‘ಕಂಚಿನ ವೀರರ’ ಜೊತೆ ಪ್ರಧಾನಿ ಮೋದಿ ಮಾತುಕತೆ: ಸಾಧಕರಿಗೆ ಶುಭಾಶಯ

 

ಟೋಕಿಯೊ/ನವದೆಹಲಿ: ಬರೋಬ್ಬರಿ 41 ವರ್ಷಗಳ ಬಳಿಕ ಇಂದು ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಬೀಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡಿ, ಹಾಕಿ ತಂಡದ ಸದಸ್ಯರಿಗೆ ಶುಭಾಶಯ ಕೋರಿದ್ದಾರೆ.

ಭಾರತ ಹಾಕಿ ತಂಡದ ಕ್ಯಾಪ್ಟನ್ ಮನ್ ಪ್ರೀತ್ ಸಿಂಗ್, ಕೋಚ್ ಗ್ರಹಾಂ ರೀಡ್ ಮತ್ತು ಸಹಾಯಕ ತರಬೇತುದಾರ ಪಿಯೂಷ್ ದುಬೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಜರ್ಮನಿ ವಿರುದ್ಧದ ಭಾರತದ ಪಂದ್ಯ ವೀಕ್ಷಣೆ ಮಾಡಲೆಂದು ಪ್ರಧಾನಿಯವರು ಇಂದು ಯೋಗವನ್ನು ಸ್ಕಿಪ್​ ಮಾಡಿದ್ದರು.

error: Content is protected !!