ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ರಸ್ತೆಗೆಸೆಯಲ್ಪಟ್ಟು ಹೊಟೇಲ್ ಉದ್ಯಮಿ ಸ್ಥಳದಲ್ಲೇ ಸಾವು.

 

 

ಬೆಳ್ತಂಗಡಿ:ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಿಡುಪೆ ರಸ್ತೆಯ ಹೇಡ್ಯ ಎಂಬಲ್ಲಿ ಜ 06 ತಡರಾತ್ರಿ 11.15 ಗಂಟೆಗೆ ನಡೆದಿದೆ.
ಉಜಿರೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತಿದ್ದ ಕೊಯ್ಯೂರು ಮಲೆಬೆಟ್ಟು ನಿವಾಸಿ ರಘು ಎಂಬವರು ತನ್ನ ಹೊಟೇಲ್ ನಲ್ಲಿ ಕೆಲಸ ಮಾಡುತಿದ್ದ ನೌಕರನನ್ನು ರಾತ್ರಿ ಅವರ ಮನೆಗೆ ಬಿಟ್ಟು ಹಿಂದಿರುಗುವ ವೇಳೆ ಹೇಡ್ಯ ಜಂಕ್ಷನ್ ಬಳಿ ಆಗಷ್ಟೆ ಪಿಕಪ್ ವಾಹನವೊಂದು ಅಪಘಾತವೆಸಗಿದ ಪರಿಣಾಮ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು ತಂತಿಯು ರಸ್ತೆಯಲ್ಲಿ ಇತ್ತೆನ್ನಲಾಗಿದೆ . ತಕ್ಷಣ ಸ್ಥಳೀಯರು ತೆರವು ಕಾರ್ಯ ಮಾಡಿಕೊಂಡಿದ್ದು ದೂರದಿಂದ ಸ್ಕೂಟರ್ ಬರುವುದನ್ನು ಗಮನಿಸಿದ ಕೆಲವರು ನಿಲ್ಲಿಸಲು ಸೂಚಿಸಿದಾಗ ಮಧ್ಯರಾತ್ರಿಯಾದ್ದರಿಂದ‌ ಹೆದರಿ ಅವರು ಸ್ಕೂಟರ್ ನಿಲ್ಲಿಸದೇ ಮುಂದೆ ಚಲಿಸಿದಾಗ ತಂತಿ ತುಂಡಾಗಿ ಬಿದ್ದ ಅರಿವಿರದೆ ಇವರ ಕುತ್ತಿಗೆಗೆ ತಂತಿ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!