ವ್ಯವಹಾರದಲ್ಲಿ ಬದ್ಧತೆ ಇದ್ದರೆ ಯಶಸ್ಸು: ಕಮೀಷನರ್ ಎನ್ ಶಶಿಕುಮಾರ್ ಉಜಿರೆ ರುಡ್ ಸೆಟ್ ನಲ್ಲಿ ತರಬೇತಿ ಸಮರೋಪ ಸಮಾರಂಭ.

 

 

 

ಬೆಳ್ತಂಗಡಿ: ವ್ಯವಹಾರದಲ್ಲಿ‌ ಬದ್ಧತೆ ಇದ್ದರೆ ಯಶಸ್ಸು ಸಿಗುತ್ತದೆ ಗ್ರಾಹಕರ‌‌ ಮನೋಭಾವಕ್ಕನುಗುಣವಾಗಿ ನಮ್ಮ ವೃತ್ತಿಯಲ್ಲಿ‌ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ದ.ಕ.ಜಿಲ್ಲಾ ಪೊಲೀಸ್ ಕಮೀಷನರ್ ಎನ್‌. ಶಶಿಕುಮಾರ್ ಹೇಳಿದರು.
ಅವರು, ಬುಧವಾರ ಉಜಿರೆ ರುಡ್ ಸೆಟಿಯಲ್ಲಿ ಮೆನ್ಸ್ ಪಾರ್ಲರ್ ಮತ್ತು‌ ಸೆಲೂನ್ ಉದ್ಯಮಿಗಳ 30 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ತರಬೇತುಗೊಂಡವರಿಗೆ ಪ್ರಮಾಣ ಪತ್ರಗಳನ್ನು‌ ವಿತರಿಸಿ ಮಾತನಾಡಿದರು.
ಗ್ರಾಹಕರ ತೃಪ್ತಿಯೇ ನಮಗೆ ಆಧಾರ. ಸೆಲೂನ್‌ಗೆ ಬರುವವರಲ್ಲಿ ಚೆನ್ನಾಗಿ ಮಾತನಾಡಿ, ಸೆಳೆಯುವುದೂ ಒಂದು ಕಲೆಯೇ ಆಗಿದೆ. ಸ್ವಂತ ಉದ್ಯೋಗ ಮಾಡುವುದರಿಂದ ತನಗೆ ಮಾತ್ರವಲ್ಲದೆ ತನ್ನನ್ನು ನೆಚ್ಚಿಕೊಂಡ ಕುಂಟುಂಬಕ್ಕೂ ಸ್ಥೈರ್ಯ ತುಂಬುತ್ತದೆ. ಕೇವಲ ಬೆಳಿಗ್ಗೆ ಕಚೇರಿಗೆ ತೆರಳಿ, ಸಂಜೆ‌ ಮರಳಿ ಬರುವುದರಲ್ಲಿಯೇ ಜೀವನ ಕಳೆದು ಹೋಗಬಾರದು. ಸ್ವ ಉದ್ಯೋಗವು ಸೃಜನಶೀಲತೆಗೆ ದಾರಿಮಾಡಿಕೊಡುತ್ತದೆ ಎಂದ ಅವರು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದ ರುಡ್‌ಸೆಟಿಯಿಂದ‌ ಬಡತನದ ವಿಮೋಚನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ರುಡ್‌ಸೆಟಿಯ ಕಾರ್ಯನಿರ್ವಾಹಕ‌ ನಿರ್ದೇಶಕ ಗಿರಿಧರ ಕಲ್ಲಾಪುರ ವಹಿಸಿದ್ದರು.
ವೇದಿಕೆಯಲ್ಲಿ ಕೇಶ ಶೃಂಗಾರ ಸಂಸ್ಥೆ ” ಸ್ಪಿನ್ ” ಸಹಸಂಸ್ಥಾಪಕ ಮಹೇಶ್, ತರಬೇತುದಾರರಾದ ನವೀನ್, ಶ್ರೀನಿವಾಸ, ರುಡ್‌ಸೆಟಿ ನಿರ್ದೇಶಕ ಎಮ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ತರಬೇತಿಯಲ್ಲಿ 35 ಮಂದಿ ಭಾಗವಹಿಸಿದ್ದರು. ನಾಗೇಂದ್ರ ಹಾಗೂ ವಿರೂಪಾಕ್ಷ ಅನಿಸಿಕೆ‌ ವ್ಯಕ್ತಪಡಿಸಿದರು.
ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಾಹಂ ಸ್ವಾಗತಿಸಿ, ಕಾರ್ಯಕ್ರಮ‌ ನಿರ್ವಹಿಸಿದರು. ಉಪನ್ಯಾಸಕಿ ಅನಸೂಯಾ ವಂದಿಸಿದರು.

error: Content is protected !!