ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿ ಸಾವು. ಮಲವಂತಿಗೆ ಹಳ್ಳ ದಾಟುವಾಗ ನಡೆದ ಘಟನೆ.

 

 

 

ದಿಡುಪೆ:ತೋಟದಿಂದ ಅಡಿಕೆ ಹೆಕ್ಕಿಕೊಂಡು ಹಳ್ಳ ದಾಟುತ್ತಿರುವ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟ ಘಟನೆ ಮಲವಂತಿಗೆ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹಿರಿಮಾರು ನಿವಾಸಿ ಕಿನ್ನಿ ಗೌಡ ಎಂಬವರ ಪುತ್ರ ಗಣೇಶ್ (40) ಎಂದು ಗುರುತಿಸಲಾಗಿದೆ.ಅವರು ಎಂದಿನಂತೆ ತಮ್ಮ ತೋಟದಿಂದ ಅಡಿಕೆ ಹೆಕ್ಕಿ ಮರಳುವ ವೇಳೆ ಮಲ್ಲಕಜಕ್ಕೆ ಬಳಿ ಹಳ್ಳ ದಾಟುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.

ಬಳಿಕ ಸ್ಥಳೀಯರು ಶೋಧ ನಡೆಸಿದಾಗ ,ಜಾರಿಬಿದ್ದ ಸ್ವಲ್ಪ ದೂರ ಕಲ್ಲಿನ ಸಂದಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೃತರಿಗೆ ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

error: Content is protected !!