ಶ್ರಮಿಕ ಬೃಹತ್ ಉದ್ಯೋಗ ಮೇಳ ಜ 20, 21 ರಂದು ಎಸ್. ಡಿ. ಎಂ ಉಜಿರೆ , ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರ್ ನಲ್ಲಿ ಆಯೋಜನೆ ಆನ್ ಲೈನ್ ಹಾಗೂ ಆಫ್ ಲೈನ್ ನಡೆಯುವ ಉದ್ಯೋಗ ಮೇಳ.

 

 

 

ಬೆಳ್ತಂಗಡಿ:ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಮಾರ್ಗದರ್ಶನದಲ್ಲಿ, ಶ್ರಮಿಕ ಸೇವಾ ಟ್ರಸ್ಟ್, ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆ ಮಡಂತ್ಯಾರ್, ಎಸ್. ಡಿ. ಎಂ ವಿದ್ಯಾ ಸಂಸ್ಥೆ ಉಜಿರೆ ಸಹಯೋಗದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ತಾಲೂಕಿನ ನಿರುದ್ಯೋಗಿ ಉದ್ಯೋಗಕಾಂಕ್ಷಿಗಳಿಗೆ ಉತ್ತಮ ರೀತಿಯ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಶ್ರಮಿಕ ಬೃಹತ್ ಉದ್ಯೋಗ ಮೇಳವು ಈಗಾಗಲೇ ಅಯೋಜನೆಗೊಂಡಿದ್ದು

 

 

ಜ 20 ಗುರುವಾರ ಉಜಿರೆ ಶ್ರೀ  ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯ(SDMIT) ದಲ್ಲಿ ಅನ್ ಲೈನ್ ಮೂಲಕ ಹಾಗೂ ಜ 21 ಶುಕ್ರವಾರ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆ ಮಡಂತ್ಯಾರ್ ನಲ್ಲಿ ಆಫ್ ಲೈನ್ ಉದ್ಯೋಗ ಮೇಳ ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9632863443 ಪೋನ್ ನಂಬರ್ ಗೆ ಸಂಪರ್ಕಿಸಬಹುದು.ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ

ಬೆಳ್ತಂಗಡಿ ಶಾಸಕರ ಕಛೇರಿ ಶ್ರಮಿಕ ಪ್ರಕಟನೆಯಲ್ಲಿ ತಿಳಿಸಿದೆ.

 

 

 

 

error: Content is protected !!