ಎಸ್.ಡಿ.ಎಂ ಪ.ಪೂ ಕಾಲೇಜು : ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ಪದಪ್ರದಾನ.

 

 

ಉಜಿರೆ : ಯಾವುದೇ ಭಾಷೆ ಬೆಳೆಯಬೇಕಾದರೆ ಆ ಭಾಷೆಯನ್ನು ಪ್ರೀತಿಸಬೇಕೆ ಹೊರತು ಆ ಕಾರಣಕ್ಕಾಗಿ ಇನ್ನೊಂದು ಭಾಷೆಯನ್ನು ದ್ವೇಷಿಸಬಾರದು. ಸಂಸ್ಕೃತ ಭಾಷೆ ಇಂತಹ ಪರಿಸರ ನಿರ್ಮಾಣ ಮಾಡಿಕೊಡುತ್ತದೆ. ಸಂಸ್ಕೃತ ವಿಶ್ವದ ಬಹುಮಾನ್ಯ ಭಾಷೆಯಾಗಿ ಇಂದು ಬೆಳೆಯಲು ಇದೇ ಕಾರಣ. ಸಂಸ್ಕೃತ ಭಾಷೆಯ ಬಗ್ಗೆ ಅರಿವಿಲ್ಲದೆ ಕೆಲವರು ದೂಷಿಸುತ್ತಾರೆ. ಇಂದಿನ ಕಲಿಯುವಿಕೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯುವ ವಾತಾವರಣಕ್ಕೆ ಅನುವು ಮಾಡಿಕೊಡಬೇಕು.
ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ಪ್ರಾಧ್ಯಾಪಕ ಡಾ. ರಾಮಚಂದ್ರ ಪುರೋಹಿತ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ವಿದ್ಯಾಲಕ್ಷ್ಮೀ, ಕೀರ್ತಿ ನಾಗರಾಜ್ ನಾಯ್ಕ್ ಹಾಗೂ ಹರ್ಷಿತಾ ಎಂ.ಕೆ ಇವರಿಗೆ ಕೋಟೇಶ್ವರ ದಿ. ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಪದಾಧಿಕಾರಿಗಳ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.

ಅಂತರಾಧ್ಯಯನ ವೃತ್ತದ ಸಂಯೋಜಕಿ ಧನ್ಯಾ ಹೆಬ್ಬಾರ ಸ್ವಾಗತಿಸಿದರು. ಸಿಂಚನಾ ಜೋಶಿ ನಿರ್ವಹಿಸಿ, ಸಂಸ್ಕೃತ ಸಂಘದ ಅಧ್ಯಕ್ಷ ಕಾರ್ತಿಕ್ ಕಾರಂತ್ ಧನ್ಯವಾದ ಅರ್ಪಿಸಿದರು.

error: Content is protected !!