ದಾಖಲೆ ಬರೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವ್ಯೋಮ್ ನಿಹಾಲ್ ಜೈನ್, ಅನಘ ಎಸ್.ಕೆ., ವರ್ಚಸ್, ಸ್ಫೂರ್ತಿ, ಸುನೀಲ್, ದಿಶಾ, ಅಭಿಷೇಕ್, ಅನನ್ಯಾ ಭಟ್, ಭಗೀರಥ್ ನಾಯಕ್, ಲಲಿತಾ‌‌ ಅವರಿಗೆ ಪ್ರಥಮ ಸ್ಥಾನ: ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ದಾಖಲೆ ಬರೆದಿದ್ದ ಆನ್ ಲೈನ್ ದೇಶಭಕ್ತಿಗೀತೆ ಸ್ಪರ್ಧೆ: ಮೂರು ಹಂತದಲ್ಲಿ ವಿಜೇತರ ಆಯ್ಕೆ ಪ್ರಕ್ರಿಯೆ, ಪ್ರಥಮ ₹ 10 ಸಾವಿರ, ದ್ವಿತೀಯ ₹ 5 ಸಾವಿರ ನಗದು ಬಹುಮಾನ, ಫಲಕ ವಿತರಣೆ: ಹಾಡು ಹಾಡಿ ರಂಜಿಸಿದ ಖ್ಯಾತ ಗಾಯಕರಾದ ಜಗದೀಶ್ ಆಚಾರ್ಯ ಪುತ್ತೂರು, ಜೀ ಕನ್ನಡ ಸರಿಗಮಪ ಜ್ಯೂರಿ ಸದಸ್ಯೆ ಮಾಲಿನಿ ಕೇಶವ ಪ್ರಸಾದ್ ಹಾಗೂ ದೇಶ ಭಕ್ತಿಗೀತೆ ಸ್ಪರ್ಧಾ ವಿಜೇತರು

 

 

 

ಬೆಳ್ತಂಗಡಿ: ಭಾರತ ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆ, ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿಯ ಜನತೆಗೆ ಆಯೋಜಿಸಿದ್ದ ಆನ್ ಲೈನ್ ದೇಶ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಏರ್ಪಡಿಸಲಾಗಿತ್ತು.

ಬಹುಮಾನ ವಿಜೇತರು ಮತ್ತು ವಿಭಾಗದ ಮಾಹಿತಿ ಈ ಕೆಳಗಿನಂತಿದೆ

 

ಒಂದರಿಂದ 5 ವರ್ಷ:

ಬಾಲಕರ ವಿಭಾಗ: ಪ್ರಥಮ: ವ್ಯೋಮ್ ನಿಹಾಲ್ ಜೈನ್, ದ್ವಿತೀಯ: ಶ್ರವಣ್.

ಬಾಲಕಿಯರ ವಿಭಾಗ: ಪ್ರಥಮ ಅನಘ ಎಸ್.ಕೆ., ದ್ವಿತೀಯ: ತನ್ವಿ ಆರ್.ಜೆ.

5ರಿಂದ 10 ವರ್ಷ ವಿಭಾಗ

: ಪ್ರಥಮ: ವರ್ಚಸ್, ದ್ವಿತೀಯ: ರಿಶೋನ್ ಲಾರೆನ್ಸ್.‌‌

ಬಾಲಕಿಯರು: ಪ್ರಥಮ: ಸ್ಫೂರ್ತಿ ದ್ವಿತೀಯ: ಶ್ರೀರಕ್ಷ ಎಂ.

10ರಿಂದ 20 ವರ್ಷ ವಿಭಾಗ:

ಪ್ರಥಮ: ಸುನೀಲ್, ದ್ವಿತೀಯ: ರಕ್ಷಣ್ ಜಿ.ರಾವ್.
ಹುಡುಗಿಯರ ವಿಭಾಗ: ಪ್ರಥಮ: ದಿಶಾ, ದ್ವಿತೀಯ: ವಿಭಾ ನಾಯಕ್.

