ಇಂಡಿಯನ್ ಸೀನಿಯರ್ ಛೇಂಬರ್ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುಗೆ.

 

 

:

 

ಬೆಳ್ತಂಗಡಿ: ಇಂಡಿಯನ್ ಸೀನಿಯರ್ ಛೇಂಬರ್ ಮಂಜುಶ್ರೀ ಲೀಜನ್ ವತಿಯಿಂದ ಮಿತ್ತಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ಇತರ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಸೀನಿಯರ್ ಛೇಂಬರಿನ ಅಧ್ಯಕ್ಷ ಲ್ಯಾನ್ಸಿ ಪಿರೇರಾ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಪ್ರಮೋದ್ ಆರ್. ನಾಯಕ್, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಸದಸ್ಯರುಗಳಾದ ಪೃಥ್ವಿ ರಂಜನ್, ಆರ್ವಿನ್ ಡಿ’ಸೋಜ, ದಯಾನಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್ ಗೌಡ, ಅಧ್ಯಾಪಕರು, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

error: Content is protected !!