ರೋಟರಿ ಕ್ಲಬ್ ಬೆಳ್ತಂಗಡಿ : ಪೋಲಿಯೋ ನಿರ್ಮೂಲನೆಗಾಗಿ ಜಾಥಾ.

 

 

ಬೆಳ್ತಂಗಡಿ: ಅಂತರಾಷ್ಟ್ರೀಯ ಪೋಲಿಯೋ ನಿರ್ಮೂಲನಾ ದಿನದ ಪ್ರಯುಕ್ತ ರೋಟರಿ ಕ್ಲಬ್ ಬೆಳ್ತಂಗಡಿ, ರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ ನಗರ  ಹಾಗೂ ಲಾಯಿಲ ಇದರ ಆಶ್ರಯದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಜಾಥವನ್ನು ಬೆಳ್ತಂಗಡಿ ಸಂತೆಕಟ್ಟೆಯಿಂದ ಲಾಯಿಲ ಸುಬ್ರಹ್ಮಣ್ಯ ಸಭಾಭವನದವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೋಲಿಯೋ ನಿರ್ಮೂಲನಾ ಸ್ಟಿಕ್ಕರ್  ಬಿಡುಗಡೆ ಗೊಳಿಸಿ ರಿಕ್ಷಾ ಚಾಲಕರಿಗೆ ವಿತರಿಸಲಾಯಿತು. ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ರೊ.ಸುರೇಂದ್ರ ಕಿಣಿ,ಹಾಗೂ  ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಮೇ| ಜ| ನಿವೃತ್ತ ರೊ.ಎಂ.ವಿ.ಭಟ್ ಅವರು ಜಾಥಕ್ಕೆ ಚಾಲನೆ ನೀಡಿದರು

ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆದ  ಕಾರ್ಯಕ್ರಮದಲ್ಲಿ ರೋಟರಿ ‌ಕ್ಲಬ್ ಅಧ್ಯಕ್ಷ ರೊ.ಶರತ್ ಕೃಷ್ಣ ಪಡುವೆಟ್ನಾಯ, ನಿಯೋಜಿತ ಅಧ್ಯಕ್ಷೆಯಾದ ರೊ.ಮನೋರಮಾ, ನಿಯೋಜಿತ ಕಾರ್ಯದರ್ಶಿ ರೊ.ರಕ್ಷಾ ರಾಘ್ನೀಷ್, ವಿವಿಧ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಸಿದ್ದೀಕ್ ಬಿ.ಕೆ ,ಶ್ರೀ ಪ್ರಕಾಶ್ ಬಾಬು ಹಾಗೂ ಶ್ರೀ ಬಾಬು ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಆರು ಜನ ಹಿರಿಯ ರಿಕ್ಷಾ ಚಾಲಕರನ್ನು ಗೌರವಿಸಲಾಯಿತು. ಅದೇ ರೀತಿ ಆರು ಜನ ರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯನ್ನು ವಿತರಿಸಲಾಯಿತು. ಇದೇ ಸಂಧರ್ಭದಲ್ಲಿ  ರೋಟರಿ ಕ್ಲಬ್ ನ ಪಲ್ಸ್ ಪೋಲಿಯೊ ಚೇರ್ ಮಾನ್ ರೊ.ಡಾ.ಶಶಿಕಾಂತ ಅವರ ಮೂಲಕ  ಪೋಲಿಯೋ ನಿರ್ಮೂಲನೆಗಾಗಿ ರೂ.25000/- ವನ್ನು ಅಸಿಸ್ಟೆಂಟ್ ಗವರ್ನರ್ ರೊ.ಸುರೇಂದ್ರ ಕಿಣಿ ಅವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ  ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್  ಓಡಿಯಪ್ಪ ಗೌಡ, ರೊ. ಡಿ.ಎಂ ಗೌಡ, ರೊ ಯಶವಂತ ಪಟವರ್ಧನ್,  ರೊ.ವಿದ್ಯಾಕುಮಾರ ಕಾಂಚೋಡು, ರೊ.ರವಿ ಚಕ್ಕಿತ್ತಾಯ, ರೊ.ರೋನಾಲ್ಡ್ ಲೋಬೋ, ರೊ.ಮಿಥುನ್ ಮಾಡ್ತಾ, ರೊ.ಅರುಣ್ ಕುಮಾರ್, ರೊ.ತ್ರಿವಿಕ್ರಮ ಹೆಬ್ಬಾರ್, ರೊ.ಶ್ರವಣ್ ಕಾಂತಾಜೆ
ಹಾಗೂ ಬೆಳ್ತಂಗಡಿ ನಗರದ ಪಂಚಾಯತ್ ವ್ಯಾಪ್ತಿಯ,  ಹಾಗೂ ಲಾಯಿಲಾ  ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು

ಕೃಷ್ಣಕುಮಾರ್  ಅವರ ಪ್ರಾರ್ಥನೆಯೊಂದಿಗೆ  ಆರಂಭವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ರೊ.ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಪೂರ್ವಾಧ್ಯಕ್ಷ  ರೊ.ಧನಂಜಯರಾವ್  ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ರೊ.ಅಬೂಬಕ್ಕರ್  ವಂದಿಸಿದರು

error: Content is protected !!