
ಪಿಲಿಗೂಡು: ಗಾಂಧಿ ಜಯಂತಿ ಅಂಗವಾಗಿ ಹಾಗೂ ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘ ಪಿಲಿಗೂಡು-ಗುಂಪಕಲ್ಲು, ಅಂದ್ರೊಟ್ಟು-ನಡುಗುಡ್ಡೆ ಸಂಘ ಒಂದು ವರ್ಷ ಪೂರೈಸಿದ ಹಿನ್ನೆಲೆ ಪೋಷಣಾ ಅಭಿಯಾನದಡಿ ಸಂಘದ ಸದಸ್ಯರು, ಶಾಲೆ ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪಿಲಿಗೂಡು ಸ.ಹಿ.ಪ್ರಾ. ಶಾಲೆಯ ಆವರಣದಲ್ಲಿ ಶ್ರಮದಾನ ನಡೆಯಿತು.

ಶಾಲಾ ಮಕ್ಕಳ ಅಭಿವೃದ್ಧಿ ಉದ್ದೇಶದಿಂದ ಗದ್ದೆಯನ್ನು ಸಿದ್ಧಗೊಳಿಸಿ ಬದನೆ, ಬೆಂಡೆಕಾಯಿ, ಸೌತೆಕಾಯಿ ಮೊದಲಾದ ತರಕಾರಿ ಬೀಜಗಳನ್ನು ಬಿತ್ತಲಾಯಿತು. ಶಾಲಾವರಣವನ್ನು ಹಾಗೂ ನೀರಿನ ಟ್ಯಾಂಕನ್ನು ವಿದ್ಯಾರ್ಥಿಗಳ ಪೋಷಕರು ಸ್ವಚ್ಛಗೊಳಿಸಿದರು.
ಸ್ವ-ಸಹಾಯ ಸಂಘ ವರ್ಷ ಪೂರೈಸಿದ ಹಿನ್ನೆಲೆ ಸಂಘದ ವತಿಯಿಂದ ಶಾಲಾವರಣದಲ್ಲಿ ಗಿಡ ನಾಟಿ ನೆಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಹಮ್ಮಾಯಿ ಸೌಹರ್ದ ಸಹಕಾರಿ ನಿರ್ದೇಶಕ ರಾಮಕೃಷ್ಣ ನಾಯ್ಕ್ ಪಿಂಡಿವನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್ವರ ಜಿ., ಪ್ರಭಾರ ಮುಖ್ಯ ಶಿಕ್ಷಕಿ ಅನಿತಾ, ಶಿಕ್ಷಕಿ ಚಂದ್ರಕ್ಕಿ, ಶ್ರೀ ಮಹಮ್ಮಾಯಿ ಸ್ವಸಹಾಯ ಸಂಘ ಪಿಲಿಗೂಡು-ಗುಂಪಕಲ್ಲು ಅಧ್ಯಕ್ಷ ಬಾಲಕೃಷ್ಣ ಗುಂಪಕಲ್ಲು, ಅಂದ್ರೊಟ್ಟು-ನಡುಗುಡ್ಡೆ ಸಂಘದ ಅಧ್ಯಕ್ಷ ಲಕ್ಷ್ಮಣ್ ಅಂದ್ರೊಟ್ಟು, ಸಂಘದ ಸದಸ್ಯರಾದ ಅಶೋಕ್ ನಡುಗುಡ್ಡೆ, ಹರ್ಷಿತ್ ಪಿಂಡಿವನ, ಶರತ್ ಕುಮಾರ್ ಕಣಿಯೂರು, ಯತೀಶ್ ಅಂದ್ರೊಟ್ಟು, ನವೀನ್, ಮೋಕ್ಷಿತ್, ರೋಹಿತ್ ಪಿಂಡಿವನ, ಪೋಷಕರಾದ ಪದ್ಮನಾಭ, ಹರೀಶ್ ಆಚಾರ್ಯ, ಸ್ಥಳೀಯರಾದ ರಾಜೀವಿ, ಭೂಮಿಕಾ, ಪ್ರಕಾಶ್, ಪ್ರದೀಪ್, ಶಿವಣ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.