ಚಳಿಗಾಲದ ಅಧಿವೇಶನದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿ : ತುಳುವೆರೆ ಪಕ್ಷ ಆಳುವ ಸರ್ಕಾರಗಳ ನಿರ್ಲಕ್ಷ್ಯ ದಿಂದ ತುಳು ಭಾಷೆ ಅಳಿವಿನ ಅಂಚಿನಲ್ಲಿದೆ.

 

 

 

 

 

 

ಬೆಳ್ತಂಗಡಿ: ತುಳುವರ ಶತಮಾನದ ಬೇಡಿಕೆ ತುಳು ಭಾಷೆಗೆ ಸ್ಥಾನಮಾನ ಮತ್ತು ತುಳು ರಾಜ್ಯ ರಚನೆ ಆದರೆ ಆಳುವ ಸರ್ಕಾರಗಳ ದಿವ್ಯ ನಿರ್ಲಕ್ಷ ಇಂದು ತುಳು ಭಾಷೆಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ. ನಿರಂತರ ನಿರ್ಲಕ್ಷದಿಂದಾಗಿ ತುಳುವರು ನಮ್ಮನ್ನು ಆಳಿದ ರಾಷ್ಟ್ರೀಯ ಪಕ್ಷಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆಗೆ ನಮ್ಮ ಶಾಸಕರುಗಳು ಮತ್ತು ಸಚಿವರುಗಳು ಸ್ಪಂದಿಸುತ್ತಿಲ್ಲ ಹಾಗೂ ತುಳುವರ ಬೇಡಿಕೆಗೆ ತದ್ವಿರುದ್ದವಾಗಿ ತುಳುನಾಡಿನಲ್ಲಿ ಕನ್ನಡ ಹೇರಿಕೆಯಲ್ಲಿ ನಿರತರಾಗಿದ್ದಾರೆ, ಇದು ಖಂಡನೀಯ ಮತ್ತು ತುಳುನಾಡಿನಲ್ಲಿ ಕನ್ನಡ ಹೇರಿಕೆಯನ್ನು ನಿಲ್ಲಿಸಬೇಕು ಮತ್ತು ತುಳು ಭಾಷೆಯ ಬೆಳವಣಿಗೆ ಅವಕಾಶ ಕಲ್ಪಿಸಬೇಕು.
ತುಳು ಭಾಷೆಗೆ ಎಲ್ಲಾ ಅರ್ಹತೆಗಳು ಇದ್ದರು ಕೇಂದ್ರ ಸರ್ಕಾರ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿಲ್ಲ. ಇದು ರಾಷ್ಟ್ರೀಯ ಪಕ್ಷಗಳ ತುಳು, ತುಳುನಾಡಿನ ಬಗ್ಗೆ ಇರುವ ಧೋರಣೆಯನ್ನು ತಿಳಿಸುತ್ತದೆ. ಕೇಂದ್ರ ಸರ್ಕಾರವು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ, ತುಳು ರಾಜ್ಯವನ್ನು ರಚಿಸುವ ಮಸೂದೆಯನ್ನು ಮಂಡಿಸಿ ಅಂಗೀಕರಿಸಬೇಕು ಎಂದು ತುಳುವೆರೆ ಪಕ್ಷ ಒತ್ತಾಯಿಸುತ್ತದೆ ಮತ್ತು ತುಳುವೆರೆ ಪಕ್ಷವು ತುಳು ಭಾಷೆ ಮತ್ತು ತುಳುನಾಡು ರಾಜ್ಯದ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ ಎಂದು ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ. ತಿಳಿಸಿದ್ದಾರೆ.

error: Content is protected !!