ಕಣಿಯೂರು ಗ್ರಾ.ಪಂ ಉಪಾಧ್ಯಕ್ಷ ಸುನಿಲ್ ಸಾಲ್ಯಾನ್ ಹೃದಯಘಾತಕ್ಕೆ ಬಲಿ.

 

 

 

 

ಬೆಳ್ತಂಗಡಿ:ಕಣಿಯೂರು ಗ್ರಾಮ ಪಂಚಾಯತ್  ಉಪಾಧ್ಯಕ್ಷ ಸುನಿಲ್ ಸಾಲ್ಯಾನ್ ಬೆಂಗೈ ಇಂದು ಮದ್ಯರಾತ್ರಿ 3 ಗಂಟೆಗೆ  ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಇವರು ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಹತ್ತು ಹಲವು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರಲ್ಲದೆ ಸರಳ ಸ್ವಭಾವದವರಾದ ಇವರು  ಎಲ್ಲರೊಂದಿಗೆ  ಸದಾ ಆತ್ಮೀಯತೆಯಿಂದ ಇರುತಿದ್ದರು.ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಜ್ವಲ ಯೋಜನೆಯಡಿ ಬಡವರಿಗೆ ಗ್ಯಾಸ್ ವಿತರಿಸಿ ಹೊಗೆ ಮುಕ್ತ ಗ್ರಾಮ ಪಂಚಾಯತ್ ಆಗುವಲ್ಲಿ ಶ್ರಮ ಪಟ್ಟಿದ್ದ ಇವರು ಕೋವಿಡ್ ಸಂದರ್ಭದಲ್ಲಿ ಗ್ರಾಮಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

error: Content is protected !!