ಸಮುದಾಯದ ‌ಐಕ್ಯತೆಗಾಗಿ ವಾರ್ಷಿಕ ಮಹಾಸಭೆ: ಸಂತೋಷ್ ಕುಮಾರ್ ಲಾಯಿಲಾ

 

 

 

ಬೆಳ್ತಂಗಡಿ: ತಾಲೂಕು ಯುವ ಮರಾಟಿ ಸೇವಾ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ಅಭಿನಂದನಾ ಸಮಾರಂಭ ನ. 21ರಂದು ಬೆಳಗ್ಗೆ 9.30ಕ್ಕೆ ಲಾಯಿಲಾ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಸಭಾಂಗಣದಲ್ಲಿ ನಡೆಯಲಿದೆ.‌ ಸಮಾಜವನ್ನು ಒಟ್ಟುಗೂಡಿಸಿ ಅಭಿವೃದ್ಧಿ ‌ನಡೆಸುವ ಉದ್ದೇಶದಿಂದ ವಾರ್ಷಿಕ ಸಭೆ ನಡೆಸಲಾಗುತ್ತಿದೆ. ಪದಾಧಿಕಾರಿಗಳು ಹೆಚ್ಚು ಸಮುದಾಯದ ಜನತೆ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಲಾಯಿಲಾ ಹೇಳಿದರು.
ಅವರು ‌ಗುರುವಾಯನಕೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.
ತಾಲೂಕಿನಲ್ಲಿ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಸಮುದಾಯದ ಮಂದಿ ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದವರು ಸಮುದಾಯದ ಅಭಿವೃದ್ಧಿಗೆ ಪೂರ್ಣ ಮನಸ್ಸಿನಿಂದ ಶ್ರಮಿಸಬೇಕಿದೆ. ಈ ಮೂಲಕ ತಾಲೂಕಿನ ಸಂಘ ಸಮಾಜದ ಅಭಿವೃದ್ಧಿಗೆ ನೀಡಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ‌ ವಾರ್ಷಿಕ ಸಭೆ ನಡೆಸಲು ಯೋಜನೆ ತಯಾರಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ‌
ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿಗಳಾದ ತಾರನಾಥ್, ಪ್ರಸಾದ್, ಕೋಶಾಧಿಕಾರಿ ಪ್ರಜ್ವಲ್, ಪದಾಧಿಕಾರಿಗಳಾದ ಪ್ರಮೋದ್, ಸಚಿನ್, ರಾಜೇಶ್, ಹರ್ಷಿತ್ ಉಪಸ್ಥಿತರಿದ್ದರು.

error: Content is protected !!