ನರೇಂದ್ರ ಮೋದಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ: ಶಾಸಕ ಹರೀಶ್ ಪೂಂಜ. ಲಾಯಿಲ ಬೃಹತ್ ಉಚಿತ ವೈದ್ಯಕೀಯ ಶಿಬಿರ 735 ಮಂದಿ ಉಚಿತ ಆರೋಗ್ಯ ತಪಾಸಣೆಯಲ್ಲಿ ಭಾಗಿ

 

 

 

 

ಬೆಳ್ತಂಗಡಿ:ಕಳೆದ ಎರಡು ವರುಷಗಳಲ್ಲಿ ಜಗತ್ತಿನಲ್ಲಿಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಪ್ರಮುಖವಾಗಿ ಆರೋಗ್ಯಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆ ಇವತ್ತು ವೈದ್ಯಕೀಯ ಲೋಕಕ್ಕೆ ಸವಾಲಾಗಿ ಕೊರೊನಾ ಪರಿಣಮಿಸಿತ್ತು .ಇಂತಹ ಸಂದರ್ಭದಲ್ಲಿ ನೂರುಲ್ ಹುದಾ ಎಜುಕೇಶನ್ ಟ್ರಸ್ಟ್  ಸಾಮಾಜಿಕವಾಗಿ ಹಲವಾರು ಬಂಧುಗಳಿಗೆ ಸಹಾಯಹಸ್ತ ನೀಡಿದೆ ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ  ಎಂದು ಶಾಸಕ ಹರೀಶ್ ಪೂಂಜ ಹೇಳಿದರು ಅವರು ಲಾಯಿಲ ನೂರುಲ್ ಹುದಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ , ನೂರುಲ್ ಹುದಾ ಜುಮ್ಮಾ ಮಸೀದಿ, ಗ್ರಾಮ ಪಂಚಾಯತ್ ಲಾಯಿಲ, ಕೆ ಎಂ ಸಿ ಆಸ್ಪತ್ರೆ ಅತ್ತಾವರ ಸಹಯೋಗದಲ್ಲಿ ನಡೆದ ಬೃಹತ್ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.    ಲಸಿಕೆಯನ್ನು ಕಂಡು ಹಿಡಿದು ಎರಡು ಲಸಿಕೆಗಳನ್ನು ಉಚಿತವಾಗಿ ರಾಷ್ಟ್ರದ ಜನರಿಗೆ ನೀಡಲು‌ ಪ್ರಧಾನಿ ನರೇಂದ್ರ ಮೋದಿಯವರು ಕಾರಣ ಅದ್ದರಿಂದ  ಕೊರೊನಾದ ಯಾವುದೇ  ಭಯ ಆತಂಕವಿಲ್ಲದೆ  ನಾವೆಲ್ಲರೂ ಇಂತಹ  ವಿವಿಧ  ಕಾರ್ಯಕ್ರಮಗಳಲ್ಲಿ  ಭಾಗವಹಿಸುವಂತಾಗಿದೆ  ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಸಂತೋಷ ಪಡುತಿದ್ದೇನೆ.ದೇಶದಲ್ಲಿ ಲಸಿಕಾ ಅಭಿಯಾನ ಆದಾಗ ದಾರಿ ತಪ್ಪಿಸುವಂತಹ ಕೆಲಸ ಅನೇಕರು ರಾಜಕೀಯವಾಗಿ ಮಾಡಿದರು ಅದರೆ ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಹೆಮ್ಮೆಪಡುತಿದ್ದಾರೆ ಲಸಿಕೆ ತೆಗೆದುಕೊಂಡ ಪರಿಣಾಮವಾಗಿ ಕೊರೊನಾ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ.ಎಂಬುವುದನ್ನು ಎಲ್ಲರೂ ಹೇಳುತಿದ್ದಾರೆ. ಯಾಕೆಂದರೆ ಯಾವುದೇ ಜಾತಿ ಧರ್ಮ ವಿಂಗಡನೆ ಮಾಡಿ ಲಸಿಕೆ ಕೊಡುವಂತಹ ಕೆಲಸ ಮಾಡಿಲ್ಲ.ಎಲ್ಲರಿಗೂ ಸಮನಾಗಿ ನೀಡಿ ಎಲ್ಲರೂ ಭಾರತೀಯರು ಎಂಬ ಭಾವನೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರ ಉಚಿತವಾಗಿ ಲಸಿಕೆ ಕೊಡುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದೆ. 7 ವರ್ಷಗಳಿಂದ ನರೇಂದ್ರ ಮೋದಿ ಆಡಳಿತವನ್ನು ಮಾಡುತಿದ್ದಾರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಮುಸಲ್ಮಾನರಿಗೆ ಅನ್ಯಾಯವೆಸಗುತ್ತದೆ ಎಂಬ ಷಡ್ಯಂತ್ರ ರಾಜಕೀಯಕ್ಕಾಗಿ ಗೂಬೆ ಕೂರಿಸುವಂತಹ ಕೆಲಸಗಳು ನಡೆದವು.ಅದರೆ 7 ವರ್ಷದ ಅವಧಿಯಲ್ಲಿ ಈ ದೇಶದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಭಾರತೀಯ ಎನ್ನುವ ಭಾವನೆಯಲ್ಲಿ ಆಡಳಿತ ನಡೆಸಿದ್ದು ಬಾರತೀಯ ಜನತಾ ಪಾರ್ಟಿಯ ನರೇಂದ್ರ ಮೋದಿ ನಾಯಕತ್ವದ ಸರ್ಕಾರ .ಸುಮಾರು 75 ವರ್ಷಗಳ ಕಾಲ ಆಡಳಿತ ಮಾಡಿರುವಂತಹ ಕಾಂಗ್ರೆಸ್ ಅಲ್ಪ ಸಂಖ್ಯಾತ ಸಮುದಾಯಕ್ಕೆ ಇಟ್ಟಂತಹ ಅನುದಾನಗಳು ಎಷ್ಟು ಎಂಬ ಬಗ್ಗೆ ಚರ್ಚೆಗೆ ಬಂದರೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಅನುದಾನಗಳನ್ನು ನರೇಂದ್ರ ಮೋದಿಯವರು ಅಲ್ಪ ಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಇಟ್ಟಿರುವಂತಹ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅದರಲ್ಲೂ ಯಡಿಯೂರಪ್ಪನವರ ಸರ್ಕಾರ ಈ ನೂರುಲ್ ಹುದಾ ಮಸೀದಿಗೆ ಸುಮಾರು ಒಂದು ಕೋಟಿ ಅನುದಾನವನ್ನು ನೀಡಿದೆ.ಮುಂದಿನ ದಿನಗಳಲ್ಲಿ  ಯಾವುದೇ ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಈ ಎಜುಕೇಶನಲ್ ಸಂಸ್ಥೆ ಮಾಡುವ ಪ್ರತಿಯೊಂದು ಕೆಲಸದಲ್ಲೂ ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

