ಮತ್ತೆ ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕ ಚಟುವಟಿಕೆ…?: 50:50 ರೂಲ್ಸ್…?, ಆರೆಂಜ್ ಅಲರ್ಟ್ ಘೋಷಣೆ ಸಾಧ್ಯತೆ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಹಿನ್ನೆಲೆ: ಇಂದು ಸಂಜೆ ತಜ್ಞರ ನೇತೃತ್ವದಲ್ಲಿ ಮಹತ್ವದ ಸಭೆ:

 

 

ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಭೀತಿ ಎದುರಾಗಿದ್ದು, ರಾಜ್ಯದಲ್ಲಿ ಮೂರನೇ ಅಲೆ ಪ್ರವೇಶವಾಗಿದೆ. ಸತತವಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ತಜ್ಞರು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹಲವು ‌ಶಿಫಾರಸ್ಸುಗಳನ್ನು ನೀಡಿರುವ ಹಿನ್ನೆಲೆ‌ ಇಂದು ಸಂಜೆ ತಜ್ಞರ ನೇತೃತ್ವದಲ್ಲಿ ನಡೆಸುವ ಸಭೆಯಲ್ಲಿ ರಾಜ್ಯದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಕಂಡುಬಂದಿದೆ.
ಮೂರು ಕಲರ್ ಕೋಡ್ ಆಧಾರದಲ್ಲಿ ತಾಂತ್ರಿಕ ಸಲಹಾ ಸಮಿತಿ ಮೂರನೇ ಅಲೆ ಕುರಿತು ವರದಿ ನೀಡಿದೆ ಎನ್ನಲಾಗಿದ್ದು, ಯೆಲ್ಲೋ ಅಲರ್ಟ್​​ನಿಂದ ಇಂದು ಆರೇಂಜ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆಯಿದೆ. ಇದು 50:50 ಸೂತ್ರ, ಇದನ್ನೇ ಮೊದಲ ಹಂತವಾಗಿ ಜಾರಿ ಮಾಡಲಿದೆ‌ ಎನ್ನಲಾಗುತ್ತಿದೆ. ಆರೆಂಜ್ ಅಲರ್ಟ್ ಘೋಷಣೆಯಾದಲ್ಲಿ ಸಿನಿಮಾ ಮತ್ತು ಆಡಿಟೋರಿಯಂ, ಶಾಲೆ – ಕಾಲೇಜು, ಪಬ್ ಮತ್ತು ಬಾರ್, ರೆಸ್ಟೋರೆಂಟ್, ಕಚೇರಿಗಳು, ಫ್ಯಾಕ್ಟರಿ, ಬಸ್​​ಗಳು, ಸಲೂನ್, ಕಟ್ಟಿಂಗ್ ಶಾಪ್, ಮನರಂಜನಾ ಕ್ಲಬ್, ಮೆಟ್ರೋ ರೈಲುಗಳಲ್ಲಿ 50-50 ನಿಯಮ ಜಾರಿಗೆ ಬರಲಿದೆ.

ಬೆಳಗ್ಗೆ 6ರಿಂದ 1ರವರೆಗೆ ಮಾತ್ರ ಓಪನ್…?:

ಮಾಲ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್​ ಸೇರಿದಂತೆ ಪ್ರಮುಖ ಚಟುವಟಿಕೆಗಳಿಗೆ ಬೆಳಗ್ಗೆ 6 ಗಂಟೆ ಮಧ್ಯಾಹ್ನ 1 ತನಕ ಮಾತ್ರ ಕಾರ್ಯ ನಿರ್ವಹಿಸುವ ಕುರಿತು ‌ಆದೇಶ ಹೊರಡಿಸುವ ಸಾಧ್ಯತೆಯಿದೆ. ಆದರೆ ಆರೋಗ್ಯ ಸಂಸ್ಥೆಗಳಿಗೆ ಈ ನಿರ್ಬಂಧ ಇರುವುದಿಲ್ಲ. ಅದೇ ರೀತಿ ಸ್ವೀಮಿಂಗ್ ಪೋಲ್, ಜಿಮ್ ಹಾಗೂ ಫಿಟ್ನೆಸ್ ಸೆಂಟರ್​​ಗಳು ತರಬೇತಿಗಾಗಿ ತೆರೆಯಬಹುದು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಚಟುವಟಿಕೆಗಳು, ಅಂತಾರಾಷ್ಟ್ರೀಯ ಪ್ರಯಾಣಿಕರ ಗಮನದ ಕುರಿತು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುವ ಸಾಧ್ಯತೆ.

