ಶೇ. 99.9ರಷ್ಟು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಉತ್ತೀರ್ಣ: ಫಲಿತಾಂಶ ಘೋಷಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಡುವೆ‌ ಎರಡು ದಿನಗಳ ಕಾಲ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆದಿದ್ದು, ಪರೀಕ್ಷೆಯ ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಈ ಬಾರಿ 8,76,453 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 99.9ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲದಲಿ ಘೋಷಣೆ ಮಾಡಿದರು. ‌

91ರಿಂದ-100 ಅಂಕದವರೆಗೆ = A ಗ್ರೇಡ್, 81-90 ಅಂಕ = A ಗ್ರೇಡ್, 71-80 ಅಂಕ = B ಗ್ರೇಡ್, 61-60 ಅಂಕ = B ಗ್ರೇಡ್, 51-60 ಅಂಕ= C ಗ್ರೇಡ್, 35-50 ಅಂಕಗಳಿಗೆ = C ಗ್ರೇಡ್ ನಂತೆ ಫಲಿತಾಂಶ ನೀಡಲಾಗಿದೆ. 4,70,161 ಬಾಲಕರು ಹಾಗೂ 4,10,282 ಬಾಲಕಿಯರು ಪರೀಕ್ಷೆ ಬರೆದಿದ್ದು ಒರ್ವ ಬಾಲಕಿ ಹೊರತುಪಡಿಸಿ ಎಲ್ಲರೂ ಪಾಸ್ ಆಗಿದ್ದಾರೆ. 1,28,951 ವಿದ್ಯಾರ್ಥಿಗಳು A+ ಗ್ರೇಡ್, 2,50,317 ವಿದ್ಯಾರ್ಥಿಗಳು A ಗ್ರೇಡ್, 2,87,684 ವಿದ್ಯಾರ್ಥಿಗಳು B ಗ್ರೇಡ್ ಪಡೆದುಕೊಂಡಿದ್ದಾರೆ. 1,13,610 ವಿದ್ಯಾರ್ಥಿಗಳು C ಗ್ರೇಡ್ ಪಡೆದುಕೊಂಡಿದ್ದಾರೆ. ಶೇ. 9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿ ಉತ್ತೀರ್ಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

error: Content is protected !!