 

 

ಗೌರವ ಸ್ವೀಕಾರ ಮಾಡಿ ಮಾತನಾಡಿದ ಲಾಯಿಲ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಛ
ಜಾತಿ ಮತ ಬೇಧವಿಲ್ಲದೆ ಈ ಮಸೀದಿ ಸಂಬಂಧ ಪಟ್ಟಂತ ಎಲ್ಲ ಪದಾಧಿಕಾರಿಗಳು ಗ್ರಾಮದ ಅಭಿವೃದ್ಧಿಗಾಗಿ ತೊಡಗಿಸಿಕೊಂಡು ಇವತ್ತು ನನ್ನನ್ನು ಗೌರವಿಸಿದಕ್ಕಾಗಿ ಅಭಿನಂದನೆಗಳು ಗ್ರಾಮದಲ್ಲಿ ಇರುವಂತಹ ಧಾರ್ಮಿಕ ಸಂಸ್ಥೆಗಳು ಆ ಸಂಸ್ಥೆಗಳಲ್ಲಿ ಇರುವಂತಹ ಸಜ್ಜನ ಬಂಧುಗಳು ಗ್ರಾಮದ ಅಭಿವೃದ್ಧಿ ಯ ದೃಷ್ಟಿಯಲ್ಲಿ ಯಾವುದೇ ಬೇಧಭಾವ ಇಲ್ಲದೆ ಕೆಲಸ ನಿರ್ವಹಣೆ ಮಾಡಿದರೆ ಆ ಗ್ರಾಮ ಯಾವ ರೀತಿ ಮುಂದುವರಿಯುತ್ತದೆ ಎಂಬುವುದಕ್ಕೆ ತಾಲೂಕಿನಲ್ಲಿ ಈ ಲಾಯಿಲ ಗ್ರಾಮ ಪಂಚಾಯತ್ ಕೂಡ ಒಂದು ಉದಾಹರಣೆ.‌ಎಂದರು.

