ಉಪ್ಪಿನಂಗಡಿಯಲ್ಲಿ‌ 40 ವರ್ಷ ಹಳೆಯ ಗ್ರೆನೇಡ್ ಪತ್ತೆ!: ಸುರಕ್ಷಿತ ಸ್ಥಳದಲ್ಲಿರಿಸಿ ಮಾಹಿತಿ ನೀಡಿದ ಮಾಜಿ ಸೈನಿಕ: ಸಾರ್ವಜನಿಕರಲ್ಲಿ ‌ಮೂಡಿದ ಆತಂಕ, ಪೊಲೀಸರಿಂದ ತನಿಖೆ

 

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಮಾಜಿ ಸೈನಿಕನ ಮನೆ ಬಳಿ ಗ್ರೆನೇಡ್​ಗಳು ಪತ್ತೆಯಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೂಸೇನಾ ರೆಜಿಮೆಂಟ್​​ನಲ್ಲಿ ಎಸ್.ಸಿ.ಒ. ಆಗಿ ನಿವೃತ್ತಿ‌ ಪಡೆದ ಜಯಕುಮಾರ್ ಪೂಜಾರಿ‌ ಅವರ ಮನೆಯ ಬಳಿ ಅಪಾಯಕಾರಿ ಗ್ರೆನೇಡ್​ಗಳು ಪತ್ತೆಯಾಗಿವೆ.‌ ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಜಯಕುಮಾರ್ ಪೂಜಾರಿಯವರು ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಮನೆ ಪಕ್ಕದಲ್ಲಿ ಹರಡಿರುವ ಸ್ಥಿತಿಯಲ್ಲಿ 5 ಗ್ರೆನೇಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್​ನಲ್ಲಿ ಎಸಿಒ ಆಗಿದ್ದರಿಂದ ಅದು ಗ್ರೆನೇಡ್ ಎಂಬುವುದನ್ನು ಕೂಡಲೇ ಪತ್ತೆಹಚ್ಚಿದ್ದಾರೆ. ಸಾರ್ವಜನಿಕರಿಗೆ ಅಪಾಯ ಉಂಟಾಗಬಹುದು ಎಂದು ಅದನ್ನು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.
ದ.ಕ. ಜಿಲ್ಲಾ ಎಸ್​ಪಿ  ಋಷಿಕೇಶ  ಸೋನವಣೆ ಅವರು ಪರಿಶೀಲಿಸಿ ಪ್ರತಿಕ್ರಿಯೆ ನೀಡಿದ್ದು, “ಇದು 40 ವರ್ಷಗಳ ಹಳೆಯ ಗ್ರೆನೇಡ್ ಆಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ತನಿಖೆ ಪ್ರಗತಿಯಲ್ಲಿದೆ” ಎಂದು ಹೇಳಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!