ಗ್ರಾಮೀಣ ಕ್ರೀಡೆಯು ತಾಲೂಕು ಮಟ್ಟದ ಕ್ರೀಡೆಯಾಗಿ ಬೆಳಗಬೇಕು: ಸಂಪತ್ ಬಿ. ಸುವರ್ಣ . ಕ್ರೀಡಾ ಕ್ಷೇತ್ರದ ಜೊತೆ ಸಾಂಸ್ಕೃತಿಕವಾಗಿ ಶಿರ್ಲಾಲು ಬೆಳಗಲಿ: ರಕ್ಷಿತ್ ಶಿವರಾಂ ಶಿರ್ಲಾಲಿನಲ್ಲಿ ಬಿಲ್ಲವ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

 

 

 

ಬೆಳ್ತಂಗಡಿ: ‘ಗ್ರಾಮೀಣ ಕ್ರೀಡೆಯಾದ ಕೆಸರುಗದ್ದೆಯಲ್ಲಿ ಇಂದು ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರೂ ಹುಮ್ಮಸ್ಸಿನಿಂದ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಈ ಕ್ರೀಡಾ ಕೂಟ ಗ್ರಾಮೀಣ ಕ್ರೀಡೆಯಾಗಿ ಮಾತ್ರ ಇದ್ದು ಇದು ತಾಲ್ಲೂಕು ಮಟ್ಟದ ಕ್ರೀಡೆಯಾಗಿ ಬೆಳಗಬೇಕು’ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿದರು.

ಅವರು ಭಾನುವಾರ ಶಿರ್ಲಾಲು ಕಟ್ರಬೈಲು ಆನಂದ ಪೂಜಾರಿಯವರ ಗದ್ದೆಯಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು-ಕರಂಬಾರು ಇದರ ನೇತೃತ್ವದಲ್ಲಿ ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ , ಯುವವಾಹಿನಿ ಸಂಚಲನಾ ಸಮಿತಿ ಶಿರ್ಲಾಲು-ಕರಂಬಾರು ಇವುಗಳ ಸಹಭಾಗಿತ್ವದಲ್ಲಿ ನಡೆದ ಬಿಲ್ಲವ ಸಮಾಜ ಬಾಂಧವರ ಕೆಸರು ಗದ್ದೆ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

 

 

ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ ಕೆಸರುಗದ್ದೆ ಕ್ರೀಡಾ ಕೂಟ ವಿಭಿನ್ನ ಶೈಲಿಯ ಆಕರ್ಷಣೀಯ ಕ್ರೀಡೆ. ಯುವಕರ ಶ್ರಮ ಈ ಕ್ರೀಡೆಯ ಹಿಂದೆ ಇದೆ. ಕ್ರೀಡಾ ಕ್ಷೇತ್ರದ ಜೊತೆ ಸಾಂಸ್ಕೃತಿಕವಾಗಿ ಶಿರ್ಲಾಲು ಬೆಳಗಲಿ’ ಎಂದು ಹೇಳಿದರು.

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮಾಣಿಂಜ ಮಾತನಾಡಿ,’ ಸಂಘಟನೆ ಯಿಂದ ಸಶಕ್ತರಾಗಲು ಸಾಧ್ಯ. ಬಿಲ್ಲವರು ತಮ್ಮ ಐಕ್ಯತೆಯನ್ನು ಬಿಟ್ಟು ಕೊಡದೆ ರಾಜಕೀಯ, ಶೈಕ್ಷಣಿಕ, ಧಾರ್ಮಿಕವಾಗಿ ಮುಂಚೂಣಿ ನಾಯಕರಾಗಿ ಮೂಡಿ ಬರಬೇಕು’ ಎಂದರು.

ಸಭಾ ಕಾರ್ಯಕ್ರಮವನ್ನು ಸುಲ್ಕೇರಿಮೊಗ್ರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ಉದ್ಘಾಟಿಸಿದರು. ಕ್ರೀಡಾ ಜ್ಯೋತಿಯನ್ನು ಆನಂದ ಪೂಜಾರಿ ಬೆಳಗಿದರು.

ವೇದಿಕೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ, ಗುರಿಕಾರರಾದ ಶ್ರೀಧರ ಬಂಗೇರ ಕರ್ದೊಟ್ಟು, ರವಿ ಪೂಜಾರಿ ಸುದೇರ್ದು, ಶಿರ್ಲಾಲು ಕರಂಬಾರು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಾರಾಯಣ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಕುಶಲ ರಮೇಶ್, ಕಾರ್ಯದರ್ಶಿ ನಳಿನಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ, ಕಾರ್ಯದರ್ಶಿ ಜ್ಞಾನೇಶ್ ಕಟ್ಟ, ಯುವವಾಹಿನಿ ಸಂಚಾಲನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕಟ್ರಬೈಲು, ಕಾರ್ಯದರ್ಶಿ ಜಯಕುಮಾರ್

ಸಮಾರಂಭದ ಅಧ್ಯಕ್ಷತೆಯನ್ನು ಶಿರ್ಲಾಲು ಕರಂಬಾರು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಪಾಲನೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿಕಟ ಪೂರ್ವ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ, ಹಾಲಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಇವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಬಳ್ಳಿದಡ್ಡ, ಮಾಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಪುನೀತ್, ಉಜಿರೆ ಗ್ರಾಮ ಪಂಚಾಯಿತಿ ಸದಸ್ಯ ಗುರುಪ್ರಸಾದ್, ಪತ್ರಕರ್ತ ಮನೋಹರ ಬಳಂಜ, ರಮೇಶ್ ಎಂ.ಎಸ್., ಪ್ರಸಾದ್ ಕುಮಾರ್, ಗುರುಪ್ರಸಾದ್ ಗುರಿಪಲ್ಲ, ಪ್ರಶಾಂತ್ ಮಚ್ಚಿನ, ಗಣೇಶ್ , ನವೀನ್ ಇಂದಬೆಟ್ಟು ಮುಂತಾದವರು ಭಾಗವಹಿಸಿ ಶುಭ ಹಾರೈಸಿದರು.

 

error: Content is protected !!