 

 

ಕೊರೊನಾ ಯಾವುದೇ ಜಾತಿ ಮತ ನೋಡಿ ಬಂದಿಲ್ಲ ಬರುವುದೂ ಇಲ್ಲ ಮನುಷ್ಯನ ಕಷ್ಟ ಎಲ್ಲರಿಗೂ ಒಂದೇ ಆ ದೃಷ್ಟಿಯಲ್ಲಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಲ್ಲಿ ಈ ಕಷ್ಟದ ಸಮಯದಲ್ಲಿ ನಾವು ಎದುರಿಸಿದಾಗ ಖಂಡಿತವಾಗಿಯೂ ನಮ್ಮಲ್ಲಿ ಒಂದು ಶಕ್ತಿ ಬರುತ್ತದೆ ಅದು ಮಹಮ್ಮದ್ ಪೈಗಂಬರ್ ಇರಬಹುದು ಏಸುಕ್ರಿಸ್ತ ಇರಬಹುದು ಕೃಷ್ಣ ಇರಬಹುದು ಎಲ್ಲರೂ ಹೇಳಿದಂತಹ ಮಾತು ಶಾಂತಿಯಲ್ಲಿ ಇದ್ದಾಗ ಮನಸ್ಸು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ ಶಾಂತಿಯ ಜೊತೆಗೆ ಬದುಕನ್ನು ನಡೆಸಿದಾಗ ಜೀವನದಲ್ಲಿ ಶಕ್ತಿ ಸಿಗುತ್ತದೆ ಅದರ ಜೊತೆಗೆ ಎಲ್ಲರೂ ಸಾಮೂಹಿಕವಾಗಿ ಜಗತ್ತಿನ ಒಳಿತಿಗೆ ಪ್ರಾರ್ಥನೆಯನ್ನು ಮಾಡಿದಾಗ ಇಡೀ ಸಮಾಜಕ್ಕೆ ಬೇಕಾಗುವಂತಹ ಶಕ್ತಿ ಸಿಗುತ್ತದೆ .ಆ ನಿಟ್ಟಿನಲ್ಲಿ ಹಲವಾರು ವರುಷಗಳಿಂದ ಸೇವಾ ಚಟುವಟಿಕೆಗಳ ಮೂಲಕ ನಮ್ಮಲ್ಲಿ ಜೀವನದ ಉದ್ಧೇಶದ ಬಗ್ಗೆ ಒಂದು ಮಾತು ಹೇಳುತ್ತಾರೆ ಮನುಷ್ಯನ ಪ್ರಗತಿ ಅಥವಾ ಸಂತೋಷ ಎಲ್ಲಿ ಇದೆ ಅಂದರೆ ಜಗತ್ತಿನ ಬಗ್ಗೆ ಅಥವಾ ಸಮಾಜದ ಒಳಿತ್ತಿನ ಬಗ್ಗೆ ಯಾರೆಲ್ಲ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಾರೆ ಸಹಜವಾಗಿ ನಮ್ಮ ಬೆಳವಣಿಗೆಯೂ ಅಗುತ್ತದೆ ಈ ಹಿನ್ನೆಲೆಯಲ್ಲಿ ಈ ವೈದ್ಯಕೀಯ ಶಿಬಿರ ಆರೋಗ್ಯದ ದೃಷ್ಟಿಯಲ್ಲಿ ದೇಹದ ಆರೋಗ್ಯ , ಸಮಾಜದ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಈ ಮೂಲಕ ಶುಭ ಹಾರೈಸುತ್ತೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್, ಎಚ್, ಇ, ಸಿ, ಟಿ, ಲಾಯಿಲ ಅಧ್ಯಕ್ಷ ಅನ್ಸರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಲಾಯಿಲ ಗ್ರಾ.ಪಂ ಆದ್ಯಕ್ಷೆ ಬೆನಡಿಕ್ಟ ಸಲ್ದಾನ .ಉಪಾಧ್ಯಕ್ಷ ಗಣೇಶ್ ಆರ್, ಅಝೀಝ್ ಅಧ್ಯಕ್ಷರು ನೂರುಲ್ ಹುದಾ ಜುಮ್ಮಾ ಮಸೀದಿ ಲಾಯಿಲ, ಅಭಿನಂದನ್ ಹರೀಶ್ ಕುಮಾರ್, ರಾಜೇಶ್ ಶೆಟ್ಟಿ ಲಾಯಿಲ,ಮಹಮ್ಮದ್ ಹನೀಫ್, ಅಬ್ದುಲ್ ಹನೀಫ್, ಮಹಮ್ಮದ್ ರಿಯಾಝ್ ಬಾ ಹಸನಿ ಖತೀಬರು ಲಾಯಿಲ, ಸುಧಾಕರ ಬಿಎಲ್, ಗಣೇಶ್ ಕಣಾಲು, ಶೇಖ್ ಮಹಮ್ಮದ್, ಅಬ್ದುಲ್ ಬಾವುಂಜ್ಙಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 735 ಮಂದಿ ಉಚಿತ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.

error: Content is protected !!