ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆಯವರ ಹೆಸರಲ್ಲಿ ಶಾಶ್ವತ ಯೋಜನೆ: ಶಾಸಕ ಹರೀಶ್ ಪೂಂಜ

 

 

 

ಬೆಳ್ತಂಗಡಿ:ಸರಳತೆಗೆ ಗಾಂಧಿ ಅವರ ಜೀವನ ಚರಿತ್ರೆಯನ್ನು ನಾವು ಪುಸ್ತಕದಲ್ಲಿ ಓದಿದ್ದೇವೆ ಅದರೆ ನಮ್ಮ ಕಣ್ಣೆದುರಿನಲ್ಲಿ ಗಾಂಧಿ ವಿಚಾರ ಧಾರೆ ತತ್ವಗಳನ್ನು ಹಾಗೂ ಗಾಂಧೀಜಿಯವರ ರೀತಿಯಲ್ಲಿ ಬದುಕಿದ  ಸರಳ ವ್ಯಕ್ತಿ   ಭೋಜರಾಜ ಹೆಗ್ಡೆಯವರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸಾರ್ವಜನಿಕ ನುಡಿ ನಮನ ಸಮಿತಿ ಆಯೋಜಿಸಿದ ತಾಲೂಕಿನ‌ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿ ಮಾತನಾಡಿದರು.ಭೋಜರಾಜ ಹೆಗ್ಡೆ ಅವರು ಸಮಾಜದ ಮೇಲಿರುವ ಕಾಳಜಿಯಿಂದ ಸಮಾಜಜೀವಿಯಾಗಿ ಬದುಕಿದವರು.ಅವರು ಸರಳತೆ ಹಾಗೂ ವಿನಯತೆಯೊಂದಿಗೆ ಎಲ್ಲರನ್ನೂ ಪ್ರೀತಿಯಿಂದ ನನ್ನವರು ಎಂಬ ಭಾವನೆಯಲ್ಲಿ ಮಾತನಾಡಿಸುತಿದ್ದರು. ಗಾಂಧಿ ವಿಚಾರದಡಿಯಲ್ಲಿ ತನ್ನ ಜೀವನದುದ್ದಕ್ಕೂ ಖಾದಿಯನ್ನೇ ಉಟ್ಟು ಗಾಂಧಿ ತತ್ವದ ನಿತ್ಯ ಜೀವನದ ಪರಿಪಾಲಕರಾಗಿ ಜೀವನ ನಡೆಸಿದವರು. ಜೀವನದುದ್ದಕ್ಕೂ ಸ್ವಾತಂತ್ರ್ಯ ಭಾರತದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಮುಂಚೂಣಿಯಲ್ಲಿದ್ದವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಇನ್ನಿತರರೊಂದಿಗೆ ಸೇರಿ ಜೈಲುವಾಸವನ್ನೂ ಅನುಭವಿಸಿದವರು . ದೇಶ ಎಂಬ ಕಲ್ಪನೆಯಲ್ಲಿ ಸಮರ್ಪಣಾ ಭಾವದಲ್ಲಿ ಬದುಕಿದಂತಹ ಭೋಜರಾಜ ಹೆಗ್ಡೆಯವರು ಅವರ ಜೀವನ ಮತ್ತು ವ್ಯಕ್ತಿತ್ವ ಅವರ ಮರಣದವರೆಗೆ ಸೀಮಿತವಾಗಬಾರದು ನಿರಂತರ ಹಾಗೂ ಶಾಶ್ವತವಾಗಿರಬೇಕು. ಯಾವ ವ್ಯಕ್ತಿಯ ಹೆಸರು ಮರಣದ ನಂತರವೂ ಶಾಶ್ವತವಾಗಿ ಉಳಿಯುತ್ತದೋ ಅಂತಹ ವ್ಯಕ್ತಿಗಳು ಜನನ ಮತ್ತು ಮರಣದ ನಡುವಿನಲ್ಲಿ ಅವರು ಬದುಕಿರುವ ಜೀವನ ನಿರಂತರವಾಗಿದ್ದರೆ ಮಾತ್ರ ಶ್ರೇಷ್ಠ ಜೀವನ ಆಗುತ್ತದೆ. ದೇಶಕ್ಕೋಸ್ಕರ ಅವರು ಕೊಟ್ಟಿರುವಂತಹ ಸಮರ್ಪಣಾ ಭಾವದ ಜೀವನ ಸಾರ್ಥಕತೆಯನ್ನು ಪಡೆಯಬೇಕು ಎಂಬ ಉದ್ದೇಶದಿಂದ ಹಿರಿಯರ ಜೊತೆ ಮಾತುಕತೆ ನಡೆಸಿ ತಾಲೂಕಿನಲ್ಲಿ  ಭೋಜರಾಜ ಹೆಗ್ಡೆ ಅವರ ಹೆಸರಿನಲ್ಲಿ ಶಾಶ್ವತವಾದ ಕಾರ್ಯಕ್ರಮ ಮಾಡುವಂತಹ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಯೋಜನೆ ರೂಪಿಸಿಕೊಂಡು ಮುಂದುವರಿಯಲಾಗುವುದು ಎಂದರು. ಕಾರ್ಯಕ್ರಮವು ಮೂಡಬಿದ್ರೆ ಜೈನ‌ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

error: Content is protected !!