ಸಮಾಜದ ಬಂಧುಗಳಿಗೆ ಸಹಕಾರ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ಬೆಳೆಸಿಕೊಳ್ಳಬೇಕು: ವಸಂತ ಬಂಗೇರ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಹಾಸಭೆ.

 

 

 

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಿ ಬೆಳೆಯಬೇಕು. ಆ ಮೂಲಕ ಸಮಾಜದ ಬಂಧುಗಳಿಗೆ, ವಿದ್ಯಾರ್ಥಿಗಳಿಗೆ ಸಹಕಾರ ನೀಡುವಲ್ಲಿ ಇನ್ನಷ್ಟು ಹೆಚ್ಚಿನ ಮುತುವರ್ಜಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು  ನ 07 ಭಾನುವಾರ ಇ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ  ಸಂಘದ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು.

‘ಸಂಘಕ್ಕೆ ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಕಾರ್ಯಚಟುವಟಿಕೆ ಮಾಡಲು ಸಾಧ್ಯವಾಗಿಲ್ಲ. ಆದರೆ ಅಧ್ಯಕ್ಷರಾದ ಪದ್ಮನಾಭ ಮಾಣಿಂಜರವರು ಸಂಘಕ್ಕಾಗಿ ಭಾರಿ ದೊಡ್ಡ ಸೇವೆಯನ್ನು ನೀಡಿದ್ದಾರೆ. ಅವರು ಮತ್ತು ಮಾಜಿ ಅಧ್ಯಕ್ಷರಾದ ಪೀತಾಂಬರ ಹೇರಾಜೆಯವರು ಸರ್ಕಾರಿ ಅಧಿಕಾರಿಯಾಗಿ ಇರುವ ಸಂದರ್ಭದಲ್ಲೇ ಸಂಘದ ಬಗ್ಗೆ ಅಪಾರ ಕಾಳಜಿ ಬೆಳೆಸಿಕೊಂಡವರು. ಶ್ರೀ ರಾಮ ಕ್ಷೇತ್ರ ಕನ್ಯಾಡಿಯನ್ನು ಉಳಿಸುವಲ್ಲಿ ಆಗಿನ ಸ್ವಾಮಿಗಳಾದ ಆತ್ಮಾನಂದ ಸ್ವಾಮಿಗಳೊಂದಿಗೆ ಪದ್ಮನಾಭ ಮಾಣಿಂಜರ ಕೊಡುಗೆ ಅಪಾರವಾದುದು’ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಮಾತನಾಡಿ, ‘ಸಂಘಕ್ಕೆ ಪ್ರತಿ ವರ್ಷ ಪದಾಧಿಕಾರಿಗಳ ಆಯ್ಕೆ ಒಮ್ಮತದಿಂದ ನಡೆಯಬೇಕು. ಇಲ್ಲಿ ಚುನಾವಣೆ ಬೇಕಾಗಿಲ್ಲ. 21 ನಿರ್ದೇಶಕರ ಆಯ್ಕೆಯೂ ಸೂಚನೆಯ ಮೂಲಕ ಆಗಿ ಹೊಂದಾಣಿಕೆಯೊಂದಿಗೆ ಸಂಘ ಬೆಳೆಯಬೇಕು ಎಂದರು.

ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ 2021 – 2023ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ನಾರಾವಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‍ನ ವ್ಯವಸ್ಥಾಪಕ ಸುಧೀರ್, ಸಹ ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ಧೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ವೇದಿಕೆಯಲ್ಲಿ ನಿರ್ದೇಶಕರಾದ ಚಂದ್ರಹಾಸ ಕೇದೆ, ಸುಜಿತಾ ವಿ. ಬಂಗೇರ, ಯಶೋಧ ಕುತ್ಲೂರು, ಉಮೇಶ್ ಕುಮಾರ್ ಬೆಳ್ತಂಗಡಿ, ಜಯ ಕುಮಾರ್ ನಡ, ಗುಣಕರ ಅಗ್ನಾಡಿ, ಹರೀಶ್ ಸಾಲ್ಯಾನ್ ನಾವೂರು, ಯುವರಾಜ್ ಎಲ್ಯೊಟ್ಟು, ದಯಾನಂದ ಪೊಂಗರ್ದಡಿ, ಉಣ್ಣಿ ಕೃಷ್ಣನ್, ಹರಿಪ್ರಸಾದ್ ಹೊಸಂಗಡಿ, ಪ್ರಭಾಕರ್ ಧರ್ಮಸ್ಥಳ, ವಿಶ್ವನಾಥ ಪೂಜಾರಿ ಗುಂಡೂರಿ, ಜಗದೀಶ್ ಡಿ ಬೆಳ್ತಂಗಡಿ, ಉಮೇಶ್ ಪಾರೆಂಕಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್ ಇದ್ದರು.

ಸಂಘದ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ವರದಿ ವಾಚಿಸಿದರು. ಕೋಶಾಧಿಕಾರಿ ಚಿದಾನಂದ ಪೂಜಾರಿ ಎಲ್ದಕ್ಕ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಜಗದೀಶ್ ಡಿ ಸನ್ಮಾನ ಪತ್ರ ವಾಚಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ವಂದಿಸಿದರು.

 

2021 -23 ನೇ ಸಾಲಿನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಎಲ್ದಕ್ಕ ಆಯ್ಕೆ 

 

 

 

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ 2021 -23 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಎಲ್ದಕ್ಕ, ಉಪಾಧ್ಯಕ್ಷರಾಗಿ ಶೇಖರ ಬಂಗೇರ, ಕಾರ್ಯದರ್ಶಿಯಾಗಿ ಜಯವಿಕ್ರಮ್ ಕಲ್ಲಾಪು, ಕೋಶಾಧಿಕಾರಿಯಾಗಿ ಅಭಿನಂದನ್ ಹರೀಶ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ರಾಜೀವ್ ಸಾಲ್ಯಾನ್ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಸೂರ್ಯನಾರಾಯಣ ಡಿ.ಕೆ.ಕೊಕ್ರಾಡಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಸಂಪತ್ ಬಿ ಸುವರ್ಣ, ಗೋಪಾಲ ಪೂಜಾರಿ, ಮಂಜುನಾಥ ಸಾಲಿಯಾನ್, ಜಗದೀಶ್ ಡಿ, ಗಂಗಾಧರ ಪರಾರಿ, ಸುರೇಶ್ ಕೆ ಪೂಜಾರಿ, ಗುರುಪ್ರಸಾದ್, ಪುರುಷೋತ್ತಮ, ಯಶೋಧರ ಪೂಜಾರಿ, ದಿನೇಶ್ ಕೋಟ್ಯಾನ್, ವಸಂತ ಪೂಜಾರಿ ಪುದುವೆಟ್ಟು, ಯಶೋಧ ಕುತ್ಲೂರು, ಪ್ರೇಮಾ ಉಮೇಶ್, ಪುಷ್ಪಾವತಿ ನಾವರ ಆಯ್ಕೆಯಾದರು.

error: Content is protected !!