60 ಲಕ್ಷ ರೂ.‌ ವೆಚ್ಚದ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ:

 

 

ಬೆಳ್ತಂಗಡಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 60 ಲಕ್ಷ ರೂ.‌ವೆಚ್ಚದಲ್ಲಿ ಬೆಳ್ತಂಗಡಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಬೆಳ್ತಂಗಡಿ ಕೃಷಿ ಇಲಾಖೆ ಆವರಣದಲ್ಲಿ ನಡೆಯಿತು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 60 ಲಕ್ಷ ರೂ.‌ವೆಚ್ಚದಲ್ಲಿ ಸುಸಜ್ಜಿತವಾದ ಗೋಡೌನ್, ಕಚೇರಿ, ಸಭಾಂಗಣ ಕೃಷಿ ಅಧಿಕಾರಿಗಳ ಕಚೇರಿ ಈ ನೂತನ‌ ಕಟ್ಟಡದಲ್ಲಿರಲಿದೆ. ಹಳೆಯ ಕಟ್ಟಡದಲ್ಲಿ‌ ಗೋಡಾನ್ ಇದ್ದು, ಸರಕಾರದಿಂದ ಬರುವ ಸವಲತ್ತುಗಳು, ಕೃಷಿ ಪರಿಕರಗಳು, ಕೃಷಿ ಉಪಕರಣಗಳನ್ನಿಡಲು ಹೊಸ ದಾಸ್ತಾನು ಕಟ್ಟಡದ ನಿರ್ಮಾಣ ಆಗುತ್ತಿದೆ.‌ ಶೀಘ್ರವಾಗಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

 

 

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ‌ ಕುಡ್ವ, ಪುತ್ತೂರು ಉಪ ವಿಭಾಗ ಉಪ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್, ಬೆಳ್ತಂಗಡಿ ಕೃಷಿ‌ ಇಲಾಖೆ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ಕೃಷಿ ಅಧಿಕಾರಿ‌ ಚಿದಾನಂದ ಎಸ್ ಹೂಗಾರ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿ‌ ನಾರಾಯಣ ಪೂಜಾರಿ, ಕೃಷಿ‌ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!