20ರಿಂದ 40 ವರ್ಷ ವಿಭಾಗ:

ಪ್ರಥಮ: ಅಭಿಷೇಕ್, ದ್ವಿತೀಯ: ಸಂತೋಷ್ ಕುಮಾರ್.
ಯುವತಿಯರ ವಿಭಾಗ: ಪ್ರಥಮ: ಅನನ್ಯಾ ಭಟ್, ದ್ವಿತೀಯ: ಕಾವ್ಯಶ್ರೀ.

40 ವರ್ಷದಿಂದ ಮೇಲ್ಪಟ್ಟು:

ಪುರುಷರು: ಪ್ರಥಮ: ಭಗೀರಥ್ ನಾಯಕ್, ದ್ವಿತೀಯ: ಗೋಡ್ವಿನ್ ಸ್ಟೀಫನ್ ಲೂಯಿಸ್.

ಮಹಿಳೆಯರು: ಪ್ರಥಮ: ಲಲಿತಾ ನೆರಿಯ, ದ್ವಿತೀಯ: ಮಮತಾ ವಿ.ಭಟ್.

 

 

ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಪ್ರಥಮ: 10,000, ದ್ವಿತೀಯ: 5,000 ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಒಟ್ಟು ಮೂರು ಹಂತದಲ್ಲಿ ತೀರ್ಪುಗಾರಿಕೆ ನಡೆದಿದ್ದು, ಒಟ್ಟು 15 ಮಂದಿ ತೀರ್ಪುಗಾರರು ಸ್ಪರ್ಧಿಗಳ ಹಾಡುಗಳಿಗೆ ತೀರ್ಪು ನೀಡಿದ್ದರು. ಅಂತಿಮ ಹಂತದಲ್ಲಿ ಖ್ಯಾತ ಗಾಯಕರಾದ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಜೀ ಕನ್ನಡ ಸರಿಗಮಪ ಜ್ಯೂರಿ ಸದಸ್ಯೆ ಮಾಲಿನಿ ಕೇಶವ ಪ್ರಸಾದ್ ತೀರ್ಪು ನೀಡಿದ್ದರು.
ರಾಜ್ಯಾದ್ಯಂತ 5,000 ಕ್ಕೂ ಮಿಕ್ಕಿ, ಬೆಳ್ತಂಗಡಿ ತಾಲೂಕಿನಿಂದಲೇ 3,500 ಮಂದಿ ಸ್ಪರ್ಧಿಗಳು ಭಾಗವಹಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ‌ ರೆಕಾರ್ಡ್ ಪ್ರಶಸ್ತಿಗೆ ಭಾಜನವಾಗಿತ್ತು.
ಸ್ಪರ್ಧೆಯ ಸಂಯೋಜಕರಾಗಿ ಸಿನಿಮಾ ನಿರ್ದೇಶಕ ಸ್ಮಿತೇಶ್ ಬಾರ್ಯ, ಪ್ರಶಾಂತ್ ಶೆಟ್ಟಿ ಕರಂಬಾರು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಹಾಗೂ ದಿನೇಶ್ ಕೋಟ್ಯಾನ್ ಸಹಕರಿಸಿದ್ದರು.
ಸ್ಪರ್ಧೆಯ ಆಯೋಜಕ‌‌ರಾದ, ಶಾಸಕ ಹರೀಶ್ ಪೂಂಜ ಮಾತನಾಡಿ, ಯುವ ಮತ್ತು ಹಿರಿಯ ಪ್ರತಿಭೆಗಳನ್ನು ಮುಂದೆ ತರುವ ಪ್ರಯತ್ನವನ್ನು ನಾವು ಮಾಡಿದ್ದೆವು. ಈ ಸ್ಪರ್ಧೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇಂತಹ ಪ್ರಯತ್ನ ನಡೆದದ್ದು ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಎಂದರು.

