ಅಕ್ಷರ ಸಂತನಿಗೆ ಬೆಳ್ತಂಗಡಿ ಜನತೆಯಿಂದ ಅಭಿಮಾನದ ಅಭಿನಂದನೆ. ಪದ್ಮಶ್ರೀ ಪುರಸ್ಕ್ರತ ಹರೇಕಳ ಹಾಜಬ್ಬರಿಗೆ ನಾಳೆ   ಅಭಿನಂದನಾ ಸಮಾರಂಭ. ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಸಹಬಾಗಿತ್ವದಲ್ಲಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಗೌರವಾರ್ಪಣೆ

 

 

ಬೆಳ್ತಂಗಡಿ: ಪದ್ಮಶ್ರೀ ಪುರಸ್ಕೃತ  ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ನವೆಂಬರ್ 23 ನಾಳೆ   ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಬೆಳ್ತಂಗಡಿಯ ಜನಪ್ರಿಯ  ಶಾಸಕ ಹರೀಶ್ ಪೂಂಜ  ಇವರು ವಹಿಸಿಕೊಳ್ಳಲಿದ್ದಾರೆ.

ಕಿತ್ತಲೆ ಹಣ್ಣು ಮಾರಿ ದೈನಂದಿನ ಉಳಿಕೆಯಿಂದ ತನ್ನ ಊರಿನಲ್ಲಿ ಶಾಲೆ ತೆರೆದು ತಾನು ಶಿಕ್ಷಣ ಪಡೆಯದಿದ್ದರೂ ತನ್ನ ಊರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಡ ಸಂಕಲ್ಪದೊಂದಿಗೆ ಕಾರ್ಯ ಸಾಧಿಸಿ ರಾಷ್ಟ್ರದಾದ್ಯಂತ ಮನೆ ಮಾತಾದ ಅಕ್ಷರ ಸಂತರಾಗಿ ಇತ್ತೀಚಿಗೆ ರಾಷ್ಟ್ರ ಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಕೊಂಡ ಹರೆಕ್ಕಳ ಹಾಜಬ್ಬರಿಗೆ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ತಾಲೂಕಿನ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ .

error: Content is protected !!