ವಿದ್ಯಾವಂತರು ವಿನಯದಿಂದ ಕೆಲಸ ಮಾಡಿದರೆ ಉನ್ನತಿ ಪ್ರಾಪ್ತಿ: ಕನ್ಯಾಡಿ ಶ್ರೀ

 

ಧರ್ಮಸ್ಥಳ: ನಮ್ಮ ಧರ್ಮದಲ್ಲಿ ಹೆಜ್ಜೆ-ಹೆಜ್ಜೆಗೂ ಬದುಕಿನ ವಿಶ್ಲೇಷಣೆ ಇದೆ. ಅದನ್ನು ಹೆಚ್ಚಿನ ಜಾಗೃತಿ ಮೂಲಕ ಇನ್ನಷ್ಟು ಎತ್ತರಕ್ಕೇರಿಸುವ ಕೆಲಸಕ್ಕೆ ನಾವು ಕೈಜೋಡಿಸಬೇಕು. ಲೋಕದಲ್ಲಿ ಬಾಳುವಾಗ ರಜೋಗುಣ ಇದ್ದರೂ ಮಿತಿ ಮೀರಬಾರದು ನಾನು ಎಂಬ ಅಹಂಭಾವ ನಮ್ಮನ್ನು ಬಂಧಿಸುತ್ತದೆ ಈ ಬಂಧನದಿಂದ ಹೊರಬಂದು ನಮ್ಮ ಹುದ್ದೆಗೆ ತಕ್ಕ ನ್ಯಾಯ ಸಲ್ಲಿಸುವ ಕೆಲಸ ಮಾಡಿದರೆ ಲೋಕಕಲ್ಯಾಣ ವಾಗುವುದು.ವಿದ್ಯೆಗೆ ವಿಶೇಷ ಗೌರವವಿದೆ. ವಿದ್ಯಾವಂತರು ವಿನಯದಿಂದ ಕೆಲಸ ಮಾಡಿದರೆ ಉನ್ನತಿ ಪ್ರಾಪ್ತಿಯಾಗುತ್ತದೆ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ದೇವರಗುಡ್ಡ ಶ್ರೀ ಗುರುದೇವ ಮಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ 40ನೇ ದಿನವಾದ ಮಂಗಳವಾರ ಆಶೀರ್ವಚನ ನೀಡಿದರು.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು
ಪಾದಪೂಜೆ ನೆರವೇರಿಸಿದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.

ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಜಗದೀಶ್ ದಂಪತಿ ಪಾದಪೂಜೆ ನೆರವೇರಿಸಿದರು.

ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್, ವೈದ್ಯ ಪ್ರದೀಪ ನಾವೂರು, ವಿ.ಎಚ್. ಪಿ. ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ತಾಲೂಕು ಕಾರ್ಯಾಧ್ಯಕ್ಷ ಡಾ. ಎಂ.ಎಂ. ದಯಾಕರ್, ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಮೂಡುಬಿದ್ರೆ ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಮೂಡುಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಸು ಪೂಜಾರಿ, ಪುತ್ತಿಗೆ ಗ್ರಾ.ಪಂ. ಸದಸ್ಯ ಮುರಳೀಧರ, ಯುವವಾಹಿನಿ ಮಹಿಳಾ ಘಟಕ ಅಧ್ಯಕ್ಷೆ ಸುಜಾತ ಎ. ಪೂಜಾರಿ,
ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಹರಿದಾಸ್ ಗಾಂಭೀರ್, ನಿರ್ದೇಶಕ ಪ್ರೀತಂ,
ಧರ್ಮಸ್ಥಳ ಗ್ರಾ.ಪಂ.‌ಮಾಜಿ ಅಧ್ಯಕ್ಷ ಚಂದನ್ ಕಾಮತ್, ಗುರುದೇವ ಮಠ ಟ್ರಸ್ಟಿ ತುಕರಾಮ್ ಸಾಲಿಯಾನ್,
ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಪದಾಧಿಕಾರಿಗಳಾದ ಪ್ರಶಾಂತ್ ಪಾರೆಂಕಿ, ಸದಾನಂದ ಪೂಜಾರಿ ಉಂಗಿಲಬೈಲು, ಶಶಿಧರ ಎಂ ಕಲ್ಮಂಜ, ಗಣೇಶ್ ಗೌಡ, ಸೀತಾರಾಮ ಬೆಳಾಲು, ರತ್ನಾಕರ ಬುಣ್ಣನ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!