ಉದ್ಯಮ, ಉದ್ಯಮಿಗಳ ಕುಂದುಕೊರತೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ರಚನೆ ಕುರಿತು ‌ಸೆ.3ರಂದು ಸಭೆ: ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ನಾಯಕ್ ಹೇಳಿಕೆ

×

 

ಬೆಳ್ತಂಗಡಿ: ವ್ಯಾಪಾರ ಮತ್ತು ಉದ್ಯಮಗಳ ಹಿತಸಂರಕ್ಷಣೆ ಹಾಗೂ ವಿವಿಧ ಇಲಾಖೆ/ಅಧಿಕಾರಿ/ ಜನಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಿ, ಉದ್ಯಮ ಮತ್ತು ಉದ್ಯಮಿಗಳ ಕುಂದುಕೊರತೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ಬೆಳ್ತಂಗಡಿ ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ರಚನೆಯ ಅಗತ್ಯವಿದೆ. ಈ ಕುರಿತು ಸೆ. 3ರಂದು ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿ ಚರ್ಚ್ ರೋಡ್ ಸಿ.ವಿ.ಸಿ. ಹಾಲ್ ನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಪ್ರಮೋದ್ ಆರ್. ನಾಯಕ್ ತಿಳಿಸಿದರು.
ಅವರು ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಾರಂಭದಲ್ಲಿ ಬೆಳ್ತಂಗಡಿ, ಲಾಯ್ಲ, ಮದ್ದಡ್ಕ, ಗುರುವಾಯನಕೆರೆ, ಉದ್ಯಮಿ/ವರ್ತಕರು ಜೊತೆಗೂಡಿ ಒಂದು ಸದೃಡವಾದ ಸಂಘಟನೆ ಹುಟ್ಟುಹಾಕಿ ನಂತರ ತಾಲೂಕಿನಾದ್ಯಂತ ಸಂಘಟನೆಗಳನ್ನು ರಚಿಸಲಿದ್ದೇವೆ. ಇದರ ಮೂಲ ಉದ್ದೇಶ, ತಾಲೂಕಿನಲ್ಲಿ ಉದ್ಯಮಸ್ನೇಹಿ ವಾತಾವರಣ ಕಲ್ಪಿಸುವುದು, ಉದ್ಯಮಿಗಳಿಗೆ ಅಗತ್ಯ ಮಾಹಿತಿ ಮತ್ತು ಸಹಕಾರದ ವ್ತವಸ್ಥೆ, ವೃತ್ತಿ ಕೌಶಲ್ಯ ಹೆಚ್ಚಿಸಲು ಕಾರ್ಯಾಗಾರ ಆಯೋಜನೆ, ಬದಲಾದ ವ್ಯಾಪಾರ ಸನ್ನಿವೇಶ ಎದುರಿಸಲು ತರಬೇತಿ ಮತ್ತು ಬಂಡವಾಳ ಹೂಡಿಕೆಗೆ ಮಾರ್ಗದರ್ಶನ ಸದಸ್ಯರಿಗೆ ಮತ್ತು ಕುಟುಂಬಕ್ಕೆ ಅಪತ್ಕಾಲದಲ್ಲಿ ಸಹಾಯ, ಸದಸ್ಯರಿಗೆ ಕಾಲ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆ, ವ್ಯಾಪಾರೋದ್ಯಮಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರ, ಸಮಾಜಕ್ಕೆ ಬೇಕಾದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಯುವ ಜನತೆಗೆ ವೃತ್ತಿ ಶಿಕ್ಷಣ ಮತ್ತು ಉದ್ಯಮ ಶೀಲತೆಗೆ ಅಗತ್ಯ ಮಾರ್ಗದರ್ಶನ, ಉದ್ಯಮಿ/ ವ್ಯಾಪಾರಿ ಬಂಧುಗಳ ಸಂಕಷ್ಟಕ್ಕೆ ಸ್ಪಂದಿಸುವುದು ಇತ್ಯಾದಿ ವಿಷಯಗಳ ಕುರಿತು ಕಾರ್ಯಕ್ರಮ ನಡೆಸುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಡಿ. ಜಯರಾಮ್, ಯಶವಂತ ಪಟವರ್ಧನ್, ರೋನಾಲ್ಡ್ ಲೋಬೋ, ಯೇಸುದಾಸ್ ಉಪಸ್ಥಿತರಿದ್ದರು.

error: Content is protected !!