ನಿರ್ಮಾಣಕ್ಕೂ ಮೊದಲೇ ಕುಸಿದು ಬಿತ್ತು ಮೇಲ್ಛಾವಣಿ…!: ಗುತ್ತಿಗೆದಾರನ ಬೇಜವಾಬ್ದಾರಿಗೆ ಬಲಿಯಾಗುತ್ತಿದ್ದ ಬಡ ಜೀವಗಳು: ಅದೃಷ್ಡವಶಾತ್ ಸಂಭವಿಸಿಲ್ಲ ದೊಡ್ಡ ದುರಂತ

 

 

 

ಬೆಳ್ತಂಗಡಿ: ಕಟ್ಟಡ ಕಾಮಾಗಾರಿ ವೇಳೆ ಕಟ್ಟಡದ ಮೇಲ್ಚಾವಣಿ ಕುಸಿದು ಬಿದ್ದ ಘಟನೆ ಧರ್ಮಸ್ಥಳ ಸಮೀಪದ ಕಲ್ಲೇರಿಯಲ್ಲಿ ನಡೆದಿದೆ.
ಸ್ಥಳೀಯ ಸೇವಾ  ಸಹಕಾರಿ ಭ್ಯಾಂಕ್ ನ ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು  ಡಿ 05 ರಂದು ಕಟ್ಟಡದ ಮೇಲ್ಚಾವಣಿಯ ಒಂದು ಬದಿಯಲ್ಲಿ‌ ಕಾಂಕ್ರೀಟಿಕರಣದ ಕಾಮಗಾರಿ ನಡೆಯುತಿದ್ದಾಗ ಏಕಾಏಕಿ ಕುಸಿದು ಬಿದ್ದಿದೆ ಕಾಂಕ್ರೀಟ್ ಹಾಕಲು  ಕಂಬಗಳ ಅಸಮರ್ಪಕ ಜೋಡಣೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.  ದುರದೃಷ್ಟವಶಾತ್ ಆ ಸಮಯದಲ್ಲಿ ಸ್ಥಳದಲ್ಲಿ‌ ಕಾರ್ಮಿಕರು   ಯಾರೂ ಇಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ದೊಡ್ಡದೊಂದು ಅಪಾಯ ಸಂಭವಿಸುತಿದ್ದು ಮಂಜುನಾಥನ ಕೃಪೆಯಿಂದ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಸಾರ್ವಜನಿಕರಾಡಿಕೊಳ್ಳುತಿದ್ದಾರೆ.

error: Content is protected !!