ಶ್ರೇಷ್ಠವಾದ ಗುರು ಪರಂಪರೆ ಹೊಂದಿರುವ ದೇಶ ಭಾರತ:ಬೆಳ್ತಂಗಡಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ : ಸಾಧಕ ಶಿಕ್ಷಕರು, ವಿಧ್ಯಾರ್ಥಿಗಳು ,ನಿವೃತರಿಗೆ ಗೌರವಾರ್ಪಣೆ.

 

 

 

ಬೆಳ್ತಂಗಡಿ: ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.
ಶಿಕ್ಷಕ ತನ್ನ ಧರ್ಮ ಮರೆತರೆ ನಮ್ಮ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ, ನಮ್ಮ ದೇಶದಲ್ಲಿ ಇರುವ ಗುರು ಪರಂಪರೆ ಶಿಕ್ಷಣ ಪದ್ದತಿ ಬೇರೆ ಎಲ್ಲೂ ಇಲ್ಲ. ಈ ರೀತಿಯ ಶಿಕ್ಷಣ ಇತಿಹಾಸ ನೀಡಿರುವುದು ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.ಅವರು ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ತಾಲೂಕು ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳ್ತಂಗಡಿ ಪಟ್ಟಣ‌ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

 

 

ಆಧ್ಯಾತ್ಮಿಕ ಚಿಂತನೆಯನ್ನು ನೀಡಿರುವುದು ನಮ್ಮ ದೇಶ ಮತ್ತು ನಮ್ಮ ಶಿಕ್ಷಕರು.ಗ್ರಾಮೀಣ ಪ್ರದೇಶದ ತಾಲೂಕಿನಲ್ಲಿ ಎಳನೀರು ಶಾಲೆಯ ಶಿಕ್ಷಕ ರವೀಂದ್ರ ಮಲವಂತಿಗೆ ಕಜಕ್ಕೆ ಶಾಲೆಯ ಗ್ರಾಮದ ಕುಮಾರಸ್ವಾಮಿ, ಮರೋಳಿ ಗ್ರಾಮದ ಕೂಕ್ರಬೆಟ್ಟು ಶಾಲೆಯ ಸುಫಲಾ ಇವರು ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ

ಮಾದರಿಯಾಗಿದ್ದಾರೆ‌ ಎಂದ ಅವರು, ನಾನು ಈ ಹಂತದಲ್ಲಿ ಇರಲು‌ ನಾನು ಕಲಿತ ಶಾಲೆಯ ಶಿಕ್ಷಕರೇ ಪ್ರಮುಖ ‌ಕಾರಣವಾಗಿದ್ದಾರೆ ಎಂದು ಹೇಳಿದರು.‌
ಮುಖ್ಯ ‌ಅತಿಥಿ, ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್ ಮಾತನಾಡಿ, ಇಡೀ‌ ದೇಶಕ್ಕೆ ಶಿಕ್ಷಕರು ಹೇಗಿರಬೇಕೆಂದು ಮಾದರಿಯಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಕೇವಲ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ರಾಜಕೀಯ ಮುಖವಾಡ ಧರಿಸದ ವ್ಯಕ್ತಿತ್ವ ರಾಧಾಕೃಷ್ಣನ್ ಅವರದ್ದು.‌ ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು‌ ಬೇಕಾದರೂ ಮಾಡಬಹುದು ಎಂದು ಇಡೀ ದೇಶಕ್ಕೆ ತೋರಿಸಿದರು. ಗುರು ಶಿಷ್ಯರ ಸಂಬಂಧ ಹೇಗಿರಬೇಕು ಎಂದು ರಾಧಾಕೃಷ್ಣನ್ ತೋರಿಸಿಕೊಟ್ಟರು ಎಂದರು.

 

 

ಪ್ರಾಸ್ತಾವಿಕವಾಗಿ‌ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್., ಶಿಕ್ಷಕರು ಸಮಾಜ ತಿದ್ದುವ ಮಹತ್ಕಾಕಾರ್ಯ ಮಾಡಿದ್ದಾರೆ. ಅಡಿಯಿಂದ ಮುಡಿಯವರೆಗೆ ವಿದ್ಯಾರ್ಥಿಯನ್ನು ತಿದ್ದುವ ಕೆಲಸ‌ ಮಾಡುವುದು ಶಿಕ್ಷಕರು, ಈ ಸಮಯದಲ್ಲಿ ಏಕಲವ್ಯ ಮತ್ತು ಅರ್ಜುನ ಉದಾಹರಣೆ. ನೀಡಿ ಗುರಿಯನ್ನು ಸಾಧಿಸಲು ಗುರುಗಳು ಸಹಕರಿಸುತ್ತಾರೆ ಎಂದರು.

ಪಟ್ಟಣ ಪಂಚಾಯಿತಿ ರಜನಿ ಕುಡ್ವ ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಶಿಕ್ಷಕರ ಸಂಘ, ಶಿಕ್ಷಕರ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರಕಾರಿ ನೌಕರ ಸಂಘದ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.