 

 

 ಪುತ್ತೂರು ಜಗದೀಶ್ ಆಚಾರ್ಯ ತಂಡದಿಂದ ಗಾನಸುಧೆ:ಹಾಡು ಹಾಡಿ ರಂಜಿಸಿದ ಶಾಸಕ ಹರೀಶ್ ಪೂಂಜ

ಖ್ಯಾತ ಗಾಯಕ ಪುತ್ತೂರು ಜಗದೀಶ್ ಆಚಾರ್ಯ, ಖ್ಯಾತ ಗಾಯಕಿ ಮಾಲಿನಿ‌ ಕೇಶವ ಪ್ರಸಾದ್ ತಂಡದವರು ಹಾಗೂ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ದೇಶ ಭಕ್ತಿಗೀತೆಯನ್ನು ಹಾಡುವ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು ಅದಲ್ಲದೆ ಶಾಸಕ ಹರೀಶ್ ಪೂಂಜ ಕೂಡ ಹಾಡೊಂದನ್ನು ಹಾಡುವ ಮೂಲಕ ತಾನೂ ಕೂಡ ಉತ್ತಮ ಹಾಡುಗಾರ ಎಂಬುವುದನ್ನು ನಿರೂಪಿಸಿದರು.
ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಸದಸ್ಯ ಲೋಕೇಶ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರು, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬಂಗಾಡಿ ಸಿ.ಎ.ಬ್ಯಾಂಕಿನ ಅಧ್ಯಕ್ಷ ಹರೀಶ್ ಸಾಲ್ಯಾನ್, ಉದ್ಯಮಿ ರಾಜೇಶ್ ಪೈ ಉಜಿರೆ, ಮತ್ತಿತರರು ಉಪಸ್ಥಿತರಿದ್ದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

 

 

ಆನ್ ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಡೆದ ಭಕ್ತಿ ರಸಮಂಜರಿಯಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಅವರ ತಂಡದಲ್ಲಿ ಕೀಬೋರ್ಡ್ ನಲ್ಲಿ ಗುರು ಮಂಗಳೂರು, ರಿದಂ ನಲ್ಲಿ ವಾಮನ ಕುಮಾರ್, ತಬಲದಲ್ಲಿ ಅಶೋಕ್ ಕಾಸರಗೋಡು, ಗಿಟಾರ್ ನಲ್ಲಿ ಶರತ್ ಹಳೆಯಂಗಡಿ ಹಾಗೂ ಕೊಳಲು ವಾದನದಲ್ಲಿ ಅಭಿಷೇಕ್ ಸಹಕರಿಸಿದರು.ಇವರಿಗೆ ಸ್ವೀಕೃತ ಹರೀಶ್ ಪೂಂಜ ಸ್ಮರಣಿಕೆ ನೀಡಿ ಗೌರವಿಸಿದರು. ಅಭೂತ ಪೂರ್ವ ಅನ್ ಲೈನ್ ದೇಶ ಭಕ್ತಿ ಗೀತೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿಜೇತರಾದವರಿಗೆ ಹಾಗೂ ಕಾರ್ಯಕ್ರಮ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ಸಹಕಾರ ನೀಡಿದ ಪ್ರಶಾಂತ್ ಶೆಟ್ಟಿ ಕರಂಬಾರು, ಅನೀಶ್ ಅಮೀನ್ ,ಸ್ಮಿತೇಶ್ ಬಾರ್ಯ, ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಾಲೂಕಿನ ಶಾಸಕನ ನೆಲೆಯಲ್ಲಿ ಧನ್ಯವಾದಗಳನ್ನು ಶಾಸಕ ಹರೀಶ್ ಪೂಂಜ ಸಲ್ಲಿಸಿದರು.

 

ಬಹುಮಾನ ಗೆದ್ದ ನಗದನ್ನು ದೇಣಿಗೆ ನೀಡಿದ ವಿಜೇತೆ

ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗೆದ್ದ  ಮಮತ. ವಿ. ಭಟ್  ತನಗೆ ಬಂದ್ದ ದ್ವಿತೀಯ ಬಹುಮಾನದ ನಗದು ರೂ 5000 ವನ್ನು ಶಾಸಕರ ಸಮ್ಮುಖದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ದೇಣಿಗೆ ನೀಡುವುದಾಗಿ ಘೋಷಿಸಿದರು.

 

error: Content is protected !!