ರಾಜ್ಯದಲ್ಲೇ‌ ಬೆಳ್ತಂಗಡಿ ತಾಲೂಕಿನಲ್ಲಿ ಯಶಸ್ವಿ ಲಸಿಕಾ‌ ಅಭಿಯಾನ: ಗ್ರಾಮ ಮಟ್ಟದಲ್ಲಿ ಯಶಸ್ವಿ ಲಸಿಕೆ ಹಂಚಿಕೆ: ಶಾಸಕ ಹರೀಶ್ ಪೂಂಜ‌ ಹೇಳಿಕೆ: ಲಾಯಿಲ ಗ್ರಾ.ಪಂ.ನಿಂದ ಆಯೋಜಿಸಲಾಗಿದ್ದ ಉಚಿತ ಲಸಿಕಾ ಅಭಿಯಾನ ಉದ್ಘಾಟನೆ

 

 

ಬೆಳ್ತಂಗಡಿ: ತಾಲೂಕಿನ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಈ ಲಸಿಕಾ ಅಭಿಯಾನ ರಾಜ್ಯದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ರಾಜ್ಯದಲ್ಲೇ ಮೊದಲು. ಇದಕ್ಕೆ  ಗ್ರಾಮ ಪಂಚಾಯಿತಿಗಳ ಆಡಳಿತ ವರ್ಗ,  ಆರೋಗ್ಯ  ಇಲಾಖೆಯ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಕೊರೊನಾ ಮೊದಲ ಅಲೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಚೇತರಿಕೆಯನ್ನು ಕಾಣಲು ಅದೆಷ್ಟೋ ಸಮಯ ಕಂಡಾಗಲೂ ಈ ದೇಶದಲ್ಲಿ ಕೊರೊನಾದ ಮೊದಲನೇ ಅಲೆಯನ್ನು ವೇಗವಾಗಿ ಹಾಗೂ ಕ್ಷಿಪ್ರವಾಗಿ ಕ್ಷೀಣಿಸುವಂತೆ ಮಾಡಲು ಪ್ರಧಾನಿಯವರ ದಿಟ್ಟತನದ ನಿರ್ಧಾರಗಳು ಕಾರಣ ಎಂಬುವುದನ್ನು ಜಗತ್ತು ಒಪ್ಪಿಕೊಂಡಿದೆ. ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಅಮ್ಲಜನಕ ಘಟಕಗಳನ್ನು ದೇಶದ ವಿವಿಧ ಕಡೆಗಳಲ್ಲಿ ಒಂದೇ ವರುಷಗಳಲ್ಲಿ ಸ್ಥಾಪಿಸಿ ಅಮ್ಲಜನಕದ ಕೊರತೆ ನೀಗಿಸಿದ್ದಲ್ಲದೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ಕೃತಕ ಅಮ್ಲಜನಕ ರಪ್ತು ಮಾಡುವ ಮಟ್ಟಿಗೆ ಈ ದೇಶ ಬೆಳೆದು ನಿಂತಿದೆ. ರಾಜ್ಯ ಸರ್ಕಾರವೂ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಖಾಲಿ ಇದ್ದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳನ್ನು ನೇಮಕಾತಿ ಮಾಡಿಸಿ ಉತ್ತಮವಾದ ಆರೋಗ್ಯ ಸೇವೆ ನೀಡುವಂತೆ ಮಾಡಿದೆ ಎಂದರು.

 

ಬೆಳ್ತಂಗಡಿ ಕೋವಿಡ್ ಕೇರ್ ಸೆಂಟರ್ ಬಗ್ಗೆ ಸಚಿವರೊಬ್ಬರು ಮೆಚ್ಚುಗೆ ವ್ಯಕ್ತ ಪಡಿಸಿ, ಕೋವಿಡ್ ಕೇರ್ ಸೆಂಟರ್ ಯಾವ ರೀತಿಯಲ್ಲಿ ಇರಬೇಕು ಎಂಬುವುದನ್ನು ಬೆಳ್ತಂಗಡಿಯ ಕೇರ್ ಸೆಂಟರ್ ಅನ್ನು ನೋಡಿ ತಿಳಿದುಕೊಳ್ಳಬೇಕು ಎಂದು ಅನೇಕ ಕಾರ್ಯಕ್ರಮಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಇದು ನಮಗೆ ಹೆಮ್ಮೆ. ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ತಾಲೂಕಿನ ವಿವಿಧ ಆಸ್ಪತ್ರೆಗಳು ಇತರ ರೋಗಿಗಳ ಹಾಗೂ ಉಚಿತ ಹೆರಿಗೆ ಮಾಡಿಸುವ ಮೂಲಕ ಸಹಕಾರ ನೀಡಿದ್ದರಿಂದ ಕೊರೊನಾ ಹತೋಟಿಗೆ ತರಲು ಸಾಧ್ಯವಾಯಿತು ಎಂದ ಶಾಸಕರು ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ  ತಾಲೂಕಿನಲ್ಲಿ “ಶ್ರಮಿಕ ಸ್ಪಂದನಾ” ಮೂಲಕ ಅದೆಷ್ಟೋ ಕೊರೊನಾ ಸೋಂಕಿತರ ಸೇವೆಗಾಗಿ ತಾಲೂಕಿನಾದ್ಯಂತ ರಾತ್ರಿ ಹಗಲು ಉಚಿತವಾಗಿ  ಸಂಚಾರಿಸಿದ ಅಂಬುಲೆನ್ಸ್  ಸೇವೆಗಳು ಅಲ್ಲದೆ  ಇನ್ನಿತರ ತುರ್ತು  ಸೇವೆಗಳ ಮೂಲಕ  ಉತ್ತಮ ಆರೋಗ್ಯ ಸೇವೆ ನೀಡಲಾಗಿದೆ ಎಂದರು. .ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಗ್ರಾ.ಪಂ. ಅಧ್ಯಕ್ಷೆ ಆಶಾ ಬೆನಡಿಕ್ಟ ಸಲ್ಡಾನ,ವಹಿಸಿದ್ದರು ಉಪಾಧ್ಯಕ್ಷ ಗಣೇಶ್ ಲಾಯಿಲಾ,ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾ ಮಧು, ಉಜಿರೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಕ್ಷತಾ, ತಾ.ಪಂ. ಮಾಜಿ ಸದಸ್ಯ ಸುಧಾಕರ್ ಬಿ. ಎಲ್. ಉಪಸ್ಥಿತರಿದ್ದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಪ್ರಸ್ತಾವಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು, ಸದಸ್ಯ ಅರವಿಂದ ಲಾಯಿಲ ಧನ್ಯವಾದವಿತ್ತರು   ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

error: Content is protected !!