ವೃತ್ತಿಯಲ್ಲಿ ಉತ್ಕ್ರಷ್ಟತೆ ಸಾಧಿಸುವುದು ಅವಶ್ಯ: ಡಾ.ಜಯಕುಮಾರ ಶೆಟ್ಟಿ ಅಭಿಮತ: ಬೆಳ್ತಂಗಡಿಯಲ್ಲಿ ‘ವರ್ಲ್ಡ್ ಫಾರ್ಮಸಿಸ್ಟ್ ಡೇ’ ಆಚರಣೆ

 

 

ಬೆಳ್ತಂಗಡಿ:  ವೃತ್ತಿ ಯಾವುದೇ ಆಗಿರಲಿ ಅದರಲ್ಲಿ ಉತ್ಕ್ರಷ್ಟತೆಯನ್ನು ಸಾಧಿಸಬೇಕು ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವರ್ಲ್ಡ್ ಫಾರ್ಮಸಿಸ್ಟ್ ಡೇ’ ಕಾರ್ಯಕ್ರಮದಲ್ಲಿ ತಾಲೂಕಿನ ಔಷಧಿ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾವತಿ ಉದ್ಘಾಟಿಸಿದರು.
ಸೌತ್ ಕೆನೆರಾ ಕೆಮಿಸ್ಟ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಸುಜಿತ್ ಭಿಡೆ, ಕಾರ್ಯದರ್ಶಿ ಗುರುಚರಣ್ ರಾವ್, ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನವೀನ್ ಚಂದ್ರ ಕಜೆಕಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ.ವಿ, ಕೋಶಾಧಿಕಾರಿ ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

 

 

ಶ್ರೀಮತಿ ಅಶ್ವಿನಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ.ಧರಣೇಂದ್ರ ಜೈನ್ ಅವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು.  ನಂತರ ತಾಲೂಕಿನ ಹಿರಿಯ ಔಷಧಿ ವ್ಯಾಪಾರಿಗಳಾದ ಬೆಳ್ತಂಗಡಿಯ ವಿಘ್ನೇಶ್ ಮೆಡಿಕಲ್ಸ್ ನ ಶ್ರೀ ಎಂ.ದಾಮೋದರ ಪ್ರಭು ಹಾಗೂ ಮಡಂತ್ಯಾರಿನ ಬಲ್ಲಾಳ್ ಮೆಡಿಕಲ್ಸ್ ನ ಶ್ರೀಮತಿ ಪದ್ಮಾ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು
ಶ್ರೀ ಪ್ರಕಾಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಕಾರ್ಯದರ್ಶಿ ಶ್ರೀಧರ ಕೆ.ವಿ.ವಂದಿಸಿದರು.

error: Content is protected !!