.
ಉಜಿರೆ : ಸಾಹಿತ್ಯ ಹಾಗೂ ಸಂಗೀತ ಜೀವನದ ಭಾಗವಾಗಬೇಕು. ದಾಸರ ಪದಗಳು ಭಕ್ತಿ ಭಾವದ ಪ್ರತೀಕಗಳು. ಸಾಹಿತ್ಯ ಹಾಗೂ ಸಂಗೀತದ ದೃಷ್ಠಿಯಲ್ಲಿ ದಾಸರ ಕೀರ್ತನೆಗಳು ಮಹತ್ವ ಪಡೆಯುತ್ತವೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ. ಪೂ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ. ಪೂ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ದಾಸರ ಪದಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಚೆನ್ನೈನ ಖ್ಯಾತ ಸಂಗೀತಜ್ಞ ಪ್ರಮೋದ್ ಗೋಖಲೆ ಮಾತನಾಡಿ ದಾಸರ ಪದಗಳು ಕೇವಲ ಸಾಹಿತ್ಯ ದೃಷ್ಠಿಯಲ್ಲಿ ಮಾತ್ರ ರಚನೆಯಾದದ್ದು ಅಲ್ಲ, ಸಾಮಾಜಿಕ ಓರೆ ಕೋರೆಗಳನ್ನು ತಿದ್ದಲು ದಾಸರು ಪ್ರಯತ್ನಿಸಿದರು ಎಂದು ತಿಳಿಸಿ ಅನೇಕ ಕೀರ್ತನೆಗಳ ತರಬೇತಿ ನಡೆಸಿದರು. ಅಕ್ಷತಾ ಪ್ರಮೋದ್ ಅವರು ಸಹ ಪಾಲ್ಗೊಂಡರು.
ಸಾಂಸ್ಕೃತಿಕ ಸಂಘದ ಸದಸ್ಯರಾದ ಸಂಖ್ಯಾಶಾಸ್ತ್ರದ ಉಪನ್ಯಾಸಕಿ ಅಮೃತಾ ಎನ್ ಹಾಗೂ ಅರ್ಥಶಾಸ್ತ್ರ ವಿಭಾಗದ ಪದ್ಮಶ್ರೀ ಹೆಗ್ಡೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚರಿತ್ರಾ ಸ್ವಾಗತಿಸಿ ನಿರ್ವಹಿಸಿದರು. ಸಾಂಸ್ಕೃತಿಕ ಸಂಘದ ಸಂಯೋಜಕಿ ದಿವ್ಯಾಕುಮಾರಿ ವಂದಿಸಿದರು.