್ ಅವರು ಅಶ್ರಫ್ ಮತ್ತು ಸಕೀನಾ ದಂಪತಿಯ ನಾಲ್ವರು ಮಕ್ಕಳಲ್ಲಿ ಮೊದಲನೆಯವರು.‌ ಉಳಿದಂತೆ ದಂಪತಿಗೆ ಒಂದು ಹೆಣ್ಣು ಮತ್ತು ಇನ್ನಿಬ್ಬರು ಗಂಡು ಮಕ್ಕಳಿದ್ದಾರೆ.

ಅಶ್ಫಾನ್ ಅವರು ಈ ಹಿಂದೆ ಬೆಂಗಳೂರಿನಲ್ಲಿ ಕೆಲಸಕ್ಕಿದ್ದವರು ಈಗ ಸಧ್ಯಕ್ಕೆ ಊರಿನಲ್ಲೇ ನೆಲೆಸಿದ್ದರು. ಮಟನ್ ಸ್ಟಾಲ್ ಹೊಂದಿರುವ ದಾವೂದ್ ಅವರು ಅಶ್ಫಾನ್ ಅವರ ಚಿಕ್ಕಪ್ಪ. ಸಧ್ಯ ಅಶ್ಫಾನ್ ಅವರು ಮತ್ತು ಮಿಸ್ಬಾಹ್ ಇದೇ ಸ್ಟಾಲ್‌ನಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದರು.

 

error: Content is protected !!