 

 

ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತ ಯಾಕೂಬ್ ಎಸ್., ಜಿಲ್ಲಾ ಪ್ರಶಸ್ತಿ ಶಿಕ್ಷಕ ಪುರಸ್ಕೃತರಾದ ಅಕ್ಕಮ್ಮ, ಸಬೀನಾ, ಚೈತ್ರಪ್ರಭಾ ಅವರನ್ನು ಹಾಗೂ ಮೂವತ್ತೊಂದು ಮಂದಿ ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.ನಿವೃತ್ತ ಶಿಕ್ಷಕರಾದ ಪ್ರಪುಲ್ಲ, ಸರೋಜಿನಿ, ಗೀತಾ ಕುಮಾರಿ ಕೆ., ಜ್ಯೋತಿ ಎಮ್.ಎಸ್., ವಿಮಲಾ ಕುಮಾರಿ ಕೆ., ರೂಪಾವತಿ ಪಿ.ಎ., ವಾರಿಜಾ ಪಿ.,‌ ಚಂದ್ರಿಕಾ ಎಮ್., ಜಯಭಾರತಿ, ಕಮಲ‌‌ ಕೆ., ಫ್ಲೋಸಿ ಎಮ್., ತರೆಜಾ ಡಯಾಸ್, ಜೆಸಿಂತಾ, ರಾಜೇಶ್ವರಿ,‌ ಅಜಿತ ಕುಮಾರಿ, ಅನಂತ್ ರಾಮ್‌ ನೂರಿತ್ತಾಯ, ವಿಷ್ಣುಮೂರ್ತಿ, ಜೆರಾಲ್ಡ್ ಫೆರ್ನಾಂಡೀಸ್, ವಿಶ್ವನಾಥ್ ಶೆಟ್ಟಿ, ಚಂದ್ರಿಕಾ, ಕರುಣಾಕರ್ ಜೆ. ಉಚ್ವಿಲ್, ಹಿಲ್ಡಾ ಮೋರಾಸ್,‌ ಚಿನ್ನಯ ಗೌಡ, ಫಿಲೋಮಿನಾ ವಿ.ಪಿ., ಶಂಕರ ದೇವಾಡಿಗ, ಸಂಜೀವ ನಾಯ್ಕ, ಜಯಭಾರತಿ,‌ ವಸಂತ ಭಟ್, ಉದಯಕುಮಾರ್ ಶೆಟ್ಟಿ, ಷಣ್ಮುಗಪ್ಪ ಪೂಜಾರಿ, ಚೈತ್ರ ಪ್ರಭಾ ಶ್ರೀ ಶಾಂ, ಸಬೀನಾ, ಅಕ್ಕಮ್ಮ, ಯಕೂಬ್ ಎಸ್., ಸ್ಟಾನಿ ಪಿಂಟೋ, ಅವರನ್ನು ಗೌರವಿಸಲಾಯಿತು.
ಪ್ರಸ್ತುತ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಯುಕ್ತ ಡಿ.ಪ್ರಭು, ಹರ್ಷಿತಾ ಹಾಗೂ ಸರಿತಾ ಅವರನ್ನು ಗೌರವಿಸಲಾಯಿತು.

ಜಿ.ಪಂ.‌ಮಾಜಿ ಸದಸ್ಯ ರಾಜಶೇಖರ ಅಜ್ರಿ ಅವರು ದತ್ತಿ ನಿಧಿ ಹಸ್ತಾಂತರಿಸಿದರು.‌
ಆರಂಭದಲ್ಲಿ ಗಣ್ಯರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಿಧನ‌ ಹೊಂದಿದ ತಾಲೂಕು ವ್ಯಾಪ್ತಿಯ ಶಿಕ್ಷಕರ ‌ಸ್ಮರಣಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ, ತಾ.ಪಂ.‌ಇಒ ಕುಸುಮಾಧರ್ ಬಿ.‌ಸ್ವಾಗತಿಸಿದರು.
ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್, ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ್ ಸವಣಾಲು ಹಾಗೂ ರಮೇಶ್ ಪೈಲಾರ್ ಅವರು ರಾಷ್ಟ್ರ, ರಾಜ್ಯ ಹಾಗೂ ತಾಲೂಕು ಉತ್ತಮ ಶಿಕ್ಷಕರ ಪುರಸ್ಕೃತ ಪರಿಚಯ, ನಿವೃತ್ತ ಶಿಕ್ಷಕರ ಪರಿಚಯಿಸಿದರು.‌ ಬಿ.ಆರ್.ಪಿ.
ಸಂಯೋಜಕ ಮೋಹನ್ ಕುಮಾರ್ ಸಂದೇಶ ವಾಚಿಸಿದರು. ಪುಂಜಾಲಕಟ್ಟೆ ಕ. ಪಬ್ಲಿಕ್ ಸ್ಕೂಲ್ ಶಿಕ್ಷಕ ಧರಣೇಂದ್ರ ಕೆ. ಕಾರ್ಯಕ್ರಮ ನಿರ್ವಹಿಸಿ, ಶಿಕ್ಷಕರ ದಿನಾಚರಣೆ ಸಮಿತಿ ನೋಡೆಲ್ ಅಧಿಕಾರಿ ಭುವನೇಶ್ ಜೆ.‌ ವಂದಿಸಿದರು.

error: Content is protected !!