ಬೆಳ್ತಂಗಡಿ  ಮುಳಿಯ  ಚಿನ್ನೋತ್ಸವ ಉದ್ಘಾಟನೆ

 

 

ಬೆಳ್ತಂಗಡಿ: ಮುಳಿಯದಲ್ಲಿ ಮುಳಿಯ ಚಿನ್ನೋತ್ಸವ ದ ಉದ್ಘಾಟನೆ ಶ್ರೀ ಸತ್ಯ ಪ್ರಿಯ ಕಲ್ಲೂರಾಯ, ಪ್ರಧಾನ ಅರ್ಚಕರು, ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀಮತಿ ವೀಣಾ ಭಟ್, ಅನಂತ ಮೋಟಾರ್ಸ್, ಉಜಿರೆ ಇವರು ನೆರವೇರಿಸಿದರು. ಅತಿಥಿ ಶ್ರೀ ಸತ್ಯ ಪ್ರಿಯ ಕಲ್ಲೂರಾಯರು , ಮುಳಿಯ ಸಂಸ್ಥೆಯ ಪಾರದರ್ಶಕ ವ್ಯಾಪಾರವನ್ನು ಮೆಚ್ಚಿದರು ಮತ್ತು ತಿಂಗಳ ಉಳಿತಾಯ ಯೋಜನೆಯ ಸ್ವ ಅನುಭವವನ್ನೂ ಹಂಚಿಕೊಂಡು ಶುಭ ಹಾರೈಸಿದರು. ಶ್ರೀಮತಿ ವೀಣಾ ಭಟ್ ಅವರು ಮುಳಿಯದ ಸೇವೆ ಮತ್ತು ನಿಷ್ಟೆಯನ್ನು ಮತ್ತು ಸಾಮಾಜಿಕ ಕಳಕಳಿಯನ್ನು ತಿಳಿಸಿ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ ಅವರು ಗ್ರಾಹಕರ ಅಪೇಕ್ಷೆಯ ಮೇರೆಗೆ ವೆರೈಟಿ ಮತ್ತು ವಿನ್ಯಾಸ ದಲ್ಲಿ ಹೊಸತನ ನೀಡುವ ದೃಷ್ಟಿಯಿಂದ ಚಿನ್ನೋತ್ಸವ ಆಯೋಜಿಸಿದ್ದು ಗ್ರಾಹಕರು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು. ಶಾಖಾ ಪ್ರಬಂಧಕರಾದ ಶ್ರೀ ಗುರುರಾಜ್ ಅವಭೃತ ಅವರು ಸ್ವಾಗತಿಸಿದರು, ಉಪ ಶಾಖಾ ಪ್ರಬಂಧಕರಾದ ಶ್ರೀ ಸತ್ಯ ಗಣೇಶ್ ಅವರು ವಂದಿಸಿದರು. ಸಿಬ್ಬಂದಿ ಕು.ದೀಪಿಕಾ ಅವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!