ಬೆಳ್ತಂಗಡಿ: ‘ಕ್ರೀಡಾ ಭಾರತಿ’ ಬೆಳ್ತಂಗಡಿ ತಾಲೂಕು ಘಟಕ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆನ್ ಲೈನ್ ಪ್ರಬಂಧ ಸ್ಪರ್ಧೆ ವಿಜೇತರಿಗೆ ಶ್ರಮಿಕ ಕಚೇರಿ ಬಳಿ ಶಾಸಕ ಹರೀಶ್ ಪೂಂಜ ಬಹುಮಾನ ವಿತರಣೆ ಮಾಡಿದರು.
18 ವಯೋಮಾನದೊಳಗಿನವರಿಗೆ
“ಮುಂದಿನ ಒಲಂಪಿಕ್ಸ್ ಗಳ ಸಾಧನೆಗೆ ದೇಶದಲ್ಲಿ ಕ್ರೀಡಾನೀತಿ ಹೇಗಿರಬೇಕು” ಎಂಬ ವಿಷಯದಲ್ಲಿ
ಪೂರ್ವಿ ಕೆ. ಆರ್. ಶಿರ್ಲಾಲು ಪ್ರಥಮ, ಅನನ್ಯ ಕಾಶಿಪಟ್ಣ ದ್ವಿತೀಯ, ಮೌಲ್ಯ ನಾಯಕ್ ಮುಂಡಾಜೆ ತೃತೀಯ ಸ್ಥಾನ ಪಡೆದರು. 14ವಯೋಮಾನದ ವಿಭಾಗದ “ರಾಷ್ಟ್ರೀಯ ಕ್ರೀಡಾ ದಿನಾಚರಣೆ” ವಿಷಯದಲ್ಲಿ ಆಶ್ಲೇಷ್ ಜೆ. ಎಸ್. ಗುರುವಾಯನಕೆರೆ ಪ್ರಥಮ, ಸೌಜನ್ಯ ಪಿಲ್ಯ ದ್ವಿತೀಯ, ದೀಪಾ ಸ್ವೀಡಲ್ ಕೊರ್ಡೆರೊ ಅಳದಂಗಡಿ ತೃತೀಯ ಸ್ಥಾನ ಪಡೆದರು.
14ವಯೋಮಾನ ಹಾಗೂ 18 ವಯೋಮಾನದೊಳಗಿನ ಎರಡು ವಿಭಾಗಗಳಲ್ಲಿ ಆನ್ ಲೈನ್ ಮೂಲಕ ಸ್ಪರ್ಧೆ ಏರ್ಪಡಿಸಿದ್ದು, ಒಟ್ಟು 250ಕ್ಕೂ ಹೆಚ್ಚು ಪ್ರಬಂಧಗಳು ವಾಟ್ಸಪ್ಪ್ ಮೂಲಕ ಬಂದಿದ್ದವು ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರೀಡಾ ಭಾರತಿ ತಾಲೂಕು ಘಟಕ ಅಧ್ಯಕ್ಷ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡಾ ಭಾರತಿ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಪ್ರಭಾಕರ ನಾರಾವಿ, ಕೋಶಾಧಿಕಾರಿ ಯುವರಾಜ ಅನಾರು, ದೈಹಿಕ ಶಿಕ್ಷಣ ಪರಿವೀಕ್ಷಕ ಭುವನೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಹಾಗೂ ಕ್ರೀಡಾ ಭಾರತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.