ಕಾಂಗ್ರೆಸ್ ನಾಯಕರ ಗೂಂಡಾ ವರ್ತನೆ ಖಂಡನೀಯ: ಡಿ.ಕೆ. ಸುರೇಶ್  ವರ್ತನೆಗೆ  ಆಕ್ರೋಶ ವ್ಯಕ್ತಪಡಿಸಿದ  ಶಾಸಕ ಹರೀಶ್ ಪೂಂಜ.

 

 

ಬೆಳ್ತಂಗಡಿ: ಮುಖ್ಯಮಂತ್ರಿಗಳ ಎದುರೇ ವೇದಿಕೆಯಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್​ನಾರಾಯಣ ಅವರ ಮೇಲೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಅದೇ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ. ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅವರದ್ದು ಗೂಂಡಾ ರಾಜಕಾರಣ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯ ಸರಕಾರದ ಸಚಿವರೊಬ್ಬರು ರಾಜ್ಯದ ಮುಖ್ಯಮಂತ್ರಿ ಅವರ ಉಪಸ್ಥಿತಿಯಲ್ಲಿ ವೇದಿಕೆಯ ಮೇಲೆ ಮಾತನಾಡುವ ವೇಳೆ ಕಾಂಗ್ರೆಸ್ ನಾಯಕರ ಗೂಂಡಾ ವರ್ತನೆ ನಿಜಕ್ಕೂ ಖಂಡನೀಯ ಮತ್ತು ಅಕ್ಷಮ್ಯ.

ಬಾಯಿ ತೆಗೆದರೆ ಪ್ರಜಾಪ್ರಭತ್ವದ ರಕ್ಷಣೆ, ಸಂವಿಧಾನದ ಆಶಯಗಳ ಪಾಲನೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುವ ಕಾಂಗ್ರೆಸ್ ನಾಯಕರೇ, ನಿಮ್ಮ ಸಂಸದರೊಬ್ಬರು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು ಇದ್ದ ವೇದಿಕೆಯಲ್ಲಿ ಸಚಿವರೊಂದಿಗೆ ಗೂಂಡಾಗಳಂತೆ ವರ್ತನೆ ಮಾಡಿದ್ದು ಎಷ್ಟು ಸರಿ!?

ಈ ರೀತಿಯ ದುರ್ವರ್ತನೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲದೆ ಮತ್ತೇನು? ದಶಕಗಳಿಂದ ಕಾಂಗ್ರೆಸ್ ಕಲಿಸಿ ಕೊಟ್ಟ ಸಂಸ್ಕಾರ ಮತ್ತು ಶಿಕ್ಷಣ ಏನೆಂಬುದನ್ನು ಸಂಸದ ಡಿಕೆ ಸುರೇಶ್ ತೋರಿಸಿದ್ದಾರೆ ಎಂದು ಶಾಸಕರು ಕಿಡಿಕಾರಿದ್ದಾರೆ.

error: Content is protected !!