ಬೆಳ್ತಂಗಡಿ ಪೋನ್ ಬೀ ಮೊಬೈಲ್ ಶಾಪ್ ಲಕ್ಕಿ ಡ್ರಾ , ವಿಜೇತರ ಆಯ್ಕೆ.

 

 

ಬೆಳ್ತಂಗಡಿ: ನಗರದ ಮೂರು ಮಾರ್ಗದ ಅನುರಾಗ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಪೋನ್ ಬೀ ಮೊಬೈಲ್ ಶಾಪ್ ಕಳೆದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ ಲಕ್ಕಿ ಕೂಪನ್ ನ ಡ್ರಾ ಡಿ 25 ರಂದು ಸಂಜೆ ನಡೆಯಿತು. ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು ಪ್ರಥಮ ವಿಜೇತರನ್ನು ಆಯ್ಕೆ ಮಾಡಿದರು. ಎರಡನೇ ವಿಜೇತರನ್ನು ನ್ಯಾಯವಾದಿ ಮನೋಹರ್ ಇಳಂತಿಲ, ಮೂರನೇ ವಿಜೇತರನ್ನು ಎಸ್ ಡಿ ಎಂ ಶಾಲಾ ಶಿಕ್ಷಕಿ ಪ್ರಮೀಳ ನೆರವೇರಿಸಿದರು.‌ಈ ಸಂದರ್ಭದಲ್ಲಿ ಹರೀಶ್ ಸ್ವಾತಿ ಮೊಬೈಲ್ , ಅರಿಹಂತ್ ಆಯನ್ಸ್ ಮೊಬೈಲ್ , ಲಲಿತ ಕುಲಾಲ್ ವಂಶಿಕ ಬ್ಯೂಟಿ ಪಾರ್ಲರ್, ಔಟ್ ಲುಕ್ ಡ್ರೆಸ್ಸಸ್ ಮಾಲಕ ಚಂದ್ರಹಾಸ, ಮೋಹನ್ ಕುಲಾಲ್, ವಿವೋ ಕಂಪನಿಯ ದಿನೇಶ್, ವರದರಾಜ್, ಹಾಗೂ ಒಪ್ಪೊ ಕಂಪನಿಯ ಶರತ್ ಉಪಸ್ಥಿತರಿದ್ದರು.
ಪೋನ್ ಬೀ ಮಾಲಕ ಗೋಪಾಲಕೃಷ್ಣ ಸ್ವಾಗತಿಸಿ ರಕ್ಷಿತಾ ಪೂಜಾರಿ ವಂದಿಸಿದರು.

ಡ್ರಾ ಫಲಿತಾಂಶದ ಕೂಪನ್ ನಂಬ್ರ

ಪ್ರಥಮ ಬಹುಮಾನದ ಕೂಪನ್ ನಂಬ್ರ 2152, ದ್ವಿತೀಯ ಬಹುಮಾನದ ಕೂಪನ್ ನಂಬ್ರ 1674, ತೃತೀಯ ಬಹುಮಾನ ಕೂಪನ್ ನಂಬ್ರ 2000.

error: Content is protected !!