ಗ್ರಾಮ ಸಭೆಯಲ್ಲಿ ಅಧಿಕಾರಿಗಳ  ಗೈರು ಅಕ್ರೋಶಗೊಂಡ ಗ್ರಾಮಸ್ಥರು: ಮಧ್ಯಾಹ್ನ ತನಕ ಕಾದು ಮತ್ತೆ ಆರಂಭವಾದ ಗ್ರಾಮ ಸಭೆ  ಮೇಲಂತಬೆಟ್ಟು ಗ್ರಾಮ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ಅಸಮಾಧಾನ.

 

 

 

 

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗ್ರಾಮ ಸಭೆ ಜ‌ 05 ರಂದು ಮೇಲಂತಬೆಟ್ಟು ಸಮುದಾಯ ಭವನದಲ್ಲಿ ನಡೆಯಿತು ಗ್ರಾಮ ಸಭೆಯು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಾರಂಭವಾದರೂ ಯಾವುದೇ ಇಲಾಖೆಯ ಅಧಿಕಾರಿಗಳು ಬಾರದಿರುವ   ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳು ಬಾರದೇ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು ನಂತರ  ಸುಮಾರು ಮಧ್ಯಾಹ್ನ 1 ಗಂಟೆಗೆ  ಸಭೆಯನ್ನು ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಕಾದು ಕಾದು ಸುಸ್ತಾದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ಗ್ರಾಮಸ್ಥರಿಗೆ ಮಾಡಿಕೊಡಬೇಕಾದ ಅಗತ್ಯ ಕೆಲಸಗಳಲ್ಲಿ ಗ್ರಾಮ ಪಂಚಾಯತ್ ಅಸಡ್ಡೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸ್ಥಳೀಯರು ತಾಲೂಕಿನ ವಿವಿಧ ಇಲಾಖೆಗಳಲ್ಲಿಯೂ  ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ  ಸತಾಯಿಸುತಿದ್ದಾರೆ ಎಂದು ಆರೋಪಿಸಿದರು.

ಪಂಚಾಯತ್ ಪರಿಶೀಲನಾ ಲೆಕ್ಕ ಪ್ರಕಾರ ಸ್ಮಶಾನ  ಅಭಿವೃದ್ಧಿ ಆಗಿದೆ ಎಂದು ತಪ್ಪು ಹೇಳಿಕೆ ನೀಡಲಾಗುತ್ತಿದೆ ಆದರೆ ಇಲ್ಲಿವರೆಗೆ ಸ್ಮಶಾನ‌ ಭೂಮಿ ಅಭಿವೃದ್ಧಿ ಆಗಿಲ್ಲ‌, ಸವಣಾಲು ಗ್ರಾಮಕ್ಕೆ ರುದ್ರ ಭೂಮಿಯ ಅಗತ್ಯ ಹೆಚ್ಚಿದೆ ಈ ಬಗ್ಗೆ ಕ್ರಮ ಕೈಗೊಳ್ಳುಬೇಕು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಹಲವೆಡೆ ಡಾಮರೀಕರಣ, ಚರಂಡಿ ವ್ಯವಸ್ಥೆಯ ಅಗತ್ಯ ಇದೆ.ಪರಿಶಿಷ್ಟ ಪಂಗಡಗಳಿಗೆ ಕಾಲನಿಯ ಕೊರತೆ ಈಗಲೂ ಇದೆ ಆದರೆ ಪಂಚಾಯತ್ ಈಗಾಗಲೇ ಪರಿಶಿಷ್ಟ ಪಂಗಡಗಳಿಗೆ ಕಾಲನಿಯ ವ್ಯವಸ್ಥೆ ಆಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ

ಸವಣಾಲು ಕಾಳಿಕಾಂಬ ರಸ್ತೆ ಯಿಂದ ಮಿಯಾ ರಸ್ತೆ ವ್ಯವಸ್ಥೆ ಅಗತ್ಯ ಇದೆ. ಸವಣಾಲಿಗೆ ಸಮುದಾಯ ಭವನ ವಿವೇಕಾನಂದ ರಸ್ತೆಯಿಂದ ಕಾಳಿಕಾಂಭ ದೇವಸ್ಥಾನ ತಿರುವಿನವರೆಗೆ ದಾರಿ ದೀಪ ವ್ಯವಸ್ಥೆ ಆಗಬೇಕಾಗಿದೆ. ಕಸದ ಸಮಸ್ಯೆ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗುತಿದ್ದು ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ‌ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಭಿನಯ,ಕಾರ್ಯದರ್ಶಿ ನಿರ್ಮಲ್ ಕುಮಾರ್, ನೋಡಲ್ ಅಧಿಕಾರಿ ತಾರಾಕೇಸರಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದರು.

error: Content is protected !!