ಸೀಮಿತ ಜನರ ನಡುವೆ ಮದುವೆ?:

ಮದುವೆ ಸಮಾರಂಭಗಳಲ್ಲಿ 100ರಿಂದ 200, ಅಂತ್ಯಕ್ರಿಯೆಗೆ 50ರಿಂದ 100 ಮಂದಿ ಮಾತ್ರ ಸೇರಬಹುದು ಎಂಬ ಆದೇಶ ಬರು ಸಾಧ್ಯತೆಯಿದೆ.‌ ದೇವಸ್ಥಾನ, ಉದ್ಯಾನ, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮೃಗಾಲಯಗಳು, ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಗಳಲ್ಲಿ ಕಡ್ಡಾಯ ಕೋವಿಡ್ ನಿಯಮ ಪಾಲನೆಯೊಂದಿಗೆ ತೆರೆಯಲು ಅವಕಾಶ ನೀಡುವ ಸಾಧ್ಯೆಯಿದೆ.

ತಾಲೂಕಿಗೊಂದು ವಾರ್ ರೂಂ ಸ್ಥಾಪಿಸಿ, ಕೋವಿಡ್ ಕೇರ್ ಸೆಂಟರ್, ಟೆಲಿಕನ್ಸಲ್ಟೇಷನ್ ಮಾಡುವಂತೆ ಸೂಚನೆ ನೀಡಲು ಶಿಫಾರಸು ಮಾಡಲಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟರೆ ಸಾಂಸ್ಥಿಕ ಐಸೋಲೇಷನ್ ಕಡ್ಡಾಯ ಮಾಡಿ, ಜಿನೋಮ್ ಸೀಕ್ವೇನ್ಸಿಂಗ್‌ ವರದಿ ಬರುವವರೆಗೆ ಇರಬೇಕು. ಖಾಸಗಿಯಾಗಿ ಐಸೋಲೇಷನ್​​ನಲ್ಲಿ ಇದ್ದು, ಸೋಂಕಿತ ವ್ಯಕ್ತಿಯೇ‌ ಖರ್ಚು, ವೆಚ್ಚ ಭರಿಸುವುದು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.

ರೆಡ್ ಅಲರ್ಟ್ ಸಾಧ್ಯತೆ ಹಿನ್ನೆಲ‌ ಮುನ್ನೆಚ್ಚರಿಕೆ:

ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇದ್ದಲ್ಲಿ ಯೆಲ್ಲೋ ಅರ್ಲಟ್, ಶೇ. 1ರಿಂದ ಶೇ. 2ರಷ್ಟು ಇದ್ದಲ್ಲಿ ಆರೆಂಜ್ ಅಲರ್ಟ್​, ಶೇ. 2ಕ್ಕಿಂತ ಹೆಚ್ಚು ಇದ್ದಲ್ಲಿ ರೆಡ್ ಅಲರ್ಟ್ ಎಂದು ಘೋಷಿಸಿ ನಿರ್ಬಂಧಗಳನ್ನು ಹೇರಲು ಬಳಸಲು ಸೂಚನೆ ನೀಡಲಾಗಿದೆ.‌ ಆದ್ದರಿಂದ ಸೋಮವಾರ ಪಾಸಿಟಿವಿಟಿ ದರ ಶೇ. 1.60ರಷ್ಟಿದ್ದು, ಕೆಲ ದಿನಗಳಲ್ಲಿ ರೆಡ್ ಅಲರ್ಟ್ ಮುನ್ಸೂಚನೆ ಹಿನ್ನೆಲೆ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯ ಸರಕಾರ 50:50 ನಿಯಮ ಜಾರಿ ಮಾಡುವ ಸಾಧ್ಯತೆ ಇದೆ. ಪಾಸಿಟಿವಿಟಿ ದರ 3ಕ್ಕಿಂತ ಹೆಚ್ಚಾದಲ್ಲಿ ನಿಯಂತ್ರಣ‌ ಕಷ್ಟ ಸಾಧ್ಯ. ಈ ಹಿನ್ನೆಲೆ ತಜ್ಞರು ಎಚ್ಚರಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

error: Content is protected !!